ಸುದ್ದಿ ಕಣಜ.ಕಾಂ | DISTRICT | 24 AUG 2022
ಶಿವಮೊಗ್ಗ: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣದ ಆರೋಪಗಳು ದೃಢಪಟ್ಟ ಹಿನ್ನೆಲೆ ವ್ಯಕ್ತಿಯೊಬ್ಬರಿಗೆ 10 ವರ್ಷ ಜೈಲು, ₹60,000 ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜೆ.ಎಸ್.ಮೋಹನ್ ತೀರ್ಪು ನೀಡಿದ್ದಾರೆ.
ಸೊರಬ ತಾಲ್ಲೂಕಿನ ವಾಸಿ ಹನುಮಂತಪ್ಪ (45) ಶಿಕ್ಷೆಗೆ ಗುರಿಯಾದಾತ. ಈತ 2018ರ ಜುಲೈ 31ರಂದು ಗ್ರಾಮವೊಂದರ 14 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಆತನ ವಿರುದ್ಧ ಐಪಿಸಿ ಕಲಂ 366, 376(2), 506 ಮತ್ತು ಪೋಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
READ | ಶಿವಮೊಗ್ಗದಲ್ಲಿ ‘ಸಿಂಗಲ್ ವಿಂಡೋ’ ಆರಂಭ, ಎಲ್ಲೆಲ್ಲಿ ಸೇವೆ ಲಭ್ಯ?
ಆಗಿನ ತನಿಖಾಧಿಕಾರಿ ಸೊರಬ ವೃತ್ತದ ಸಿಪಿಐ ಉಮಾಪತಿ ಅವರು ಪ್ರಕರಣದ ತನಿಖೆ ಕೈಗೊಂಡು ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಅನ್ನು ಸಲ್ಲಿಸಿರುತ್ತಾರೆ.
ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಹರಿಪ್ರಸಾದ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
https://suddikanaja.com/2022/07/16/conviction-by-shimoga-court/