ರೈತರಿಗೆ ಶುಭ ಸುದ್ದಿ, ರೈತ ಶಕ್ತಿ ಯೋಜನೆ ಅಡಿ 1200 ರೂ.ವರೆಗೆ ಸಬ್ಸಿಡಿ, ಯಾರೆಲ್ಲ ಅರ್ಹರು?

Farmers good news diesel

 

 

ಸುದ್ದಿ ಕಣಜ.ಕಾಂ | DISTRICT | RAITA SHAKTHI 
ಶಿವಮೊಗ್ಗ: 2022-23ನೇ ಸಾಲಿನಲ್ಲಿ ಕೃಷಿ ಇಲಾಖೆ ವತಿಯಿಂದ ‘ರೈತಶಕ್ತಿ’ (Raita Shakthi) ಎಂಬ ಹೊಸ ಯೋಜನೆ(Scheme)ಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಈ ಯೋಜನೆಯಡಿ ಕೃಷಿ ಉತ್ಪಾದಕತೆ(Agricultural productivity)ಯನ್ನು ಹೆಚ್ಚಿಸುವಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಳಕೆಯನ್ನು ಪ್ರೋತ್ಸಾಹಿಸಲು ಹಾಗೂ ಇಂಧನ ವೆಚ್ಚದ ಭಾರವನ್ನು ಕಡಿಮೆ ಮಾಡಲು ಪ್ರತಿ ಎಕರೆಗೆ 250 ರೂಪಾಯಿಯಂತೆ ಗರಿಷ್ಠ 5 ಎಕರೆಯವರೆಗೆ 1250 ರೂಪಾಯಿಗಳನ್ನು ಡಿಬಿಟಿ ಮೂಲಕ ಡಿಸೇಲ್ ಸಬ್ಸಿಡಿ ನೀಡುವ ‘ರೈತಶಕ್ತಿ’ ಯೋಜನೆ ಇದಾಗಿದೆ.

READ | ದುರ್ಗಿಗುಡಿಯಲ್ಲಿ ಆರೋಗ್ಯ ಅಧಿಕಾರಿಗಳ ದಿಢೀರ್ ದಾಳಿ, 21 ಪ್ರಕರಣ ದಾಖಲು

ಯಾರಿಗೆಲ್ಲ ಸಿಗಲಿದೆ ಸಬ್ಸಿಡಿ, ಏನು ಅರ್ಹತೆ?
ಈ ಯೋಜನೆಯಡಿ ರೈತರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಗರಿಷ್ಠ 5 ಎಕರೆಯವರೆಗೆ ಫ್ರೂಟ್ಸ್ ಪೋರ್ಟಲ್ ನಲ್ಲಿ(FRUITS) ನೋಂದಣಿ ಗುರುತಿನ (FID) ಸಂಖ್ಯೆಯಲ್ಲಿ ನಮೂದಿಸಿರುವ ಹಿಡುವಳಿಯ ಆಧಾರದ ಮೇಲೆ ರೈತರಿಗೆ ಡಿಸೇಲ್ ಸಹಾಯಧನ ವರ್ಗಾವಣೆಯಾಗಲಿದೆ.
ಜಿಲ್ಲೆಯ ರೈತರು ಈ ಯೋಜನೆಯ ಪ್ರಯೋಜನ ಪಡೆಯಲು ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಜಮೀನಿನ ಎಲ್ಲ ಸರ್ವೆ ನಂಬರ್’ಗಳ ವಿಸ್ತೀರ್ಣವನ್ನು ಫ್ರೂಟ್ಸ್ ಪೋರ್ಟಲ್’ನಲ್ಲಿ ಆಗಸ್ಟ್ 20 ರೊಳಗೆ ನೋಂದಣಿ ಮಾಡಿಸಬೇಕು.
ಈ ದಿನಾಂಕದವರೆಗೆ ಫ್ರೂಟ್ಸ್ ಪೋರ್ಟಲ್’ನಲ್ಲಿ ನೋಂದಾವಣಿಯಾದ ವಿಸ್ತೀರ್ಣಕ್ಕೆ ಅನುಗುಣವಾಗಿ ಡಿಸೇಲ್ ಸಬ್ಸಿಡಿ ಡಿಬಿಟಿ ಮುಖಾಂತರ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗೆ ದೊರೆಯಲಿದೆ. ಇದುವರೆಗೆ ಫ್ರೂಟ್ಸ್ ತಂತ್ರ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳದ ರೈತರು ಕೂಡಲೇ ನೋಂದಣಿಯನ್ನು ಮಾಡಿಸಿಕೊಳ್ಳುವುದು.

ಡಿಸೇಲ್’ಗೆ ಸಿಗಲಿರುವ ಸಬ್ಸಿಡಿ ಪ್ರಮಾಣ
ಎಕರೆ ಸಬ್ಸಿಡಿ (ರೂ.ಗಳಲ್ಲಿ)
ಒಂದು ಎಕರೆವರೆಗೆ 250
ಎರಡು ಎಕರೆವರೆಗೆ 500
ಮೂರು ಎಕರೆವರೆಗೆ 750
ನಾಲ್ಕು ಎಕರೆವರೆಗೆ 1000
ನಾಲ್ಕು ಎಕರೆ ಮೇಲ್ಪಟ್ಟು 1250

 ರೈತರು ಆಗಸ್ಟ್ 20 ರೊಳಗೆ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಫ್ರೂಟ್ಸ್ ತಂತ್ರಾಂಶದಲ್ಲಿ ತಮ್ಮ ಮಾಲಿಕತ್ವದ ಎಲ್ಲ ಜಮೀನಿನ ಸರ್ವೆ ನಂಬರ್’ವಾರು ವಿಸ್ತೀರ್ಣ ನೊಂದಣಿಯಾಗಿರುವ ಬಗ್ಗೆ ಖಾತರಿಪಡಿಸಿಕೊಳ್ಳುವುದು ಅಥವಾ ನೋಂದಣಿ ಮಾಡಿಸಿಕೊಂಡು ಈ ಯೋಜನೆಯ ಸದುಪಯೋಗಪಡೆದುಕೊಳ್ಳಬೇಕೆಂದು ಜಂಟಿ ಕೃಷಿ ನಿರ್ದೇಶಕಿ ಜಿ.ಸಿ.ಪೂರ್ಣಿಮ ತಿಳಿಸಿದ್ದಾರೆ.

https://suddikanaja.com/2021/09/20/animal-husbandry-department/

Leave a Reply

Your email address will not be published. Required fields are marked *

error: Content is protected !!