ಬೆಳ್ಳಂಬೆಳಗ್ಗೆ ಕುವೆಂಪು ರಸ್ತೆಯಲ್ಲಿ ದರೋಡೆ‌ ಮಾಡಿದವರು ಅರೆಸ್ಟ್

Bike siezed

 

 

ಸುದ್ದಿ ಕಣಜ.ಕಾಂ‌ | DISTRICT | CRIME NEWS
ಶಿವಮೊಗ್ಗ: ಇತ್ತೀಚೆಗೆ ಬೆಳ್ಳಂಬೆಳಗ್ಗೆ ಕುವೆಂಪು ರಸ್ತೆ(Kuvempu Road)ಯಲ್ಲಿ ದರೋಡೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇವರನ್ನು ವಿಚಾರಣೆಗೆ ಒಳಪಡಿಸಿದಾಗ ಇನ್ನಷ್ಟು ಅಪರಾಧ (crime) ಕೃತ್ಯಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಶಿವಮೊಗ್ಗ ನಗರದ ನಿವಾಸಿ ಅಬ್ದುಲ್ ಸಮಾದ್(27), ಸೈಯ್ಯದ್ ನಿಜಾಮುದ್ದೀನ್(22) ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳ ಬಳಿಯಿಂದ‌ 4 ದ್ವಿ ಚಕ್ರವಾಹನಗಳು ಮತ್ತು 1 ಗ್ರಾಂ 40 ಮಿಲಿ ತೂಕದ ಬಂಗಾರ ಮತ್ತು ಮೊಬೈಲ್ ಫೋನ್ ಅನ್ನು ವಶಕ್ಕೆ‌ ಪಡೆಯಲಾಗಿದೆ.

READ | ಹಂದಿ‌ ಅಣ್ಣಿ ಕೊಲೆಗೈದ ಆರೋಪಿಗಳಿಗೆ ನ್ಯಾಯಾಂಗ ಬಂಧನ 

ಅಡ್ರೆಸ್ ಕೇಳುವ ನೆಪದಲ್ಲಿ ಹಣ ದೋಚಿ‌ ಪರಾರಿ
ಕುವೆಂಪು ರಸ್ತೆಯಲ್ಲಿರುವ ನಂದಿನ ಮಿಲ್ಕ್ ಪಾರ್ಲರ್ ಹತ್ತಿರ ಜುಲೈ 6ರಂದು ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ವಿಳಾಸ ಕೇಳುವ‌ ನೆಪದಲ್ಲಿ ಬಂದು ಚಾಕು ತೋರಿಸಿ ₹4000 ನಗದು ಮತ್ತು ಮೊಬೈಲ್ ಫೋನ್ ಅನ್ನು ಕಿತ್ತು ಕೊಂಡು ಪರಾರಿಯಾಗಿದ್ದರು.
ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ದೊಡ್ಡಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

https://suddikanaja.com/2021/07/03/accused-arrested-5/

Leave a Reply

Your email address will not be published. Required fields are marked *

error: Content is protected !!