ಸುದ್ದಿ ಕಣಜ.ಕಾಂ| DISTRICT | SHIVAMOGGA RAIN
ಶಿವಮೊಗ್ಗ: ಲಿಂಗನಮಕ್ಕಿ ಡ್ಯಾಂ(Linganamakki dam)ನ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತಿದ್ದು, ಒಳಹರಿವು ಹೆಚ್ಚಿದೆ. ಒಂದೇ ದಿನದಲ್ಲಿ ಜಲಾಶಯದಲ್ಲಿ ಐದು ಅಡಿ ನೀರು ಏರಿಕೆಯಾಗಿದೆ. ತುಂಗಾ ಜಲಾಶಯ ತುಂಬಿದ್ದು ಒಳಹರಿವು ಪ್ರಮಾಣ ಹೆಚ್ಚಿದೆ. ಡ್ಯಾಂಗೆ ಹರಿದುಬರುತ್ತಿರುವ ನೀರನ್ನು ನದಿಗೆ ಬಿಡಲಾಗುತ್ತಿದೆ.
READ | ಶಿವಮೊಗ್ಗದ 3 ತಾಲೂಕುಗಳ ಶಾಲೆಗಳಿಗೆ ರಜೆ ವಿಸ್ತರಣೆ
- ಜಲಾಶಯಗಳ ನೀರಿನ ಮಟ್ಟ (ಅಡಿ)
- ಲಿಂಗನಮಕ್ಕಿ: 1819 (ಗರಿಷ್ಠ), 1762.10 (ಇಂದಿನ ಮಟ್ಟ), 39262.10 (ಒಳಹರಿವು), 903.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1784.60.
- ಭದ್ರಾ: 186 (ಗರಿಷ್ಠ), 160.11 (ಇಂದಿನ ಮಟ್ಟ), 26004.00 (ಒಳಹರಿವು), 136.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 155.34.
- ತುಂಗಾ: 588.24 (ಗರಿಷ್ಠ), 588.24 (ಇಂದಿನ ಮಟ್ಟ), 42358.00 (ಒಳಹರಿವು), 42358.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.24.
- ಮಾಣಿ: 595 (ಎಂಎಸ್ಎಲ್ಗಳಲ್ಲಿ), 574.18 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 9756 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್ಗಳಲ್ಲಿ) ಕಳೆದ ವರ್ಷ ನೀರಿನ ಮಟ್ಟ 573.66 (ಎಂಎಸ್ಎಲ್ಗಳಲ್ಲಿ).
- ಪಿಕ್ಅಪ್: 563.88 (ಎಂಎಸ್ಎಲ್ಗಳಲ್ಲಿ), 562.60 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 3290 (ಒಳಹರಿವು), 3024.00(ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 561.76 (ಎಂಎಸ್ಎಲ್ಗಳಲ್ಲಿ).
- ಚಕ್ರ: 580.57 (ಎಂ.ಎಸ್.ಎಲ್ಗಳಲ್ಲಿ), 573.52 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 3051.00 (ಒಳಹರಿವು), 1051.00 (ಹೊರಹರಿವು ಕ್ಯೂಸೆಕ್ಸ್ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 571.32 (ಎಂಎಸ್ಎಲ್ಗಳಲ್ಲಿ).
- ಸಾವೆಹಕ್ಲು: 583.70 (ಗರಿಷ್ಠ ಎಂಎಸ್ಎಲ್ಗಳಲ್ಲಿ), 577.76 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 3683.00 (ಒಳಹರಿವು), 226.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 578.16 (ಎಂಎಸ್ಎಲ್ಗಳಲ್ಲಿ).
ಜಿಲ್ಲೆಯಲ್ಲಿ ಸರಾಸರಿ 40.11 ಮಿಮೀ
ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 280.80 ಮಿಮೀ ಮಳೆಯಾಗಿದ್ದು, ಸರಾಸರಿ 40.11 ಮಿಮೀ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 764.90 ಮಿಮೀ ಇದ್ದು, ಇದುವರೆಗೆ ಸರಾಸರಿ 168.77 ಮಿಮೀ ಮಳೆ ದಾಖಲಾಗಿದೆ.
ಶಿವಮೊಗ್ಗ 17.60 ಮಿಮೀ, ಭದ್ರಾವತಿ 9.90 ಮಿಮೀ, ತೀರ್ಥಹಳ್ಳಿ 61.30 ಮಿಮೀ, ಸಾಗರ 72.30 ಮಿಮೀ., ಶಿಕಾರಿಪುರ 21.00 ಮಿಮೀ, ಸೊರಬ 45.00 ಮಿಮೀ. ಹಾಗೂ ಹೊಸನಗರ 53.70 ಮಿಮೀ ಮಳೆಯಾಗಿದೆ.