Hindu mahasabha Ganapathi | ಸತತ 18 ಗಂಟೆಗಳ ಮೆರವಣಿಗೆ ಬಳಿಕ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

hindu mahasabha Ganapathi drown

 

 

| ಶುಕ್ರವಾರ ಬೆಳಗ್ಗೆ 10 ಗಂಟೆಗೆ ಆರಂಭಗೊಂಡ ಮೆರವಣಿಗೆ
| ಶನಿವಾರ ಬೆಳಗಿನ ಜಾವ 4 ಗಂಟೆಗೆ ಭೀಮನ ಮಡುವಿನಲ್ಲಿ ಗಣಪತಿ ವಿಸರ್ಜನೆ
| ಎರಡು ವರ್ಷಗಳ ಬಳಿಕ ಶಿವಮೊಗ್ಗದಲ್ಲಿ ಹಬ್ಬದ ವಾತಾವರಣ
| ಪೊಲೀಸರ ಬಿಗಿ ಬಂದೋಬಸ್ತ್ ನಡುವೆ ಸಾಗಿದ್ದ ಹಿಂದೂ ಮಹಾಸಭಾ ಗಣಪತಿ


ಸುದ್ದಿ ಕಣಜ.ಕಾಂ | DISTRICT | 10 SEP 2022
ಶಿವಮೊಗ್ಗ: ಹಿಂದೂ ಸಂಘಟನೆ ಮಹಾಮಂಡಳ (ಹಿಂದೂ ಮಹಾಸಭಾ-Hindu mahasabha Ganapathi ) ಗಣಪತಿಯನ್ನು ಶನಿವಾರ ಬೆಳಗಿನ ಜಾವ 4 ಗಂಟೆಗೆ ತುಂಗಾನದಿ (Tunga river)ಯ ಭೀಮನ ಮಡುವಿನಲ್ಲಿ ವಿಸರ್ಜನೆ ಮಾಡಲಾಯಿತು.

VIDEO REPORT | ಹೇಗಿತ್ತು ಎರಡು ವರ್ಷಗಳ ಬಳಿಕ ನಡೆದ ಹಿಂದೂ ಸಂಘಟನೆ ಮಹಾಮಂಡಳಿ ರಾಜಬೀದಿ ಉತ್ಸವ, ಇಲ್ಲಿದೆ ಕಂಪ್ಲೀಟ್ ವಿಡಿಯೋ…

READ | ಶಿವಮೊಗ್ಗದಲ್ಲಿ ಹಬ್ಬದ ವಾತಾವರಣ, ಖಾಕಿ ಕಾವಲಿನಲ್ಲಿ ಇಡೀ ನಗರ, ಈ ಸಲದ ವಿಶೇಷಗಳೇನು?

ಸತತ 18 ಗಂಟೆಗಳ ಮೆರವಣಿಗೆ
ಬೆಳಗ್ಗೆ 10 ಗಂಟೆಯ ಹೊತ್ತಿಗೆ ಆರಂಭಗೊಂಡ ಗಣಪತಿಯ ಮೆರವಣಿಗೆಯು ಮಧ್ಯಾಹ್ನ ಗಂಟೆಯಾದರೂ ರಾಮಣ್ಣ ಶ್ರೇಷ್ಠಿ ಪಾರ್ಕ್ (Ramanna shreshthi park) ಬಳಿಯೇ ಇತ್ತು. ಗಾಂಧಿ ಬಜಾರ್ (Gandhi bazar) ದಾಟಿ ಶಿವಪ್ಪ ನಾಯಕ ವೃತ್ತ (Shivappa nayak circle) ತಲುಪಲು ರಾತ್ರಿ 8 ಗಂಟೆಯಾಗಿತ್ತು. ಮೆರವಣಿಗೆಯು ಅಮೀರ್ ಅಹಮ್ಮದ್ ವೃತ್ತ(AA Circle)ಕ್ಕೆ ಆಗಮಿಸುತ್ತಿದ್ದಂತೆಯೇ ಲಕ್ಷಾಂತರ ಜನರು ಜೈಶ್ರೀರಾಮ್ (Jai shri ram) ಘೋಷಣೆಗಳನ್ನು ಕೂಗಿದರು. ವೀರ ಸಾವರ್ಕರ್ (Veer savarkar) ಕಮಾನು ನಿರ್ಮಿಸಿದ ಜಾಗದಲ್ಲಿ ಗಣಪತಿ ಮೂರ್ತಿಗೆ ಹೂವಿನ ಹಾರ ಹಾಕಲಾಯಿತು. ನೆಹರೂ ರಸ್ತೆ ದಾಟಿ ಗೋಪಿ ವೃತ್ತಕ್ಕೆ ತಲುಪಲು ರಾತ್ರಿ 9.45 ಗಂಟೆಯಾಗಿತ್ತು. ಅಲ್ಲಿಂದ ದುರ್ಗಿಗುಡಿ, ಜೈಲು ವೃತ್ತ, ಕುವೆಂಪು ರಸ್ತೆ ಮಾರ್ಗದಿಂದ ಸವಳಂಗ ರಸ್ತೆ, ಕಾನ್ವೆಂಟ್ ರಸ್ತೆ, ಕೋಟೆ ರಸ್ತೆ ಮೂಲಕ ಶ್ರೀ ಭೀಮೇಶ್ವರ ದೇವಸ್ಥಾನಕ್ಕೆ ತಲುಪಿತು. ನಂತರ, ವಿಸರ್ಜನೆ ಮಾಡಲಾಯಿತು.

https://suddikanaja.com/2022/09/09/hindu-mahasabha-ganapathi-procession-at-shimoga/

Leave a Reply

Your email address will not be published. Required fields are marked *

error: Content is protected !!