Section 144 | ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಮತ್ತೆ ಮುಂದುವರಿಕೆ, ನಿಯಮದಲ್ಲಿ‌ ಕೆಲವು ಸಡಿಲಿಕೆ

Section 144

 

 

ಸುದ್ದಿ ಕಣಜ.ಕಾಂ | 19 AUG 2022 | SECTION 144
ಶಿವಮೊಗ್ಗ: ವೀರ ಸಾವರ್ಕರ್ ಅವರ ಫೋಟೊ ತೆರವುಗೊಳಿಸಿದ ಕಾರಣಕ್ಕೆ‌ ಉಲ್ಬಣಗೊಂಡಿದ್ದ‌ ಗಲಾಟೆ ಹಿನ್ನೆಲೆ ವಿಧಿಸಿದ್ದ ನಿಷೇಧಾಜ್ಞೆ ಮತ್ತೊಮ್ಮೆ ಮುಂದುವರಿಸಲಾಗಿದೆ.

READ | ನಿಷೇಧಾಜ್ಞೆ ಮುಂದುವರಿಕೆ, ಎಲ್ಲಿಯವರೆಗೆ ಇರಲಿದೆ ಸೆಕ್ಷನ್ 144?

ಜಿಲ್ಲಾಧಿಕಾರಿಗಳು ಈ ಹಿಂದೆ ಹೊರಡಿಸಿದ ಆದೇಶದ ಪ್ರಕಾರ ಆಗಸಯ 20ರ ಬೆಳಗ್ಗೆ ನಿಷೇಧಾಜ್ಞೆ ಅಂತ್ಯವಾಗಬೇಕಿತ್ತು. ಆದರೆ, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ನಿಷೇಧಾಜ್ಞೆಯನ್ನು ಆಗಸ್ಟ್ 23ರ ಬೆಳಗ್ಗೆ 6 ಗಂಟೆಯವರೆಗೆ ಮುಂದುವರಿಸಲಾಗಿದೆ. ಹಳೆಯ ನಿಯಮಗಳೇ ಅನ್ವಯವಾಗಲಿವೆ. ಬೈಕ್ ಸವಾರರಿಗೆ ಡಬಲ್ ರೈಡಿಂಗ್ ಗೆ ಅವಕಾಶ ನೀಡಲಾಗಿದೆ. ಅಂಗಡಿ ಮತ್ತು ಚಿತ್ರ ಮಂದಿರಗಳಿಗೆ ರಾತ್ರಿ 9 ಗಂಟೆಯ ಬದಲು 10ರ ವರೆಗೆ ಕಾಲಾವಕಾಶ ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!