ಮತದಾರರ ಗುರುತಿನ ಚೀಟಿಗೂ ಆಧಾರ್ ಲಿಂಕ್ ಮಾಡುವುದು ಹೇಗೆ, ಪ್ರಯೋಜನಗಳೇನು?

 

ಸುದ್ದಿ ಕಣಜ.ಕಾಂ | KARNATAKA | VOTER ID
ಶಿವಮೊಗ್ಗ: ಆಧಾರ್ ಸಂಖ್ಯೆಯನ್ನು ಮತದಾರರ ಪಟ್ಟಿ(Voter List)ಯಲ್ಲಿ ನೋಂದಾಯಿಸಲು ಚುನಾವಣಾ ಆಯೋಗ (Election Commission) ಅವಕಾಶ ಕಲ್ಪಿಸಿದ್ದು, ಮತದಾರರು ಸ್ವಯಂಪ್ರೇರಿತರಾಗಿ ಆಧಾರ (Aadhar) ಸಂಖ್ಯೆಯನ್ನು ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ (Dr R Selvamani) ತಿಳಿಸಿದರು.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾ ಪ್ರಕ್ರಿಯೆಗಳಿಗೆ ತರಲಾಗಿರುವ ತಿದ್ದುಪಡಿಗಳ ಕುರಿತಾಗಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.

READ | ರೈತರಿಗೆ ಶುಭ ಸುದ್ದಿ, ರೈತ ಶಕ್ತಿ ಯೋಜನೆ ಅಡಿ 1200 ರೂ.ವರೆಗೆ ಸಬ್ಸಿಡಿ, ಯಾರೆಲ್ಲ ಅರ್ಹರು?

ವೋಟರ್ ಐಡಿ- ಆಧಾರ್ ಲಿಂಕ್ ಕಾರಣವೇನು?

  • ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಅಥವಾ ಒಂದಕ್ಕಿಂತ ಹೆಚ್ಚು ಬಾರಿ ಒಂದೇ ವ್ಯಕ್ತಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿರುವುದನ್ನು ಗುರುತಿಸುವ ಉದ್ದೇಶದಿಂದ ಆಧಾರ್ ಸಂಖ್ಯೆ ಜೋಡಣೆ ವ್ಯವಸ್ಥೆ ಮಾಡಲಾಗಿದೆ.
  • ನಕಲಿ ಮತದಾನದ ಕಿರಿಕಿರಿ ತಪ್ಪಲಿದೆ. ಮತಗಟ್ಟೆ ಅಧಿಕಾರಿಯು ಮತದಾರರ ಆಧಾರ್ ಗುರುತಿನ ಚೀಟಿ ಪಡೆದು ದಾಖಲು ಮಾಡಿಕೊಳ್ಳುತ್ತಾರೆ. ಒಮ್ಮೆ ಮತದಾರರ ಆಧಾರ್ ಕಾರ್ಡ್ ಸಂಖ್ಯೆಯು ದಾಖಲು ಮಾಡಿದರೆ ಮತ್ತೊಂದು ಬೂತ್ ನಲ್ಲಿ ನಕಲಿ ಮತದಾನ ಮಾಡುವುದು ತಪ್ಪಲಿದೆ.
  • ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ವರ್ಷದಲ್ಲಿ ನಾಲ್ಕು ಅರ್ಹತಾ ದಿನಾಂಕಗಳನ್ನು ಗುರುತಿಸಲಾಗಿದೆ. ಇದುವರೆಗೆ ಜನವರಿ 1ರಂದು 18ವರ್ಷ ತುಂಬುವವರು ಮಾತ್ರ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಗೆ ಅವಕಾಶವಿತ್ತು. ಇದೀಗ ಏಪ್ರಿಲ್ 1, ಜುಲೈ 1 ಹಾಗೂ ಅಕ್ಟೋಬರ್ 1 ಅರ್ಹತಾ ದಿನಾಂಕವಾಗಿ ಪರಿಗಣಿಲಾಗುವುದು.

ವಿಧಾನಸಭಾ ಕ್ಷೇತ್ರಗಳಲ್ಲಿನ ಬೂತ್ ಮಟ್ಟದಲ್ಲಿ ಆಧಾರ್ ಸಂಖ್ಯೆಯನ್ನು ಸಲ್ಲಿಸುವ ಕುರಿತು ಮತದಾರರಿಗೆ ಅರಿವು ಮೂಡಿಸಲು ವಿಶೇಷ ಶಿಬಿರಗಳನ್ನು ಆಯೋಜಿಸಲಾಗುವುದು. ಎಲ್ಲ ರಾಜಕೀಯ ಪಕ್ಷಗಳು ಸಹ ಈ ಕಾರ್ಯದಲ್ಲಿ ಕೈಜೋಡಿಸಬೇಕು.
| ಡಾ.ಆರ್.ಸೆಲ್ವಮಣಿ, ಡಿಸಿ

ಮತದಾರರ ನೋಂದಣಿಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ತಿದ್ದುಪಡಿ ಮಾಡಲಾಗಿದೆ. ಪರಿಷ್ಕೃತ ನಮೂನೆ-6ರಲ್ಲಿ ಕೇವಲ ಹೊಸ ಮತದಾರರ ನೋಂದಣಿಗೆ ಮಾತ್ರ ಅವಕಾಶವಿದೆ. ತೃತೀಯ ಲಿಂಗಿ/ ಅನಾಥ ಸಂದರ್ಭದಲ್ಲಿ ಕಾನೂನು ರಕ್ಷಕರ ವಿವರಗಳನ್ನು ಸಂಬಂಧಿಕರ ವಿವರಗಳ ಅಡಿಯಲ್ಲಿ ನೀಡಬಹುದಾಗಿದೆ. ಅಂಗವಿಕಲ ಮತದಾರರಿಗೆ ಅಂಗವೈಕಲ್ಯದ ಶೇಕಡಾವಾರು ಪ್ರಮಾಣವನ್ನು ಅದರ ಪ್ರಮಾಣಪತ್ರದೊಂದಿಗೆ ನಮೂದಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.

