ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಘಟಕ 2, 5 ಮತ್ತು 6 ರಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜುಲೈ 20 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ನಗರದ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಮೆಸ್ಕಾಂ ಪ್ರಕಟಣೆ ಕೋರಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಇಲಿಯಾಸ್ ನಗರ 2 ರಿಂದ 13ನೇ ಕ್ರಾಸ್ವರೆಗೆ, 100 ಅಡಿರಸ್ತೆ, ಫಾರೂಕ್ಯ ಶಾದಿಮಹಲ್, ಮಂಡಕ್ಕಿಭಟ್ಟಿ, ಟಿಪ್ಪುನಗರ, ಮಂಜುನಾಥ ಬಡಾವಣೆ, ಖಾಜಿ ನಗರ 80 ಅಡಿ ರಸ್ತೆ, ಕಾಮತ್ ಲೇಔಟ್, ಮಲ್ಲಿಕಾರ್ಜುನ ಬಡಾವಣೆ ಹಾಗೂ ಸುತ್ತಮುತ್ತಲ ಪ್ರದೇಶ, ಕುಂಬಾರಕೇರಿ, ಬಿ.ಬಿ.ರಸ್ತೆ, ಕೆ.ಆರ್.ಪುರಂ, ಸೀಗೆಹಟ್ಟಿ, ಮುರಾದ್ ನಗರ, ಸವಾಯಿಪಾಳ್ಯ, ಕುರುಬರಪಾಳ್ಯ, ಇಮಾಮ್ ಬಾಡ, ಶಿವಶಂಕರ್ ರೈಸ್ಮಿಲ್, ಮಂಡ್ಲಿ ಸರ್ಕಲ್, ದಿಲ್ಲಿ ದರ್ಬಾರ್ ಹಿಂಭಾಗ, ನಾಗಭೂಷಣ್ ಪೆಟ್ರೊಲ್ ಬಂಕ್, ಬೈಪಾಸ್ ರಸ್ತೆ, ಟಿ.ಎಸ್.ಆರ್.ರಸ್ತೆ, ರವಿವರ್ಮ ಬೀದಿ, ಮಾಕಮ್ಮನ ಕೇರಿ, ಆಜಾದ್ನಗರ, ಲಾಲ್ ಬಂದರ್ ಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶ, ಕಲ್ಲೂರು ಮಂಡ್ಲಿ ಗ್ರಾಮಾಂತರ ಪ್ರದೇಶ, ಐಹೊಳೆ, ಅಗಸವಳ್ಳಿ, ಕಲ್ಲೂರು, ಗೋವಿಂದಪುರ, ಅನುಪಿನಕಟ್ಟೆ, ಪುರದಾಳು, ರಾಮಿನಕೊಪ್ಪ, ಮೈಲಾರಪ್ಪನ ಕ್ಯಾಂಪ್, ಹನುಮಂತಾಪುರ, ಶರಾವತಿ ನಗರ, ಶಾರದ ಕಾಲೋನಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
READ | ಶಿವಮೊಗ್ಗದಲ್ಲಿ ಮತ್ತೊಂದು ಮರ್ಡರ್’ಗೆ ಸ್ಕೆಚ್
ಆಲ್ಕೋಳ ವ್ಯಾಪ್ತಿಯಲ್ಲೂ ವ್ಯತ್ಯಯ
ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್9 ರಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜುಲೈ 20 ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ನಗರದ ಮೇದಾರಕೇರಿ, ಜೈಲ್ ರಸ್ತೆ, ಲಕ್ಷ್ಮೀ ಚಿತ್ರಮಂದಿರದ ಮುಂಭಾಗ, ಹೊಸಮನೆ ಚಾನಲ್ ಏರಿಯಾ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.