| HIGHLIGHTS |
- ಶಿಫಾರಸ್ಸು ಮಾಡಲಾದ ₹101.86 ಕೋಟಿಗಳ 1,123 ಕಾಮಗಾರಿಗಳಿಗೆ ಸರ್ಕಾರ ಅನುಮೋದನೆ ನೀಡಿದೆ
- ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ(MADB) ಮಲೆನಾಡು ವ್ಯಾಪ್ತಿಯಲ್ಲಿ ಕಾಲುಸಂಕ, ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಂಡಿದೆ
ಸುದ್ದಿ ಕಣಜ.ಕಾಂ | KARNATAKA | 07 SEP 2022
ಶಿವಮೊಗ್ಗ: ಮಲೆನಾಡು ಅಭಿವೃದ್ಧಿ ಮಂಡಳಿ (ಎಂಎಡಿಬಿ) ವತಿಯಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶಿಫಾರಸ್ಸು ಮಾಡಲಾದ ₹101.86 ಕೋಟಿಗಳ 1,123 ಕಾಮಗಾರಿಗಳಿಗೆ ಸರ್ಕಾರ ಅನುಮೋದನೆ ನೀಡಿದ್ದು, ಶೀಘ್ರದಲ್ಲಿ ಈ ಎಲ್ಲ ಕಾಮಗಾರಿಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮಲೆನಾಡು ಅಭಿವೃದ್ಧಿ ಪ್ರಾಧಿಕಾರ(Malnad Area Development Board) ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಹೇಳಿದರು.
READ | ನಾಳೆ ಭದ್ರಾವತಿಯಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ, ಬಿಗಿ ಪೊಲೀಸ್ ಭದ್ರತೆ
ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುಮೋದನೆಗೊಂಡಿರುವ ಈ ಕಾಮಗಾರಿಗಳನ್ನು 2023ರ ಮಾರ್ಚ್ ಮಾಸಾಂತ್ಯದೊಳಗಾಗಿ ಪೂರ್ಣಗೊಳಿಸುವಂತೆ ಹಾಗೂ ಕೈಗೊಳ್ಳುವ ಕಾಮಗಾರಿಗಳು ಗುಣಮಟ್ಟದ್ದಾಗಿರುವಂತೆ ನೋಡಿಕೊಳ್ಳಲು ಸಂಬಂಧಿಸಿದ ಪ್ರದೇಶದ ವ್ಯಾಪ್ತಿಯ ಶಾಸಕರು, ಸಂಸದರು ಹಾಗೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ತಾವು ಅಧಿಕಾರ ವಹಿಸಿಕೊಂಡ ದಿನದಿಂದ ಇಂದಿನವರೆಗೆ ಹಿಂದಿನ ಅವಧಿಯಲ್ಲಿ ಬಾಕಿ ಉಳಿದಿದ್ದ ಸುಮಾರು 1,397 ಮುಂದುವರಿದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿದ್ದ ಅವಧಿಯಲ್ಲಿ ₹10 ಕೋಟಿ ವಿಶೇಷ ಅನುದಾನವನ್ನು ಸರ್ಕಾರದಿಂದ ಪಡೆದು ಕಾರ್ಯನಿರ್ವಹಿಸಲಾಗಿದೆ ಎಂದರು.
ಈ ಅವಧಿಯಲ್ಲಿ ಸಕಾಲದಲ್ಲಿ ಅನುದಾನ ನೀಡಿ, ಉತ್ತಮ ಕಾರ್ಯ ನಿರ್ವಹಿಸುವಲ್ಲಿ ಸಹಕರಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು, ಹಾಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹಾಗೂ ಸಮಿತಿಯ ಪದಾಧಿಕಾರಿಗಳು ಮತ್ತು ಪ್ರಾಧಿಕಾರದ ವ್ಯಾಪ್ತಿಯ ಚುನಾಯಿತ ಪ್ರತಿನಿಧಿಗಳು, ಎಲ್ಲ ಹಂತದ ಅನುಷ್ಠಾನಾಧಿಕಾರಿಗಳು ಅಭಿನಂದನಾರ್ಹರು.
