ಕುವೆಂಪು‌ ವಿವಿ ವೇಳಾಪಟ್ಟಿ ಬಿಡುಗಡೆ, ಡಿಗ್ರಿ ಪ್ರವೇಶಕ್ಕೆ‌ ಲಾಸ್ಟ್ ಡೇಟ್ ಫಿಕ್ಸ್, UUCMS ಹೆಲ್ಪ್ ಡೆಸ್ಕ್ ಆರಂಭ

Kuvempu university

 

 

ಸುದ್ದಿ‌ ಕಣಜ.ಕಾಂ | DISTRICT | KUVEMPU UNIVERSITY
ಶಿವಮೊಗ್ಗ: ಹೊಸ ಶಿಕ್ಷಣ ನೀತಿ ಅನ್ವಯ ಕುವೆಂಪು ವಿಶ್ವವಿದ್ಯಾಲಯ (kuvempu university) ವ್ಯಾಪ್ತಿಯ ಎಲ್ಲ ಕಾಲೇಜುಗಳಲ್ಲಿ 2022-23ನೇ ಸಾಲಿನ ಸ್ನಾತಕ ಪದವಿ ಕೋರ್ಸ್‌ಗಳ (PG course) ಪ್ರವೇಶ ಪ್ರಕ್ರಿಯೆ ಜುಲೈ 1ರಿಂದಲೇ ಪ್ರಾರಂಭವಾಗಿದ್ದು, ಜು. 30ರವರೆಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆ (higher education department) ಆದೇಶ ಹೊರಡಿಸಿದ್ದು, ಇಲಾಖೆಯಡಿ ಬರುವ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು, ಕಾಲೇಜು ಶಿಕ್ಷಣ, ಅನುದಾನ ಮತ್ತು ಅನುದಾನರಹಿತ ಕಾಲೇಜುಗಳಿಗೆ ಈ ವೇಳಾಪಟ್ಟಿಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

READ | 2 ಹಂತದಲ್ಲಿ ಶಿವಮೊಗ್ಗ-ರಾಣೆಬೆನ್ನೂರು ರೈಲ್ವೆ ಮಾರ್ಗ ಕಾಮಗಾರಿ, ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ‌ ಕಾಲೇಜುಗಳಿಗೆ ಸೂಚನೆ
ಕುವೆಂಪು ವಿಶ್ವವಿದ್ಯಾಲಯವು ಇಲಾಖೆಯ ಶೈಕ್ಷಣಿಕ ವೇಳಾಪಟ್ಟಿಯನ್ನು ಅಳವಡಿಸಿಕೊಂಡಿದ್ದು, ವಿವಿ ವ್ಯಾಪ್ತಿಯ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಪದವಿ ಕಾಲೇಜುಗಳಲ್ಲಿ 2022-23ನೇ ಸಾಲಿನ ಪ್ರವೇಶ ಪ್ರಕ್ರಿಯೆಯನ್ನು ಜುಲೈ 1ರಿಂದಲೇ ಪ್ರಾರಂಭಿಸಲು ಈಗಾಗಲೇ ಸೂಚನೆ ನೀಡಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಕುಲಸಚಿವೆ ಜಿ. ಅನುರಾಧ ತಿಳಿಸಿದ್ದಾರೆ.
UUCMS ಹೆಲ್ಪ್ ಡೆಸ್ಕ್ ಆರಂಭ
ಎಲ್ಲ ಪ್ರವೇಶ ಪ್ರಕ್ರಿಯೆಗಳು ಕರ್ನಾಟಕ ಸರ್ಕಾರದ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (UUCMS) ಪೋರ್ಟಲ್ ಮೂಲಕ ನಡೆಯಲಿದ್ದು, ವಿದ್ಯಾರ್ಥಿಗಳು ಒಂದಕ್ಕಿಂತ ಹೆಚ್ಚಿನ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಕೋರಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಪ್ರತಿ ಕಾಲೇಜುಗಳ ಹಂತದಲ್ಲಿ UUCMS ಹೆಲ್ಪ್ ಡೆಸ್ಕ್ ಗಳನ್ನು ಪ್ರಾರಂಭಿಸಲಾಗಿದ್ದು, ವಿದ್ಯಾರ್ಥಿಗಳು ಪ್ರವೇಶ ಪ್ರಕ್ರಿಯೆ ಸಂಬಂಧ ಯಾವುದೇ ಸಮಸ್ಯೆಗಳಿದ್ದರೂ ಪರಿಹರಿಸಿಕೊಳ್ಳಬಹುದು.
ಇನ್ನು ಕುವೆಂಪು ವಿಶ್ವವಿದ್ಯಾಲಯದಲ್ಲಿ ಈ-ಗವರ‍್ನೆನ್ಸ್ ಘಟಕ ಸ್ಥಾಪಿಸಲಾಗಿದ್ದು, ಎನ್‌ಇಪಿ ಪ್ರವೇಶ ಪ್ರಕ್ರಿಯೆಯ ಯಾವುದೇ ಗೊಂದಲಗಳಿದ್ದರೂ ನಿಭಾಯಿಸಲು ಸನ್ನದ್ಧವಾಗಿದೆ. ಹೆಚ್ಚಿನ ಮಾಹಿತಿಗೆ ಘಟಕದ ಮುಖ್ಯಸ್ಥ ಪ್ರೊ. ಅಶ್ವಕ್ ಅಹಮದ್ ಅವರನ್ನು (98451-42267) ಸಂಪರ್ಕಿಸಬಹುದು.

https://suddikanaja.com/2021/12/27/post-graduate-admission-counseling-on-monday-at-kuvempu-university-more-than-30-sections-of-students-were-enthusiastically-enrolled/

Leave a Reply

Your email address will not be published. Required fields are marked *

error: Content is protected !!