ಸುದ್ದಿ ಕಣಜ.ಕಾಂ | TALUK | CRIME NEWS
ತೀರ್ಥಹಳ್ಳಿ: ತಾಲೂಕಿನ ತೂದೂರು ಸಮೀಪದ ಗಬಡಿ ರೈಸ್ ಮಿಲ್ ಮುಂಭಾಗ ಬೈಕ್ ಹೊಂಡಕ್ಕೆ ಬಿದ್ದು ಬೈಕ್ ಸವಾರ ಮೃತಪಟ್ಟಿರುವ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ.
READ | ಅಪರಾಧಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ
ತೀರ್ಥಹಳ್ಳಿ ತಾಲೂಕಿನ ನಳಿನಕೊಪ್ಪ ನಿವಾಸಿ ರವಿ ನಾಯಕ್(37) ಮೃತರು. ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಹೋಗುವಾಗ ಅವಘಡ ಸಂಭವಿಸಿದೆ. ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್.ಐ ನವೀನ್ ಮಠಪತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.