
ಸುದ್ದಿ ಕಣಜ.ಕಾಂ | DISTRICT | RAINFALL
ಶಿವಮೊಗ್ಗ: ಜಿಲ್ಲೆಯಲ್ಲಿ ಬಿಟ್ಟೂಬಿಡದೇ ಸುರಿಯುತ್ತಿರುವ ಮಳೆ ಹಲವೆಡೆ ಆವಾಂತರಗಳನ್ನು ಸೃಷ್ಟಿಸಿದೆ. ಮುಂಜಾಗ್ರತೆ ಕ್ರಮವಾಗಿ ಶಾಲೆಗಳಿಗೆ ರಜೆ (school holiday) ನೀಡಲಾಗಿದೆ. ಆದರೆ, ಹಲವು ಕಡೆಗಳಲ್ಲಿ ಮನೆಗಳ ಚಾವಣಿ ಕುಸಿದಿದ್ದು, ಗದ್ದೆಗಳಿಗೆ ನೀರು ನುಗ್ಗವ ಭೀತಿ ಎದುರಾಗಿದೆ.
READ | ತುಂಗೆಯ ಆರ್ಭಟಕ್ಕೆ ಮುಳುಗಿದ ಕೋರ್ಪಾಳಯ್ಯ ಮಂಟಪ
ಕೆಂಜಗಾಪುರದಲ್ಲಿ ಮನೆ ಗೋಡೆಕುಸಿತ
ಆನಂದಪುರದ ಯಡೇಹಳ್ಳಿ (Yadehalli) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಜಗಾಪುರ ಗ್ರಾಮದ ಸುಮಿತ್ರಾ ರಾಮಪ್ಪ ಎಂಬುವವರ ಮನೆಯ ಗೋಡೆಗಳು ಕುಸಿತವಾಗಿವೆ.
ಎಲ್ಲೆಲ್ಲಿ ಭೀತಿ?
ಸಾಗರ (sagar) ತಾಲೂಕಿನಲ್ಲಿ ತಾಳಗುಪ್ಪ(Talaguppa), ಬೀಸನಗದ್ದೆ (Beesanagadde) ಸೇರಿದಂತೆ ಹಲವೆಡೆ ಗದ್ದೆ ಜಲಾವೃತವಾಗುವ ಸಾಧ್ಯತೆ ಇದೆ. ಈಗಾಗಲೇ ಈ ಪ್ರದೇಶದವರಿಗೆ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ.
ಕೋಡಿಬಿದ್ದ ಅಂಜನಾಪುರ ಡ್ಯಾಂ
ಶಿಕಾರಿಪುರದಲ್ಲಿರುವ ಅಂಜನಾಪುರ ಜಲಾಶಯ (Anjanapura dam) ಕೋಡಿಬಿದ್ದಿದೆ. ಸಾಮಾನ್ಯವಾಗಿ ಜೂನ್ ನಲ್ಲಿ ಕೋಡಿಬೀಳುತಿದ್ದ ಜಲಾಶಯ ಈ ಸಲ ಜುಲೈನಲ್ಲಿ ಕೋಡಿ ಬಿದ್ದಿದೆ.