ಸುದ್ದಿ ಕಣಜ.ಕಾಂ| DISTRICT | SCHOOL HOLIDAY
ಶಿವಮೊಗ್ಗ: ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರ ನಿರ್ದೇಶನದ ಮೇರೆಗೆ ಜಿಲ್ಲೆಯ ಮೂರು ತಾಲೂಕುಗಳ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಜುಲೈ 6ರಂದು ರಜೆ ಘೋಷಿಸಲಾಗಿದೆ.
ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲೂಕುಗಳಲ್ಲಿ ಹೆಚ್ಚು ಮಳೆ ಬೀಳುತ್ತಿರುವುದರಿಂದ ಮುಂಜಾಗ್ರತೆಯ ಉದ್ದೇಶದಿಂದ ಈ ತಾಲೂಕುಗಳಿಗೆ ರಜೆ ಘೋಷಿಸಿ ಡಿಡಿಪಿಐ ಪರಮೇಶ್ವರ್ ಅವರು ಆದೇಶಿಸಿದ್ದಾರೆ.