ಸುದ್ದಿ ಕಣಜ.ಕಾಂ | DISTRICT | ALBINO COBRA
ಶಿವಮೊಗ್ಗ: ಅಪರೂಪದ ಬಿಳಿ ನಾಗರಹಾವು (ಅಲ್ಬಿನೋ ಕೋಬ್ರಾ-albino cobra) ಅನ್ನು ರಕ್ಷಿಸಲಾಗಿದೆ.
ಸಾಮಾನ್ಯವಾಗಿ ಗೋಧಿ ಬಣ್ಣ, ಕಪ್ಪು ಮಿಶ್ರಿತ ಬಣ್ಣದ ನಾಗರಹಾವು ಎಲ್ಲರಿಗೂ ಚಿರಪರಿಚಿತ. ಆದರೆ, ಬಿಳಿ ನಾಗರಹಾವು ಅಪರೂಪವಾಗಿದೆ.
ಈ ಅಲ್ಬಿನೋ ಕೋಬ್ರಾ ತೀರ್ಥಹಳ್ಳಿ ರಸ್ತೆಯ ಡಾ.ಪ್ರೀತಮ್ ಅವರ ತೋಟದಲ್ಲಿ ಕಂಡುಬಂದಿದ್ದು, ಸ್ನೇಕ್ ಕಿರಣ್ (Snake Kiran) ಹಾವನ್ನು ಹಿಡಿದು ಅರಣ್ಯ ಇಲಾಖೆಯ ಅನುಮತಿಯ ಮೇರೆಗೆ ಕಾಡಿಗೆ ಬಿಟ್ಟಿದ್ದಾರೆ.
READ | ವಿಶ್ವ ಹಾವುಗಳ ದಿನ ಇಂದು, ಸರ್ಪ ಜಗತ್ತಿನ ವಿಶೇಷ ಇಲ್ಲಿದೆ, ಕಡಿತ ತಪ್ಪಿಸಲು ಹೀಗೆ ಮಾಡಿ
ರಕ್ತ ಹಾಗೂ ಚರ್ಮದಲ್ಲಿನ ಸಮಸ್ಯೆಯಿಂದಾಗಿ ಹಾವು ಬಿಳಿಯಾಗಿ ಪರಿವರ್ತನೆಯಾಗುತ್ತದೆ. ಆದರೆ, ಈ ಬಣ್ಣ ಢಾಳವಾಗಿ ಕಾಣುವುದರಿಂದ ಬೇಟೆ ಪ್ರಾಣಿಗಳಿಗೆ ಸುಲಭವಾಗಿ ಕಾಣುತ್ತದೆ. ಹದ್ದು ಇತರೆ ಪ್ರಾಣಿಗಳನ್ನು ಸುಲಭವಾಗಿ ಹಿಡಿಯುವ ಸಾಧ್ಯತೆಯೂ ಇದೆ.