ಪೌರಕಾರ್ಮಿಕರ ಮುಷ್ಕರಕ್ಕೆ ಯುವ ಕಾಂಗ್ರೆಸ್ ಬಲ, ಉಗ್ರ ಹೋರಾಟದ ಎಚ್ಚರಿಕೆ

 

ಸುದ್ದಿ ಕಣಜ.ಕಾಂ | DISTRICT | YOUTH CONGRESS
ಶಿವಮೊಗ್ಗ: ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸದಿದ್ದರೆ ಉಗ್ರ ಸ್ವರೂಪದ ಹೋರಾಟ ಮಾಡುವುದಾಗಿ ಜಿಲ್ಲಾ ಯುವ ಕಾಂಗ್ರೆಸ್ (district youth congress) ಎಚ್ಚರಿಕೆ ನೀಡಿದೆ.
ಜಿಲ್ಲಾಧಿಕಾರಿ ಕಚೇರಿಯ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಪೌರ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಪೌರಕಾರ್ಮಿಕರು ರಾಜ್ಯದಾದ್ಯಂತ 1 ಜುಲೈ ರಿಂದ ಸ್ವಚ್ಛತಾ ಕಾರ್ಯ ಸ್ಥಗಿತ ಮಾಡಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು, ಈ ಮುಷ್ಕರದಿಂದ ರಾಜ್ಯದ ಎಲ್ಲ ನಗರ ಪ್ರದೇಶಗಳಲ್ಲಿ ನಾಲ್ಕು ದಿನಗಳಿಂದ ಕಸ ವಿಲೇವಾರಿಯಾಗದೆ ಕಸದ ರಾಶಿಗಳು ತುಂಬಿದ್ದು ನಗರವು ಗಬ್ಬು ನಾರುತ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

READ | ನಾಲ್ಕೇ ದಿನಗಳಲ್ಲಿ ಗಬ್ಬೆದ್ದ ಸ್ಮಾರ್ಟ್ ಸಿಟಿ, ಮನೆ ತ್ಯಾಜ್ಯ ರಸ್ತೆ ಪಾಲು! 

ಸರ್ಕಾರ ಈಗಾಗಲೇ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ ಮಾತನ್ನು ತಪ್ಪಿ ಪೌರಕಾರ್ಮಿಕರು ಅನಿರ್ದಿಷ್ಟ ಕಾಲ ಮುಷ್ಕರ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಪೌರಕಾರ್ಮಿಕರ ಸಮಸ್ಯೆಯನ್ನು ಆಲಿಸಿಲ್ಲ. ಪರಿಣಾಮ ಸಾರ್ವಜನಿಕರಿಗೂ ತೊಂದರೆ ಆಗುತ್ತಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ಪ್ರತಿಭಟನೆ
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೂ 680 ಜನ ಪೌರಕಾರ್ಮಿಕರಿದ್ದಾರೆ. ಅದರಲ್ಲಿ 200 ಜನ ಕಾಯಂ ಪೌರಕಾರ್ಮಿಕರಿದ್ದು, ಉಳಿದ 400ಕ್ಕೂ ಹೆಚ್ಚು ಪೌರಕಾರ್ಮಿಕರು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ಶಿವಮೊಗ್ಗ ನಗರದಲ್ಲಿ ಪ್ರತಿದಿನ 175 ಟನ್ ತ್ಯಾಜ್ಯ ಸೃಷ್ಟಿಯಾಗುತ್ತದೆ. ಕಳೆದ ನಾಲ್ಕು ದಿನಗಳಿಂದ ಮುಷ್ಕರ ನಡೆಸುತ್ತಿರುವ ಕಾರಣ ಲೋಡ್ ಗಟ್ಟಲೆ ಕಸದ ರಾಶಿಗಳು ರಸ್ತೆಗಳಲ್ಲಿ ತುಂಬಿದ್ದು, ಚರಂಡಿಗಳು, ಒಳಚರಂಡಿಗಳು ಬ್ಲಾಕ್ ಆಗಿವೆ. ಶವಸಂಸ್ಕಾರದ ವಾಹನಗಳ ಇಲ್ಲದೆ ಜನರಿಗೆ ತೀವ್ರ ಅನಾನುಕೂಲವಾಗಿದ್ದು ಕೂಡಲೇ ಪೌರಕಾರ್ಮಿಕರ ಬೇಡಿಕೆಗಳನ್ನು ಸರ್ಕಾರ ಈಡೇರಿಸಿ ರಾಜ್ಯದಾದ್ಯಂತ ಪೌರಕಾರ್ಮಿಕರು ತಮ್ಮ ಕಾರ್ಯಗಳಿಗೆ ಹಿಂತಿರುಗಿಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

READ | ಗಾಜನೂರು ಡ್ಯಾಂನಲ್ಲಿ ಒಳಹರಿವು ಹೆಚ್ಚಳ, 10 ಗೇಟ್ ಓಪನ್, ಯಡೂರಿನಲ್ಲಿ ದಾಖಲೆಯ ಮಳೆ

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪ್ರವೀಣ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಪಿ. ಗಿರೀಶ್, ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ಲೋಕೇಶ್, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಎಸ್.ಕುಮಾರೇಶ್, ಗ್ರಾಮಾಂತರ ಅಧ್ಯಕ್ಷ ಈ.ಟಿ.ನಿತಿನ್, ಪ್ರಮುಖರಾದ ಸುವರ್ಣ ನಾಗರಾಜ್, ಪುಷ್ಪಕ್ ಕುಮಾರ್, ಎಂ.ರಾಕೇಶ್, ಇರ್ಫಾನ್, ಸಂದೀಪ್ ಸುಂದರಾಜ್, ಇಮ್ರಾನ್ ಶಮೀರ್ ಖಾನ್, ಕೆ.ಎಲ್.ಪವನ್, ಮೊಹಮ್ಮದ್ ಫೈರೋಜ್, ಮೋಹನ್ ಸೋಮಿನಕೊಪ್ಪ, ಸೈಯದ್ ಜಮೀಲ್, ಸುಹಾಸ್ ಗೌಡ, ರಾಜೀವ್ ರಾಯ್ಕರ್, ಶ್ರೀನಿವಾಸ್, ಪೂರ್ವಿಕ್, ಕಿರಣ್ ಕುಮಾರ್, ಅಬಿತ್ ಗೌಡ, ಗೋಪಿನಾಥ್, ರಾಕೇಶ್ ಉಪಸ್ಥಿತರಿದ್ದರು.

ಕಂಪ್ಲೀಟ್ ರಿಪೋರ್ಟ್: ಶಿಕಾರಿಪುರದಲ್ಲಿ ಶುರುವಾಯ್ತು ಐ-ಪ್ರಾಧಿಕಾರ ಅಭಿಯಾನ

Leave a Reply

Your email address will not be published.