Siddaramotsava | ಸಿದ್ದರಾಮಯ್ಯಗೆ ವಿಶ್ ಮಾಡಿದ ಈಶ್ವರಪ್ಪ!

 

ಸುದ್ದಿ‌ ಕಣಜ.ಕಾಂ | DISTRICT | POLITICAL NEWS
ಶಿವಮೊಗ್ಗ: ಶಾಸಕ‌,‌ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಅವರು ಮಾಜಿ ಮುಖ್ಯಮಂತ್ರಿ, ‌ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ‌ ಜನ್ಮದಿನಕ್ಕೆ‌ ಶುಭ ಕೋರಿದ್ದಾರೆ.‌
ಏನೆಂದು‌ ಶುಭ‌ಕೋರಿದರು?
’75 ವರ್ಷ ತುಂಬುತ್ತಿರುವ ಸಿದ್ದರಾಮಯ್ಯ (Siddaramaiah) ಅವರಿಗೆ ನಾನು ಶುಭ ಹಾರೈಸುತ್ತೇನೆ. ದೇವರು ಅವರಿಗೆ ಇನ್ನೂ ಆಯಸ್ಸು ನೀಡಿ ರಾಜ್ಯ ಹಾಗೂ ರಾಷ್ಟ್ರದ ಸೇವೆ ಮಾಡಲಿ. ಆದರೆ, ಧರ್ಮದ್ರೋಹದ ಕೆಲಸ ಮಾಡುವ ರಾಷ್ಟ್ರದ್ರೋಹಿಗಳಿಗೆ ಅವರು ಬೆಂಬಲ ನೀಡಬಾರದು’ ಎಂದು‌ ಸಲಹೆ ನೀಡಿದರು.

READ | ಕಿಕ್ಕೇರಿಸಲು‌ ಸಿದ್ಧವಾಗಿದೆ ಗಾಳಿಪಟ‌ 2, ಸಿನಿಮಾ‌ ಪ್ರಚಾರ‌ ತಂಡ‌ ಹೇಳುವುದೇನು?

ಸಿದ್ದರಾಮೋತ್ಸವದಿಂದ ಸರ್ಕಾರಕ್ಕೆ‌ ಯಾವ ತೊಂದರೆ‌ ಇಲ್ಲ
ಸಿದ್ಧರಾಮೋತ್ಸವದಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಬದಲಿಗೆ, ಕಾಂಗ್ರೆಸ್ ಪಕ್ಷಕ್ಕೆ ಈ ಕಾರ್ಯಕ್ರಮ‌ ತಿರುಗುಬಾಣ ಆಗಲಿದೆ ಎಂದು ಹೇಳಿದರು.
ಸಿದ್ದರಾಮೋತ್ಸವದ ಬಗ್ಗೆ ಕಾಂಗ್ರೆಸ್’ನಲ್ಲಿಯೇ ಸಾಕಷ್ಟು ಗೊಂದಲ‌ ಶುರುವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಸ್.ಆರ್. ಪಾಟೀಲ್, ಎಂ.ಬಿ. ಪಾಟೀಲ್ ಅವರು ಮುಖ್ಯಮಂತ್ರಿ ಆಗಲು ಹೊರಟಿದ್ದಾರೆ. ‘ಇದುವರೆಗೆ ಕೇಂದ್ರದ ನಾಯಕರು ಹೆಣ್ಣು ಯಾರೆಂದು ಗುರುತಿಸಿಲ್ಲ. ಏತನ್ಮಧ್ಯೆ, ಪಕ್ಷದ ಕೇಂದ್ರದ ನಾಯಕರು ಯಾರು ಸಿಎಂ ಅಭ್ಯರ್ಥಿಯೆಂದೇ ಗುರುತಿಸಿಲ್ಲ.‌ಆದರೂ‌ ಸಿಎಂ ಭಾರೀ ಪೈಪೋಟಿ ಇದೆ ಎಂದರು.

ಸಿದ್ದರಾಮೋತ್ಸವಕ್ಕೆ ತೆರಳುತಿದ್ದ ಬಸ್ ಭೀಕರ ಅಪಘಾತ, ಕಾರಿನಲ್ಲಿದ್ದ ಒಬ್ಬರ ಸಾವು, ಉಳಿದವರ ಸ್ಥಿತಿ ಗಂಭೀರ

Leave a Reply

Your email address will not be published.