ಉಳ್ಳೂರು ಹಾಸ್ಟೆಲ್‍ಗೆ ಬಲವಂತದ ರಜೆ!

 

ಸುದ್ದಿ ಕಣಜ.ಕಾಂ | TALUK | SPECIAL STORY
ಸಾಗರ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸತತ ಮೂರು ದಿನದಿಂದ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗುತ್ತಿದ್ದರೂ, ತಾಲೂಕಿನ ಉಳ್ಳೂರಿನ ವಿದ್ಯಾರ್ಥಿನಿಯರ ಹಾಸ್ಟೆಲ್‍ಗೂ ಬಲವಂತದ ರಜೆ ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ!
ಉಳ್ಳೂರಿನ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ದೊಡ್ಡ ಪ್ರಮಾಣದಲ್ಲಿ ಸೋರುತ್ತಿದ್ದು, ಇದರೊಳಗೆ ಮಕ್ಕಳು ಉಳಿಯಲಾಗದ ಸ್ಥಿತಿ ನಿರ್ಮಾಣವಾಗಿದೆ. ನೀರು ಸೋರುವುದನ್ನು ಹಿಡಿಯಲು ಸ್ಟೀಲ್ ಪಾತ್ರೆ, ಪ್ಲಾಸ್ಟಿಕ್ ಟಬ್ ಗಳನ್ನು ಇಡಲಾಗಿದೆ.

READ | ಅಧಿಕಾರಿಗಳ ಭಾನುವಾರದ ರಜೆಗೂ ಮಳೆ ಕುತ್ತು, ಡಿಸಿ ಖಡಕ್ ವಾರ್ನಿಂಗ್

ಗೋಪಾಲಕೃಷ್ಣ ಬೇಳೂರು ಭೇಟಿ, ಪರಿಶೀಲನೆ
ಈ ಮಾಹಿತಿಯನ್ನು ಪಡೆದು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಇತ್ತೀಚೆಗೆ ನಿರ್ಮಾಣವಾದ ಈ ಹಾಸ್ಟೆಲ್‍ನ ಕಳಪೆ ಕಾಮಗಾರಿಯ ಕಾರಣದಿಂದ ಎಲ್ಲೆಡೆ ನೀರು ಸೋರುತ್ತಿದೆ. ವಿದ್ಯಾರ್ಥಿನಿಯರು ಮಲಗುವ ಸ್ಥಳ, ಅಡುಗೆ ಮನೆಯಲ್ಲಿಯೂ ದೊಡ್ಡ ಪ್ರಮಾಣದ ಸೋರಿಕೆ ಇದೆ. ಇಂತಹ ಸಂದರ್ಭದಲ್ಲಿ ಸೋರಿಕೆಯನ್ನು ತಡೆಯಲು ತಕ್ಷಣದ ಕ್ರಮಕ್ಕೆ ಆಡಳಿತ, ಶಾಸಕರು ಮುಂದಾಗಬೇಕಿತ್ತು. ಅದರ ಬದಲು ಮಕ್ಕಳನ್ನೇ ಮನೆಗೆ ಕಳುಹಿಸಲಾಗಿದೆ ಎಂದು ಆರೋಪಿಸಿದರು.
ಹಾಸಿಗೆಗಳೆಲ್ಲ ಥಂಡಿ
ಮಕ್ಕಳ ಹಾಸಿಗೆಗಳೆಲ್ಲ ನೀರಿನಿಂದ ಥಂಡಿಯಾಗಿವೆ. ಇಲ್ಲಿನ ಮಂಚಗಳನ್ನು ಕಬ್ಬಿಣದಿಂದ ನಿರ್ಮಿಸಲಾಗಿದ್ದು, ಕಟ್ಟಡದಲ್ಲಿನ ಆರ್ದತೆಯಿಂದ ವಿದ್ಯುತ್ ಶಾಕ್ ಸಂಭವಿಸುವ ಸಾಧ್ಯತೆಯೂ ಇದೆ. ಈಗಾಗಲೇ ಹಲವು ಶಾಲೆಗಳು ಬೀಳುವ ಪರಿಸ್ಥಿತಿ ಇದೆ. ಇವುಗಳನ್ನು ಗಮನಿಸದಿರುವ ಸರ್ಕಾರ ಸತ್ತಿದೆಯೇ ಎಂಬ ಅನುಮಾನ ಕಾಡುತ್ತದೆ ಎಂದು ಬೇಳೂರು ಹರಿಹಾಯ್ದರು.

ವೇದಿಕೆಯ ಮೇಲೆ ಕಣ್ಣೀರಿಟ್ಟ ಬೇಳೂರು, ‘ದೀವರ ಅಭಿವೃದ್ಧಿಗೆ ಧರ್ಮಗುರು ಅಗತ್ಯ’

Leave a Reply

Your email address will not be published.