ಸುದ್ದಿ ಕಣಜ.ಕಾಂ | DISTRICT| CRIME NEWS
ಶಿಕಾರಿಪುರ: ತಾಲೂಕಿನ ಶಿರಾಳಕೊಪ್ಪ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಬೈಕ್ ಕಳ್ಳತನ ಪ್ರಕರಣ ತನಿಖೆ ವೇಳೆ ಗ್ಯಾಂಗ್’ವೊಂದು ಪೊಲೀಸರ ಖೆಡ್ಡಕ್ಕೆ ಬಿದ್ದಿದೆ.
READ | ಶಿವಮೊಗ್ಗದಲ್ಲಿ ಬೈಕ್ ಕಳ್ಳರ ಗ್ಯಾಂಗ್ ಸೆರೆ, ಒಂದು ಕೇಸ್ ಬೇಧಿಸಲು ಹೋಗಿ 10 ಬೈಕ್’ಗಳು ವಶಕ್ಕೆ
ಶಿಕಾರಿಪುರ ತಾಲೂಕಿನ ಸಂಡ ಗ್ರಾಮದ ಸೈಯ್ಯದ್ ಇಸ್ರಾರ್(26), ಪುನೇದಹಳ್ಳಿ ಗ್ರಾಮದ ರಾಕೇಶ್(24), ಶಿಕಾರಿಪುರ ಟೌನ್ ಗೋಪಾಲ್ (28) ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳ ಬಳಿಯಿಂದ ಅಂದಾಜು ಮೌಲ್ಯ ₹11,00,000 ಮೌಲ್ಯದ ಒಟ್ಟು 16 ಬೈಕ್ ಗಳು ಮತ್ತು ಇಟ್ಟಿಗೆ ಹಳ್ಳಿ ಅರಣ್ಯ ಉಪ ವಲಯ ವ್ಯಾಪ್ತಿಯಲ್ಲಿ ದಾಖಲಾದ 2 ಶ್ರೀಗಂಧದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ ₹18,632 ಮೌಲ್ಯದ 5 ಕೆಜಿ 480 ಗ್ರಾಂ ತೂಕದ ಶ್ರೀಗಂಧದ ತುಂಡು ಮತ್ತು ಚಕ್ಕೆಗಳು ಹಾಗೂ ಕೃತ್ಯಕ್ಕೆ ಬಳಸಿದ ಚಾವರ್ ಲೆಟ್ ಕಾರ್ ಅನ್ನು ವಶಕ್ಕೆ ಪಡೆಯಲಾಗಿದೆ. ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರ ಭರ್ಜರಿ ಕಾರ್ಯಾಚರಣೆ, ಖಾಕಿ ಖೆಡ್ಡಕ್ಕೆ ಬಿದ್ದ ಬೈಕ್ ಕಳ್ಳರ ಗ್ಯಾಂಗ್, 22 ಬೈಕ್ ಸೀಜ್