| HIGHLIGHTS |
- ನೈಋತ್ಯ ರೈಲ್ವೆಯು ₹227.10 ಕೋಟಿ ಆದಾಯ ಗಳಿಸಿದ್ದು, ಸಾರ್ವಕಾಲಿಕ ದಾಖಲೆಯಾಗಿದೆ
- 2021-22 ರ ಅವಧಿಯಲ್ಲಿ ಗಳಿಸಿದ ಆದಾಯಕ್ಕೆ ಹೋಲಿಸಿದರೆ 2022ರ ಆಗಸ್ಟ್ ವರೆಗೆ ₹1084.89 ಕೋಟಿ ಆದಾಯ
- ಪ್ರಸಕ್ತ ಹಣಕಾಸು ವರ್ಷದಲ್ಲಿ 58.31 ಮಿಲಿಯನ್ ಪ್ರಯಾಣಿಕರನ್ನು ಸಾಗಿಸುವ ಪ್ರಮುಖ ಮೈಲಿಗಲ್ಲು ಸ್ಥಾಪನೆ
ಸುದ್ದಿ ಕಣಜ.ಕಾಂ | KARNATAKA | 07 SEP 2022
ಶಿವಮೊಗ್ಗ: ಆಗಸ್ಟ್ 2022 ರಲ್ಲಿ ನೈಋತ್ಯ ರೈಲ್ವೆಯು (South Western Railway) ಪ್ರಯಾಣಿಕರ ರೈಲು ಸಂಚಾರದಿಂದ ₹227.10 ಕೋಟಿ ಆದಾಯವನ್ನು ಗಳಿಸಿದ್ದು ( revenue earned) ಇದು ಸಾರ್ವಕಾಲಿಕ ದಾಖಲೆ(Record)ಯಾಗಿದೆ. 2022ರ ಏಪ್ರಿಲ್’ನಿಂದ ಆಗಸ್ಟ್ ಅವಧಿಯಲ್ಲಿ ನೈಋತ್ಯ ರೈಲ್ವೆಯು 50 ಮಿಲಿಯನ್ ಪ್ರಯಾಣಿಕರನ್ನು ಸಾಗಿಸಿದೆ.
2021-22 ರ ಅವಧಿಯಲ್ಲಿ ಗಳಿಸಿದ ಆದಾಯಕ್ಕೆ ಹೋಲಿಸಿದರೆ (₹450.72 ಕೋಟಿ), ನೈಋತ್ಯ ರೈಲ್ವೆಯು ಪ್ರಸ್ತುತ ಹಣಕಾಸು ವರ್ಷದಲ್ಲಿ 2022 ಆಗಸ್ಟ್’ರವರೆಗಿನ ಪ್ರಯಾಣಿಕ ರೈಲು ಸಂಚಾರದಿಂದ ಆದಾಯ ಗಳಿಕೆಯಲ್ಲಿ ₹1084.89 ಕೋಟಿ ಆದಾಯವನ್ನು ಗಳಿಸಿದೆ. ಇದು ಶೇ.140.70ರಷ್ಟು ಹೆಚ್ಚಳವಾಗಿದೆ.
READ | ಅರಣ್ಯ ಸಚಿವ ಉಮೇಶ ಕತ್ತಿ ನಿಧನ, ಸಿಎಂ ಸಂತಾಪ
2022ರ ಆಗಸ್ಟ್’ನಲ್ಲಿ 12.21 ಮಿಲಿಯನ್ ಪ್ರಯಾಣಿಕರನ್ನು (passengers) ಸಾಗಿಸಿದ್ದು, 2021ರ ಆಗಸ್ಟ್’ಗೆ ಹೋಲಿಸಿದಲ್ಲಿ (5.83 ಮಿಲಿಯನ್) ಗಣನೀಯ ಏರಿಕೆಯಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 58.31 ಮಿಲಿಯನ್ ಪ್ರಯಾಣಿಕರನ್ನು ಸಾಗಿಸುವ ಪ್ರಮುಖ ಮೈಲಿಗಲ್ಲನ್ನು ಸಾಧಿಸಲು ಕಾರಣವಾಗಿದೆ.
23 ಗಮ್ಯ ಸ್ಥಾನಗಳಿಗೆ ವಿಶೇಷ ರೈಲು ಸೇವೆ
ಪ್ರಯಾಣಿಕರ ಬೇಡಿಕೆಗಳನ್ನು ಪೂರೈಸಲು ಆಗಸ್ಟ್ ತಿಂಗಳಲ್ಲಿ 23 ವಿಶೇಷ ರೈಲು ಸೇವೆಗಳನ್ನು ವಿವಿಧ ಗಮ್ಯಸ್ಥಾನಗಳಿಗೆ ಸಂಚರಿಸಲಾಗಿದೆ. ಇದಲ್ಲದೆ, ಪ್ರಯಾಣಿಸುವ ಸಾರ್ವಜನಿಕರ ಬೇಡಿಕೆಗಳನ್ನು ಪೂರೈಸಲು ಮತ್ತು ಆದಾಯವನ್ನು ಹೆಚ್ಚಿಸಲು, ಹಬ್ಬದ ಋತುವಿನಲ್ಲಿ ವಿವಿಧ ಸ್ಥಳಗಳಿಗೆ ವಿಶೇಷ ರೈಲುಗಳನ್ನು ಸಂಚರಿಸಲು ಸಹ ಪ್ರಸ್ತಾಪಿಸಲಾಗಿದೆ. ಅಲ್ಲದೆ, ಹಬ್ಬದ/ ರಜೆಯ ಅವಧಿಯಲ್ಲಿ ಹೆಚ್ಚಿನ ಪ್ರಯಾಣದ ದಟ್ಟಣೆಯನ್ನು ತೆರವುಗೊಳಿಸಲು ಹೆಚ್ಚುವರಿ ಬೋಗಿಗಳನ್ನು ಅಳವಡಿಸಲು ಯೋಜಿಸಲಾಗುತ್ತಿದೆ.
ಕೋವಿಡ್-ಪೂರ್ವ ಅವಧಿಗೆ ಹೋಲಿಸಿದರೆ ನೈಋತ್ಯ ರೈಲ್ವೆಯು ಶೇ.99 ಕ್ಕಿಂತ ಹೆಚ್ಚು ರೈಲು ಸೇವೆಗಳನ್ನು ಪುನರಾರಂಭಿಸಲಾಗಿದೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ ಎಂದು ಹುಬ್ಬಳ್ಳಿಯ ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ತಿಳಿಸಿದ್ದಾರೆ.
https://suddikanaja.com/2021/03/31/ks-eshwarappa-wrote-latter-against-yadiyurappa-to-bjp-leaders/