Vinay Seebinakere | ಕೊನೆಯುಸಿರೆಳೆದ ಅಪ್ಪಟ ಮಲೆನಾಡ ಪ್ರತಿಭೆ ವಿನಯ್ ಸೀಬಿನಕೆರೆ

 

ಸುದ್ದಿ ಕಣಜ.ಕಾಂ | KARNATAKA | SPORTS NEWS
ಶಿವಮೊಗ್ಗ: ಅಪ್ಪಟ ಮಲೆನಾಡಿನ ಪ್ರತಿಭೆ ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕೃತ (Kreeda  ratna awardee) ವಿನಯ್ ಸೀಬಿನಕೆರೆ(33) ಅನಾರೋಗ್ಯದಿಂದ ನಿಧನರಾಗಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಸೀಬಿನಕೆರೆ ಗ್ರಾಮದ ವಿನಯ್ ಅವರು ಕೆಲವು ದಿನಗಳಿಂದ ಜ್ವರದಿಂದ ಬಳಲುತಿದ್ದರು. ಮೊದಲು ತೀರ್ಥಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಸೀಬಿನಕೆರೆ ಅವರು ಖೋಖೋ ಕ್ರೀಡೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಭಾಜನರಾಗಿದ್ದರು. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಕ್ರೀಡಾಕೂಟದಲ್ಲೂ ಪಾಲ್ಗೊಂಡು ಚಿನ್ನದ ಪದಕ ಗೆದ್ದಿದ್ದರು.

READ  | ಶೋರೂಂನಿಂದಲೇ‌ ಆ್ಯಪಲ್ ಮೊಬೈಲ್ ದೋಚಿ ಎಸ್ಕೆಪ್ ಆಗಿದ್ದ ಯುವಕ‌ ಅರೆಸ್ಟ್ 

ಕೊರೊನಾ ಕಾಲದಲ್ಲಿ ಹುಟ್ಟೂರಿಗೆ ಶಿಫ್ಟ್
ವಿನಯ್ ಸೀಬಿನಕೆರೆ ಅವರು ಬೆಂಗಳೂರಿನಲ್ಲಿ ಉದ್ಯೋಗದ್ದಲ್ಲಿದ್ದರು. ಆದರೆ, ಕೋವಿಡ್ ಸಂದರ್ಭದಲ್ಲಿ ಹುಟ್ಟೂರು ತೀರ್ಥಹಳ್ಳಿಗೆ ಸ್ಥಳಾಂತರಗೊಂಡಿದ್ದರು. ಏಕಲವ್ಯ ಸ್ಪೋರ್ಟ್ಸ್ ಕ್ಲಬ್ (Ekalavya sports club) ಪ್ರತಿನಿಧಿಸುತ್ತಿದ್ದ ಇವರು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಖೋ ಖೋ ತಂಡವನ್ನು ಪ್ರತಿನಿಧಿಸುತ್ತಿದ್ದರು. ಇವರ ಸಾವಿನಿಂದ ಉದಯೋನ್ಮುಖ ಕ್ರೀಡಾಪಟುವನ್ನು ಕ್ರೀಡಾಕ್ಷೇತ್ರ ಕಳೆದುಕೊಂಡಂತಾಗಿದೆ. ವಿನಯ್ ಸಾವಿನ ಸುದ್ದಿ ಕೇಳಿದ್ದೇ ಮನೆಯಲ್ಲಿ ಆಕ್ರಂದನ ಮನೆ ಮಾಡಿದೆ. ಇವರ ಮನೆಗೆ ಸ್ಥಳೀಯರು ಭೇಟಿ ನೀಡಿ ಸಾಂತ್ವನ ಹೇಳುತ್ತಿದ್ದಾರೆ.

ಹೊಸ ವರ್ಷಕ್ಕೆ ತೆರೆಕಂಡ `ಭಾರತೀಪುರ ಕ್ರಾಸ್ ಇಂದ ಚೂರ್ ಮುಂದೆ’, ಹಾರರ್, ಸಸ್ಪೆನ್ಸ್ ಥ್ರಿಲ್ಲರ್ ಶಾರ್ಟ್ ಮೂವಿ

Leave a Reply

Your email address will not be published.