ಗಾಢ ನಿದ್ರೆಯಲ್ಲಿದ್ದವರಿಗೆ ಮಳೆ ಶಾಕ್, ಮಕ್ಕಳ ಪುಸ್ತಕ, ಎಲೆಕ್ಟ್ರಾನಿಕ್ಸ್ ವಸ್ತುಗಳು, ತೋಯ್ದು ತೊಪ್ಪೆ!

 

ಸುದ್ದಿ ಕಣಜ.ಕಾಂ | DISTRICT | RAINFALL
ಶಿವಮೊಗ್ಗ: ವಾರ್ಡ್ ನಂಬರ್ 18ರ ಶ್ರೀರಾಮನಗರದ ಹಲವು ಮನೆಗಳಿಗೆ ಶನಿವಾರ ಬೆಳಗಿನ ಜಾವ ಸುರಿದ ಧಾರಾಕಾರ ಮಳೆ ಶಾಕ್ ನೀಡಿದೆ.
ಏಕಾಏಕಿ ಸುಮಾರು 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ನಿದ್ದೆಯಲ್ಲಿದ್ದ ಜನರು ಎದ್ದು ನೀರನ್ನು ಕಂಡು ಗಾಬರಿಯಾಗಿದ್ದಾರೆ. ಮಕ್ಕಳ ಪುಸ್ತಕಗಳು, ಬಟ್ಟೆ, ಅಡುಗೆ ಸಾಮಗ್ರಿ, ಎಲೆಕ್ಟ್ರಾನಿಕ್ಸ್ ವಸ್ತುಗಳು ನೀರಿನಲ್ಲಿ ತೋಯ್ದು ತೊಪ್ಪೆಯಾಗಿದೆ. ಇದನ್ನು ತಿಳಿಸುವುದಕ್ಕಾಗಿ ಕಾರ್ಪೋರೇಟರ್ ಮತ್ತು ಅಧಿಕಾರಿಗಳಿಗೆ ಕರೆ ಮಾಡಿದರೂ ಯಾವುದೇ ರೆಸ್ಪಾನ್ಸ್ ಬಂದಿಲ್ಲ ಎನ್ನುವುದು ಸ್ಥಳೀಯರ ಆರೋಪ.

READ | ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆಯ ಪರೀಕ್ಷೆಗೆ ಪ್ರವೇಶ ಪತ್ರ ಪ್ರಕಟ, ಹಾಲ್ ಟಿಕೆಟ್ ಗಾಗಿ ಲಿಂಕ್ ಮೇಲೆ ಒತ್ತಿ 

ಸ್ವಚ್ಛಗೊಳಿಸದೇ ಪ್ರತಿಭಟನೆಯ ಎಚ್ಚರಿಕೆ
ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದ್ದು, ಇದಕ್ಕೆ ಇತ್ತೀಚೆಗೆ ಕೈಗೊಂಡ ಚರಂಡಿ ಕಾಮಗಾರಿಯೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ಇಲ್ಲದಿದ್ದರೆ ಮನೆಯನ್ನು ಸ್ವಚ್ಛಗೊಳಿಸದೇ ಹಾಗೆಯೇ ಬಿಟ್ಟು ಪ್ರತಿಭಟಿಸಲಾಗುವುದು ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
ಶಿವಮೊಗ್ಗ, ಭದ್ರಾವತಿಯ ಹಲವೆಡೆ ಮಳೆ ಆವಾಂತರ
ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಿಂದಾಗಿ ಚರಂಡಿಗಳು ತುಂಬಿ ಉಕ್ಕಿವೆ. ಹಲವು ಕಡೆಗಳಲ್ಲಿ ಮನೆಯೊಳಗೆ ನೀರು ನುಗ್ಗಿದೆ. ಅಗರದಳ್ಳಿ ಗ್ರಾಮದ ಎಕೆ ಕಾಲೋನಿಯಲ್ಲೂ ಮಳೆಯ ನೀರು ಮನೆಗಳಿಗೆ ನುಗ್ಗಿವೆ. ರಸ್ತೆ ಜಲಾವೃತಗೊಂಡಿದೆ. ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಹೊಳೆಹೊನ್ನೂರಿನ ಹಲವೆಡೆಗಳಲ್ಲಿ ಅಡಿಕೆ ಮತ್ತು ತೆಂಗಿನ ಮರಗಳು ಮುರಿದಿವೆ. ಮಲ್ಲಿಗೇನಹಳ್ಳಿ, ಕಲ್ಲಜ್ಜನಾಳು ರಸ್ತೆಯಲ್ಲಿ ಅಡಿಕೆ ಮತ್ತು ತೆಂಗಿನ ಮರಗಳು ಮುರಿಬಿದ್ದಿವೆ.

10 ವಾರ್ಡ್ ಗಳಿಗೆ ನುಗ್ಗಿದ ನೀರು, ಅಪಾರ ಹಾನಿ, ನೆರೆ ಪೀಡಿತ ಸ್ಥಳಕ್ಕೆ ಸಂಸದರ ಭೇಟಿ

Leave a Reply

Your email address will not be published.