ತುಂಗೆಯ ಆರ್ಭಟಕ್ಕೆ ಮುಳುಗಿದ ಕೋರ್ಪಾಳಯ್ಯನ ಮಂಟಪ

 

ಸುದ್ದಿ ಕಣಜ.ಕಾಂ | DISTRICT | KORPALAYYA MANTAPA
ಶಿವಮೊಗ್ಗ: ತುಂಗಾ ನದಿ ಮೈದುಂಬಿ ಹರಿಯುತಿದ್ದು, ಗುರುವಾರ ಬೆಳಗ್ಗೆ 11.45ರ ಹೊತ್ತಿಗೆ 52,525 ಕ್ಯೂಸೆಕ್ಸ್ ನೀರು ಹೊರ ಬಿಡಲಾಗುತ್ತಿದೆ. ಹೊಳೆಗೆ ಮತ್ತಷ್ಟು ನೀರು ಹರಿದುಬರುತ್ತಿದ್ದು, ಕೋರ್ಪಾಳಯ್ಯನ ಮಂಟಪ (KORPALAYYA MANTAPA ) ಮುಳುಗಿದೆ.

READ | ಶಿವಮೊಗ್ಗ ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಣೆ 

ಬೆಳಗ್ಗೆ 8 ಗಂಟೆಗೆ 45,939 ಕ್ಯೂಸೆಕ್ಸ್ ನೀರನ್ನು ಹೊರಗೆ ಬಿಡಲಾಗುತಿತ್ತು. ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಪ್ರಮಾಣ ಹೆಚ್ಚುತ್ತಿರುವುದರಿಂದ ಹೊರಹರಿವಿನ ಪ್ರಮಾಣದಲ್ಲೂ ಏರಿಕೆ ಮಾಡಲಾಗುತ್ತಿದೆ. ಜಲಾಶಯದಿಂದ ನೀರನ್ನು ನಿರಂತರ ಹೊರಗೆ ಬಿಡುತ್ತಿರುವುದರಿಂದ ಹೊಳೆಗೆ ಭರಪೂರ ನೀರು ಹರಿದುಬರುತ್ತಿದೆ.

Leave a Reply

Your email address will not be published.