ಸುದ್ದಿ ಕಣಜ.ಕಾಂ | DISTRICT | JOB JUNCTION
ಶಿವಮೊಗ್ಗ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ (district employment exchange) ವತಿಯಿಂದ ಆಗಸ್ಟ್ 12ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳ ನೇರ ಸಂದರ್ಶನ ಆಯೋಜಿಸಿದೆ.
READ | ಓದಲೇ ಬೇಕಾದ ಸುದ್ದಿ- ಕೋಳಿ, ನಾಯಿಗಳಿಗೂ ಕಾಳಜಿ ಕೇಂದ್ರ!
ಯಾರೆಲ್ಲ ಭಾಗವಹಿಸಬಹುದು?
ಈ ನೇರ ಸಂದರ್ಶನದಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ಎಸ್.ಎಸ್.ಎಲ್.ಸಿ.(sslc), ಪಿಯುಸಿ(puc), ಐಟಿಐ(ITI), ಡಿಪ್ಲೊಮೋ(Diploma), ಯಾವುದೇ ಪದವಿ(any degree)ಗಳಲ್ಲಿ ತೇರ್ಗಡೆ ಹೊಂದಿರುವ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.
ಆಸಕ್ತರು ತಮ್ಮ ಬಯೋಡಾಟಾ (Bio-data)ಮತ್ತು ಆಧಾರ್ ಕಾರ್ಡ್ (aadhar card) ಪ್ರತಿಗಳೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಗುತ್ಯಪ್ಪ ಕಾಲೋನಿ, ಪಂಪಾನಗರ 2ನೇ ಕ್ರಾಸ್, ಸಾಗರ ರಸ್ತೆ, ಶಿವಮೊಗ್ಗ ಇಲ್ಲಿಗೆ ಹಾಜರಾಗುವಂತೆ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08182-255293, 9380663606 , 9482023412 ಸಂಪರ್ಕಿಸಲು ಕೋರಲಾಗಿದೆ.
https://suddikanaja.com/2021/12/19/jobs-on-iti-at-hindustan-aeronautics-limited/