ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಹಾಡಹಗಲೇ ವಿನೋಬನಗರ ಪೊಲೀಸ್ ಚೌಕಿ ಸಮೀಪದಲ್ಲಿ ರೌಡಿಶೀಟರ್ ಅಣ್ಣಪ್ಪ ಅಲಿಯಾಸ್ ಹಂದಿ ಅಣ್ಣಿ (Handi Anni) ಕೊಲೆ (murder) ಮಾಡಲಾಗಿದ್ದು, ಇದರ ಬೆನ್ನಲ್ಲೇ ವಿಡಿಯೋವೊಂದು ವೈರಲ್ ಆಗಿದೆ. ಅದರಲ್ಲಿ ಹಂದಿ ಅಣ್ಣಿಯನ್ನು ಕೆಲವರು ಅಟ್ಟಿಸಿಕೊಂಡು ಹೋಗುತ್ತಿದ್ದಾರೆ.
READ | ಶಿವಮೊಗ್ಗದಲ್ಲಿ ರೌಡಿಶೀಟರ್ ಹಂದಿ ಅಣ್ಣಿ ಬರ್ಬರ ಹತ್ಯೆ
- ಮರ್ಡರ್ ಬಗ್ಗೆ ತಿಳಿಯಲೇಬೇಕಾದ ವಿಷಯಗಳಿವು
- ಹಂದಿ ಅಣ್ಣಿಯು ಹೊಂಡಾ ಆಕ್ಟಿವಾ ಬೈಕ್ ನಲ್ಲಿ ಗುರುವಾರ ಬೆಳಗ್ಗೆ ಸೋಮಿನಕೊಪ್ಪ ರಸ್ತೆ (sominakoppa) ಕಡೆಯಿಂದ ಹೋಗುತಿದ್ದ. ಇನ್ನೋವಾ ಕಾರಿನಲ್ಲಿ ದುಷ್ಕರ್ಮಿಗಳು ಆತನನ್ನು ಫಾಲೋ ಮಾಡಿದ್ದಾರೆ.
- ಹಂದಿ ಅಣ್ಣಿಯು ಲಕ್ಷ್ಮೀ ಟಾಕೀಸ್ (lakshmi theator) ಕಡೆಗೆ ಹೋಗಿ ವಾಪಸ್ ಬರುತ್ತಿದ್ದಾಗ ದುಷ್ಕರ್ಮಿಗಳು ಬೈಕಿಗೆ ಡಿಕ್ಕಿ ಹೊಡೆದು ಬೀಳಿಸಿದ್ದಾರೆ ಎಂದು ತಿಳಿದುಬಂದಿದೆ.
- ತಪ್ಪಿಸಿಕೊಳ್ಳುವುದಕ್ಕಾಗಿ ಹಂದಿ ಅಣ್ಣಿ ಓಡಿಹೋಗಿದ್ದಾನೆ. ಆತನಿಗೆ 6-7 ಜನರು ಮಾರಕಾಸ್ತ್ರಗಳೊಂದಿಗೆ ಬೆನ್ನಟ್ಟಿಕೊಂಡು ಹೋಗಿದ್ದಾರೆ.
- ಬೆನ್ನಟ್ಟಿಸಿಕೊಂಡು ಹೋದ ಕೆಲವೇ ಸೆಕೆಂಡುಗಳಲ್ಲಿ ದುಷ್ಕರ್ಮಿಗಳು ವಾಪಸ್ ಓಡಿಬಂದಿದ್ದಾರೆ. ಇದೆಲ್ಲ ನಡೆದಿದ್ದು ಸಾರ್ವಜನಿಕರು ಸಮ್ಮುಖದಲ್ಲಿಯೇ!
- ಹಂದಿ ಅಣ್ಣಿ ಮೇಲೆ ಅಟ್ಯಾಕ್ ಮಾಡಲಾಗುತ್ತದೆ ಎಂಬ ಬಗ್ಗೆ ಪೊಲೀಸರು ಈ ಮುಂಚೆಯೇ ಅಲರ್ಟ್ ಮಾಡಿದ್ದರು. ಆತನ ಮೇಲಿರುವ ಪ್ರಕರಣಗಳ ಪಟ್ಟಿಯನ್ನು ಸಹ ಸಿದ್ಧಪಡಿಸಿ ಆತನ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು.
ಲವ-ಕುಶ, ನವುಲೆ ಮೋಹನ್ ಮರ್ಡರ್ ಕೇಸ್ಗಳಲ್ಲಿ ಭಾಗಿ
2007-08ರಲ್ಲಿ ನಟೋರಿಯಸ್ ರೌಡಿಗಳಾದ ಲವ-ಕುಶ, ನವುಲೆ ಮೋಹನ್ ಹತ್ಯೆ ಪ್ರಕರಣದಲ್ಲಿ ಹಂದಿ ಅಣ್ಣಿ ಭಾಗಿಯಾಗಿದ್ದ. ಇದರೊಂದಿಗೆ ದರೋಡೆ, ಚೆಕ್ ಬೌನ್ಸ್ ಸೇರಿದಂತೆ ಹಲವು ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದು, ಶಿವಮೊಗ್ಗದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
2016ರವರೆಗೆ ಹಂದಿ ಅಣ್ಣಿ ವಿವಿಧ ರೌಡಿ ಚಟುವಟಿಕೆಗಳನ್ನು ಭಾಗಿಯಾಗಿದ್ದ. ತದನಂತರ, ವೈನ್ ಶಾಪ್ ನಡೆಸುತಿದ್ದ ಎಂದು ತಿಳಿದುಬಂದಿದೆ.
ಸಿಸಿಟಿವಿ ವಿಡಿಯೋದಲ್ಲೇನಿದೆ?
ಹಂದಿ ಅಣ್ಣಿ ಕೊಲೆ ನಡೆದ ಕೆಲವು ಹೊತ್ತಿನಲ್ಲೇ ಸಿಸಿಟಿವಿ ವಿಡಿಯೋವೊಂದು ವೈರಲ್ ಆಗಿದೆ. ಅದರಲ್ಲಿ ಹಂದಿ ಅಣ್ಣಿಯನ್ನು ಅಟ್ಟಾಡಿಸಿಕೊಂಡು ಓಡುತ್ತಿರುವ ದೃಶ್ಯವಿದೆ.
ನಾಲ್ವರು ಇನ್’ಸ್ಪೆಕ್ಟರ್’ಗಳ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
https://suddikanaja.com/2020/12/12/mother-killed-her-own-child-in-bengaluru/