Good News | ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆಗೆ ತಿದ್ದುಪಡಿಗೆ ರಾಜ್ಯ ಸಚಿವ ಸಂಪುಟದಲ್ಲಿ ಗ್ರೀನ್ ಸಿಗ್ನಲ್, ಏನು ಪ್ರಯೋಜನ?

Vidhan saudha

 

 

ಸುದ್ದಿ ಕಣಜ.ಕಾಂ | KARNATAKA | 25 AUG 2022
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಭೂ ಕಬಳಿಕೆ (ನಿಷೇಧ) ಕಾಯ್ದೆ  (Karnataka Land Acquisition (Prohibition) Act ) 2011ರ ಕಲಂ 2(ಡಿ)ಗೆ ತಿದ್ದುಪಡಿ ತರಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ಬಹುದಿನಗಳ ಜನತೆಯ ಬೇಡಿಕೆಗೆ, ಸ್ಪಂದಿಸಿದಂತಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

READ | ಶಿವಮೊಗ್ಗದಲ್ಲಿ‌ ಗಣೇಶ ಹಬ್ಬ ಹಿನ್ನೆಲೆ ಇಬ್ಬರಿಗೆ ಗಡಿಪಾರು, ಕಾರಣವೇನು?

ಪ್ರಸ್ತಾವಿತ ಕರಡು ತಿದ್ದುಪಡಿಯು, ಯಾವುದೇ ರೀತಿಯಲ್ಲಿಯೂ ವಿಧೇಯಕದ ಮೂಲ ಕರಡಿಗೆ ವಿರುದ್ಧವಾಗಿರದೆ, ಗ್ರಾಮೀಣ ಪ್ರದೇಶದ ರೈತರ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುವುದರಿಂದ ರಕ್ಷಣೆ ದೊರೆಯುತ್ತದೆ.
ಸಣ್ಣ ಹಾಗೂ ಅತಿ ಸಣ್ಣ ರೈತರು ಹಾಗೂ ಜನಸಾಮಾನ್ಯರು, ಬಗರ್ ಹುಕುಂ ಸಾಗುವಳಿ ಸಂಬಂಧ ಬೆಂಗಳೂರಿನಲ್ಲಿ ಸ್ಥಾಪಿತವಾದ ವಿಶೇಷ ನ್ಯಾಯಾಲಯಕ್ಕೆ ಅಲೆಯುವುದನ್ನು ತಪ್ಪಿಸಿದಂತಾಗುತ್ತದೆ.
ಈ ಕುರಿತು, ಸೂಕ್ತ ನಿರ್ಧಾರಕ್ಕೆ ಬಂದು, ವಿಧೇಯಕಕ್ಕೆ ತಿದ್ದುಪಡಿ ತರಲು ನಿರ್ಧರಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಆರಗ ಜ್ಞಾನೇಂದ್ರ ಧನ್ಯವಾದಗಳನ್ನು ತಿಳಿಸಿದ್ದಾರೆ.

https://suddikanaja.com/2021/04/01/final-report-of-land-sliding-in-malendu-submitted-to-cm-yadiyurappa/

Leave a Reply

Your email address will not be published. Required fields are marked *

error: Content is protected !!