ಸುದ್ದಿ ಕಣಜ.ಕಾಂ | DISTRICT | GAJANUR DAM
ಶಿವಮೊಗ್ಗ: ತುಂಗಾ ನದಿ ಮೈದುಂಬಿ ಹರಿಯುತ್ತಿದ್ದು, ಗಾಜನೂರು ಜಲಾಶಯಕ್ಕೆ ಒಳಹರಿವು ಕೂಡ ಏರಿಕೆಯಾಗಿದೆ. ಸೋಮವಾರ ರಾತ್ರಿ ಹೊರಹರಿವಿನ (Outflow) 43,359 ಕ್ಯೂಸೆಕ್ಸ್ ಗೆ ಹೆಚ್ಚಿಸಲಾಗಿದೆ.
READ | ಗಾಜನೂರು ಡ್ಯಾಂನಲ್ಲಿ ಒಳಹರಿವು ಹೆಚ್ಚಳ, 10 ಗೇಟ್ ಓಪನ್, ಯಡೂರಿನಲ್ಲಿ ದಾಖಲೆಯ ಮಳೆ
ಡ್ಯಾಂನಿಂದ ನಿರಂತರ ನೀರು ಹೊರಬಿಡುತ್ತಿರುವುದರಿಂದ ಈಗಾಗಲೇ ತುಂಗಾ ನದಿ(tunga river) ಯು ಮೈದುಂಬಿ ಹರಿಯುತ್ತಿದೆ. ಕೋರ್ಪಾಳಯ್ಯನ ಮಂಟಪ ಮುಳುವುದಕ್ಕೆ ಕೆಲವೇ ಅಡಿಗಳು ಬಾಕಿ ಇದೆ. ಇದೇ ರೀತಿ ಹೊರಹರಿವಿನಲ್ಲಿ ಏರಿಕೆಯಾದರೆ ಮಂಟಪ ಮುಳುಗಲಿವೆ.
ಸೋಮವಾರ ಬೆಳಗ್ಗೆ ಹೊತ್ತಿಗೆ 10 ಕ್ರಸ್ಟ್ ಗೇಟ್ ಗಳನ್ನು ತೆರೆದು 22,900 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗಿತ್ತು. ಆದರೆ, ಚಿಕ್ಕಮಗಳೂರು (Chikkamagaluru) ಮತ್ತು ಶಿವಮೊಗ್ಗ(Shivamogga)ದಲ್ಲಿ ವರ್ಷಧಾರೆಯಿಂದಾಗಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದುಬರುತ್ತಿದೆ.