ಸುದ್ದಿ ಕಣಜ.ಕಾಂ | TALUK | POLITICAL NEWS
ಭದ್ರಾವತಿ: ವೈಯಕ್ತಿಕ ಕಾರಣಗಳಿಂದ ಇತ್ತೀಚೆಗೆ ಗಲಾಟೆ ನಡೆದಿದೆಯೇ ವಿನಹ ಇದು ಕೋಮುಗಲಭೆಯಲ್ಲ ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು.
ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಗಲಾಟೆಯನ್ನು ಬಿಜೆಪಿಯವರು ಕೋಮುಗಲಭೆ ಎಂದು ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದರು.
ಹಲ್ಲೆ ನಡೆಸಿದ ಮುಬಾರಕ್ ಮತ್ತು ಹಲ್ಲೆಗೊಳಗಾದ ಸುನೀಲ್ ಒಟ್ಟಿಗೆ ಜೂಜಾಡುತ್ತಿದ್ದವರು. ಅವರ ನಡುವೆ ವೈಯಕ್ತಿಕ ದ್ವೇಷದಿಂದ ಗಲಾಟೆ ನಡೆದಿದೆ. ಚಾಕುವಿನಿಂದ ಇರಿಯಲಾಗಿದೆ. ಆದರೆ, ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯವರು ಇದಕ್ಕೆ ಕೋಮು ಬಣ್ಣ ಬಳಿಯುತಿದ್ದಾರೆ ಎಂದು ಆರೋಪಿಸಿದರು.
READ | ಅಪರಾಧಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ
ಮಕ್ಕಳ ಮೇಲೆ ಆಣೆ, ಇದು ಕೋಮುಗಲಭೆ ಅಲ್ಲ
‘ನನ್ನ ಮಕ್ಕಳ ಮೇಲೆ, ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ, ಇದು ಕೋಮುಗಲಭೆಯಲ್ಲ. ಅವರು ಬೇಕಾದರೆ ತಮ್ಮ ಮಕ್ಕಳ ಮೇಲೆ ಆಣೆ ಮಾಡಲಿ’ ಎಂದು ಸವಾಲು ಹಾಕಿದರು.
ರಾಜಕೀಯ ದ್ವೇಷದಿಂದ ಅನುದಾನ ಬಿಡುಗಡೆ ಮಾಡುತ್ತಿಲ್ಲ
ಭದ್ರಾವತಿಯಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳು ಸಾಕಷ್ಟಿದ್ದು, ಅದರ ಬಗ್ಗೆ ಬಿಜೆಪಿ ತಲೆಕೆಡಿಸಿಕೊಳ್ಳುತ್ತಿಲ್ಲ. ಕ್ಷೇತ್ರದಲ್ಲಿ 500 ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ಕೇಳಿದ್ದೆ. ಆದರೆ, ನಾನು ಕಾಂಗ್ರೆಸ್ ಶಾಸಕನೆಂದು ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಹಿಂದುತ್ವ ಎನ್ನುವ ಬಿಜೆಪಿ ದೇವಸ್ಥಾನಗಳಿಗೆ ಅನುದಾನ ನೀಡಬೇಕು. ಆದರೆ, ರಾಜಕೀಯ ದ್ವೇಷದಿಂದಾಗಿ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದರು.
https://suddikanaja.com/2021/10/19/bs-yediyurappa-statement-about-sidelining-in-bjp/