Gaalipata 2 | ಕಿಕ್ಕೇರಿಸಲು‌ ಸಿದ್ಧವಾಗಿದೆ ಗಾಳಿಪಟ‌ 2, ಸಿನಿಮಾ‌ ಪ್ರಚಾರ‌ ತಂಡ‌ ಹೇಳುವುದೇನು?

 

ಸುದ್ದಿ‌ ಕಣಜ.ಕಾಂ | DISTRICT | CINEMA NEWS
ಶಿವಮೊಗ್ಗ: ನಗರಕ್ಕೆ‌ ಮಂಗಳವಾರ ಆಗಮಿಸಿದ್ದ ಗಾಳಿಪಟ‌‌ (Gaalipata) 2 ಸಿನಿಮಾ‌ ಪ್ರಚಾರ‌ ತಂಡ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ಸಿನಿಮಾ ಬಗ್ಗೆ ಮಾಹಿತಿ‌ ಹಂಚಿಕೊಂಡಿದ್ದಾರೆ.
ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ-2’ ಚಿತ್ರ ಆಗಸ್ಟ್ 12ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತಿದೆ. ರಾಜ್ಯದಲ್ಲಿ 250 ಚಿತ್ರಮಂದಿರ(Theator)ಗಳಲ್ಲಿ ಚಿತ್ರ ಬಿಡುಗಡೆ ಕಾಣಲಿದೆ. ಎಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾವ ವೀಕ್ಷಿಸುವಂತೆ ತಂಡ ಮನವಿ ಮಾಡಿದೆ.

ಬಾನು ಮತ್ತು ಭೂಮಿಗೆ ದಾರದ ಸೇತುವೆ‌ ಕಟ್ಟಿರುವ ‘ಗಾಳಿಪಟ 2’ ಜೀವನದ ಪಾಠ ಕಲಿಸಲಿದೆ. ಗೋಲ್ಡನ್ ಸ್ಟಾರ್ ಗಣೇಶ್’ಗೆ‌ ಈ‌ ಚಿತ್ರ ಇನ್ನೊಂದು‌‌ ಸಕ್ಸಸ್ ತಂದುಕೊಡಲಿದೆ. ಚಿತ್ರ ರಿಲೀಸ್ ಗೂ ಮುನ್ನವೇ ಜನರಲ್ಲಿ‌ ಕಿಕ್ಕೇರಿಸಿರುವ ಹಾಡು, ಟ್ರೈಲರ್ ಜನರನ್ನು ಚಿತ್ರಮಂದಿರಕ್ಕೆ ಕರೆತರಲಿವೆ…

ಸಿನಿಮಾ ಪ್ರಚಾರ ತಂಡದ ಕಲಾವಿದೆ ನಯನಾ ಶರತ್ (Nayana sharath) ಮಾತನಾಡಿ, ಗೋಲ್ಡನ್ ಸ್ಟಾರ್ ಗಣೇಶ್ (golden star ganesh) ಅವರಿಗೆ ಮತ್ತೊಮ್ಮೆ ಈ ಚಿತ್ರ ಹೆಸರು ತಂದುಕೊಡಲಿದೆ. ಚಿತ್ರದ ನಾಲ್ಕು ಹಾಡುಗಳು ಯೂಟ್ಯೂಬ್’ನಲ್ಲಿ‌ ಭಾರೀ‌ ಸದ್ದು ಮಾಡಿವೆ.‌ ಟ್ರೈಲರ್ (trailer) ಕೂಡ ಪ್ರೇಕ್ಷಕರ‌ ಮನಗೆದ್ದಿದೆ.‌ ಸೋಶಿಯಲ್ ಮೀಡಿಯಾದಲ್ಲೂ‌ ಪಾಸಿಟಿವ್ ವೈಬ್ ಇದೆ ಎಂದರು.
ಚಿತ್ರದ ಒಂದೊಂದು ದೃಶ್ಯಗಳೂ ಅದ್ಭುತವಾಗಿ ಮೂಡಿಬಂದಿವೆ. ಗಾಳಿಪಟ ಮೊದಲ ಭಾಗದ ಚಿತ್ರದ ಎಳೆಯನ್ನು ಇಟ್ಟುಕೊಂಡು ಈ ಚಿತ್ರವನ್ನು ಮುನ್ನಡೆಸಲಾಗಿದೆ‌. ಇಡೀ‌ ಕುಟುಂಬ‌ ವೀಕ್ಷಿಸಬಹುದಾದ‌‌ ಎಂಟರ್’ಟೈನ್ಮೆಂಟ್ ಮೂವಿ ಇದಾಗಿದೆ ಎಂದು ಹೇಳಿದರು.

READ | ರಿಷಿಬ್‌ಶೆಟ್ಟಿ ಸಿನಿಮಾ‌ ಆಡಿಷನ್‌’ನಲ್ಲಿ ಶಿವಮೊಗ್ಗದ ಮೂವರು ಮಕ್ಕಳು

ಗಾಳಿಪಟ‌-2ರಲ್ಲಿ‌ ತಾರಾಗಣ
ಸಿನಿಮಾ ಪ್ರಚಾರ ತಂಡದ ಮತ್ತೊಬ್ಬ‌ ಕಲಾವಿದ‌ ಮಡೇನೂರು ಮನು ಮಾತನಾಡಿ, ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ(sharmila mandre), ವೈಭವಿ ಶಾಂಡಿಲ್ಯ ಅವರು ನಾಯಕ ಗಣೇಶ್ ಜೊತೆ ಭೂಮಿಕೆಯಲ್ಲಿದ್ದಾರೆ. ನಟ ಅನಂತ್‌ನಾಗ್, ದಿಗಂತ್, ರಂಗಾಯಣ ರಘು, ಸುಧಾ ಬೆಳವಾಡಿ, ಪದ್ಮಜಾರಾವ್, ಬುಲೆಟ್ ಪ್ರಕಾಶ್ ತಾರಾಗಣ(starring)ದಲ್ಲಿದ್ದಾರೆ.
ಉಮಾ ಹಾಗೂ ಎಂ. ರಮೇಶ್ ರೆಡ್ಡಿ ಚಿತ್ರ ನಿರ್ಮಾಣ ಮಾಡಿದ್ದು, ಅರ್ಜುನ್ ಜನ್ಯರ ಸಂಗೀತ, ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣವಿದೆ ಎಂದರು.

‘ಬೆಂಕಿ’ ಗುಟ್ಟು ಬಿಚ್ಚಿಟ್ಟ ನಟ ಅನೀಶ್ ತೇಜೇಶ್ವರ್, ಯಾವಾಗ ರಿಲೀಸ್?

Leave a Reply

Your email address will not be published.