ಶಿವಮೊಗ್ಗದ ಎಲ್ಲ‌ ಹೈಟೆಕ್ ಹೋಟೆಲ್‌, ಲಾಡ್ಜ್, ಮಾಲ್ ಗಳು ಮೇಲೆ ಖಾಕಿ‌ ಕಣ್ಣು, ಕಾರಣವೇನು?

 

ಸುದ್ದಿ‌ ಕಣಜ.ಕಾಂ | DISTRICT | PUBLIC SAFETY ACT
ಶಿವಮೊಗ್ಗ: ಹುಬ್ಬಳ್ಳಿಯಲ್ಲಿ‌ ಚಂದ್ರಶೇಖರ್ ಗುರೂಜಿ‌ (Chandrasekhar Guruji) ಅವರ ಹತ್ಯೆ ಬೆನ್ನಲ್ಲೇ ಜಿಲ್ಲೆಯ ಎಲ್ಲ ಪ್ರತಿಷ್ಠಿತ ಹೋಟೆಲ್, ಲಾಡ್ಜ್, ಮಾಲ್ ಗಳ ಮೇಲೆ ಪೊಲೀಸರು ವಿಶೇಷ ನಿಗಾ ವಹಿಸಲಿದ್ದಾರೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಕುಮಾರ್‌ (Alok Kumar) ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರೂಜಿ ಅವರ ಹತ್ಯೆ ಮಾಡಿದ ಆರೋಪಿಗಳು ಲಾಡ್ಜ್ ವೊಂದರಲ್ಲಿ ಇದ್ದರು. ಈ ಎಲ್ಲ ಅಂಶಗಳನ್ನು ಮನಗಂಡು ಕರ್ನಾಟಕ ನಾಗರಿಕ ಸುರಕ್ಷತಾ ಕಾಯ್ದೆ(PUBLIC SAFETY ACT)ಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

READ | ತ್ಯಾವರೆಕೊಪ್ಪ ಸಿಂಹ ಧಾಮದಲ್ಲಿ ‘ಯಶವಂತ್’ ಸಾವು, ಈ ಸಿಂಹದ ಬಗ್ಗೆ ತಿಳಿಯಬೇಕಾದ ವಿಷಯಗಳಿವು

ಕಾಯ್ದೆ ಅನ್ವಯ ಏನೆಲ್ಲ ಇರುವುದು ಕಡ್ಡಾಯ?
ಪ್ರತಿಷ್ಠಿತ ಹೋಟೆಲ್‌, ಮಾಲ್‌’ಗಳಲ್ಲಿ ನಿಯೋಜಿಸಲಾಗುವ ಭದ್ರತಾ ಸಿಬ್ಬಂದಿ ಕಡ್ಡಾಯವಾಗಿ ತರಬೇತಿ ಪಡೆದವರಾಗಿರಬೇಕು. ಸಿಸಿ ಟಿವಿ ಅಳವಡಿಸಿರಬೇಕು. ಮೆಟಲ್‌ ಡಿಟೆಕ್ಟರ್‌ ಇರಬೇಕು. ಈ ನಿಯಮಗಳನ್ನು ಉಲ್ಲಂಘಿಸಿದರೆ ದಂಡ‌ ವಿಧಿಸಲಾಗುವುದು.
ಕಾನೂನು‌ ಸುವ್ಯವಸ್ಥೆ ಹಿನ್ನೆಲೆ ಬೀಟ್ ವ್ಯವಸ್ಥೆಗೆ ಮೇಜರ್‌ ಸರ್ಜರಿ
ಜಿಲ್ಲೆಯಲ್ಲಿ‌ ಈಗಾಗಲೇ ಬೀಟ್ ಕಮಿಟಿ ಹಾಗೂ ಪೀಸ್ ಕಮಿಟಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಇದರಲ್ಲಿ ವೃದ್ಧರೇ‌ ಅಧಿಕ ಸಂಖ್ಯೆಯಲ್ಲಿದ್ದಾರೆ. ಯುವಕರನ್ನು ಈ‌ ಕಮಿಟಿಯಲ್ಲಿ ಸೇರಿಸಲಾಗುವುದು ಎಂದರು.
ಸೋಶಿಯಲ್ ಮೀಡಿಯಾ ಮೇಲೆಯೂ ನಿಗಾ‌ ಇಡಲಾಗುವುದು. ಸುಳ್ಳು‌ ಸುದ್ದಿ‌‌ ಹಬ್ಬಿಸುವವರ ಮೇಲೆ ಮುಲಾಜಿಲ್ಲದೇ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ನಗರದ 50ಕ್ಕೂ ಹೆಚ್ಚು ಲಾಡ್ಜ್ ಗಳ ಮೇಲೆ ಪೊಲೀಸರ ದಿಢೀರ್ ದಾಳಿ

Leave a Reply

Your email address will not be published.