| ಕೆ.ಎಸ್.ಗುರುಮೂರ್ತಿ, ಅಧ್ಯಕ್ಷರು, ಮಲೆನಾಡು ಅಭಿವೃದ್ಧಿ ಪ್ರಾಧಿಕಾರ
ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ ಹೇಳಿದ್ದಿಷ್ಟು
- 2021-22ನೇ ಸಾಲಿನ ಅಂತ್ಯದೊಳಗಾಗಿ ಕೈಗೆತ್ತಿಕೊಳ್ಳಲಾಗಿರುವ ಎಲ್ಲ ಮುಂದುವರಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಅವುಗಳ ಪೈಕಿ ವಿವಿಧ ಕಾರಣಗಳಿಗಾಗಿ 22 ಹಳೆಯ ಕಾಮಗಾರಿಗಳನ್ನು ಹೊರತುಪಡಿಸಿ 1,154 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.
- ಶಾಸಕರುಗಳ ಪ್ರಸ್ತಾಪಿಸಿದ ಕಾಮಗಾರಿಗಳ ಸ್ಥಳದ ಸಮಸ್ಯೆ, ಅಧಿಕ ಮಳೆ ಮುಂತಾದ ಕಾರಣಗಳಿಂದ 233 ಕಾಮಗಾರಿಗಳು ಪ್ರಗತಿಯಲ್ಲಿವೆ. ಇವುಗಳಲ್ಲಿ 2022ರ ಆಗಸ್ಟ್ ತಿಂಗಳಾಂತ್ಯಕ್ಕೆ 94 ಕಾಮಗಾರಿಗಳನ್ನು ಪೂರ್ಣಗೊಳಿಸಿ ನನ್ನ ಅಧಿಕಾರಾವಧಿಯಲ್ಲಿ 1397 ಕಾಮಗಾರಿಗಳ ಪೈಕಿ 1248 ಕಾಮಗಾರಿಗಳನ್ನು ಪೂರ್ಣಗೊಳಿಸಿದ ಹೆಮ್ಮೆ ಇದೆ
- ಕಳೆದ ಒಂದು ದಶಕದಲ್ಲಿ ಗಮನಿಸಿದಾಗ 2020-21ನೇ ಸಾಲಿನಲ್ಲಿ ₹51.67ಕೋಟಿ ಮೌಲ್ಯದ 748 ಕಾಮಗಾರಿಗಳ ಪ್ರಗತಿ ಸಾಧಿಸಿರುವುದು ಮಂಡಳಿಯ ಇತಿಹಾಸದಲ್ಲಿ ಅತೀ ಹೆಚ್ಚು.
- 2021-20ನೇ ಸಾಲಿನಲ್ಲಿ ₹28.13 ಕೋಟಿಯ 406 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಪ್ರಸ್ತುತ 2022-23ನೇ ಸಾಲಿನಲ್ಲಿ ಆಗಸ್ಟ್ ಮಾಸಾಂತ್ಯದವರೆಗೆ 94 ಕಾಮಗಾರಿಗಳನ್ನು ಪೂರ್ಣಗೊಳಿಸಿ ₹6.45 ಕೋಟಿಗಳ ಆರ್ಥಿಕ ಸಾಧನೆ ಮಾಡಿದಂತಾಗಿದೆ.
- 831 ರಸ್ತೆ ಮತ್ತು ಸೇತುವೆಗಳು, 159 ಸಮುದಾಯ ಭವನಗಳು, 149ಶಾಲಾ ಕಟ್ಟಡಗಳು, 10 ಅಂಗನವಾಡಿ ಮತ್ತು ಇತರೆ ಕಟ್ಟಡಗಳು ಹಾಗೂ ಬಸ್ ಶೆಲ್ಟರ್, ಕಾಲುಸಂಕ ಸೇರಿದಂತೆ ವಿವಿಧ ರೀತಿಯ 99 ಕಾಮಗಾರಿಗಳು ಸೇರಿದಂತೆ 1,397 ಕಾಮಗಾರಿಗಳ ಪೈಕಿ 1248 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.
ಮಂಡಳಿಯ ಕಾರ್ಯದರ್ಶಿ ಕೆ.ಎಸ್.ಮಣಿ, ಶ್ರೀನಿವಾಸ್, ವಿಜಯ್, ಶಿವಾನಂದ್, ಬಂಗಾರಪ್ಪ ಉಪಸ್ಥಿತರಿದ್ದರು.
https://suddikanaja.com/2022/04/01/shimoga-smart-city-work-progress/