READ | ಗಾಢ ನಿದ್ರೆಯಲ್ಲಿದ್ದವರಿಗೆ ಮಳೆ ಶಾಕ್, ಮಕ್ಕಳ ಪುಸ್ತಕ, ಎಲೆಕ್ಟ್ರಾನಿಕ್ಸ್ ವಸ್ತುಗಳು, ತೋಯ್ದು ತೊಪ್ಪೆ!

ನೋಂದಣಿ ಮಾಡುವುದು ಹೇಗೆ?

  1. ನಮೂನೆ 6-ಬಿ ಮೂಲಕ ಬಿಎಲ್.ಓ ಕಚೇರಿ, ಮನೆ ಮನೆ ಭೇಟಿ ವೇಳಿ ಇ.ಆರ್.ಓಗಳ ಬಳಿ ಅಥವಾ ವೆಬ್ ಸೈಟ್ ನಲ್ಲಿಯೂ ಸ್ವಯಂ ನೋಂದಣಿ ಮಾಡಬಹುದಾಗಿದೆ. ಸಂಗ್ರಹಿಸಲಾಗುವ ಆಧಾರ್ ಸಂಖ್ಯೆಯ ಭದ್ರತೆಯನ್ನು ಖಾತ್ರಿಪಡಿಸಲಾಗುವುದು. ಒಂದುವೇಳೆ ಆಧಾರ್ ಸಂಖ್ಯೆ ಇಲ್ಲದಿದ್ದರೆ ನಿಗದಿಪಡಿಸಲಾಗಿರುವ ಇತರ 11 ದಾಖಲೆಗಳ ಪೈಕಿ ಒಂದು ದಾಖಲೆ ಒದಗಿಸಿ ನೋಂದಣಿ ಮಾಡುವ ಅವಕಾಶ ಕಲ್ಪಿಸಲಾಗಿದೆ.
  2. ಅಧಿಕೃತ ಪೋರ್ಟಲ್  voterportal.eci.gov.in ಗೆ ಭೇಟಿ ನೀಡಿ
  3. ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ವೋಟರ್ ಐಡಿ ಸಂಖ್ಯೆ ಬಳಸಿಕೊಂಡು ಪೋರ್ಟಲ್ ಗೆ ಲಾಗ್ ಇನ್ ಮಾಡಬೇಕು.
  4. ರಾಜ್ಯ, ಜಿಲ್ಲೆ, ಹೆಸರು, ಹುಟ್ಟಿದ ದಿನಾಂಕ, ತಂದೆಯ ಹೆಸರು ವಿವಿಧ ವೈಯಕ್ತಿಕ ಮಾಹಿತಿಗಳನ್ನು ನಮೂದಿಸಬೇಕು
  5. ಈ ಎಲ್ಲ ಮಾಹಿತಿಗಳನ್ನು ನಮೂದಿಸಿದ ಬಳಿಕ ಹುಡುಕು (Search) ಬಟನ್ ಅನ್ನು ಒತ್ತಬೇಕು. ನಂತರ ಎಲ್ಲ ವಿವರಗಳು ಪರದೆಯ ಮೇಲೆ ಬಿತ್ತರವಾಗುತ್ತವೆ. ನಂತರ, ಫೀಡ್ ಆಧಾರ್ ನಂಬರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು
  6. ಆಧಾರ್ ಕಾರ್ಡ್, ಆಧಾರ್ ಸಂಖ್ಯೆ, ವೋಟರ್ ಐಡಿ ಸಂಖ್ಯೆ, ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಪಾಪ್ ಅಪ್ ಪುಟದಲ್ಲಿ ನೋಂದಾಯಿತ ಇಮೇಲ್ ವಿಳಾಸದಲ್ಲಿ ಗೋಚರಿಸುವಂತೆ ಹೆಸರನ್ನು ಭರ್ತಿ ಮಾಡಬೇಕು
  7. Submit ಬಟನ್ ಕ್ಲಿಕ್ ಮಾಡಿ. ಎರಡೂ ಐಡಿಗಳನ್ನು ಲಿಂಕ್ ಮಾಡುವ ಪ್ರಕ್ರಿಯೆ ಆರಂಭಿಸಲಾಗುವುದು

ಇ-ಶ್ರಮ್ ಕಾರ್ಡ್ ಪಡೆಯುವುದು ಹೇಗೆ, ಯಾರೆಲ್ಲ ಸೌಲಭ್ಯಕ್ಕೆ ಅರ್ಹರು, ಇದರ ಪ್ರಯೋಜನವೇನು?

Leave a Reply

Your email address will not be published.