ಸುದ್ದಿ ಕಣಜ.ಕಾಂ | DISTRICT | 17 SEP 2022
ಶಿವಮೊಗ್ಗ: ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (Shimoga Institute of Medical Sciences -SIMS)ಯಲ್ಲಿ ತುರ್ತು ಚಿಕಿತ್ಸಾ ವೈದ್ಯಾಧಿಕಾರಿ 6 ಮತ್ತು ಮಹಿಳಾ ವೈದ್ಯಾಧಿಕಾರಿ 1 ಹುದ್ದೆಗಳು ಮಂಜೂರಾಗಿದ್ದು, ಸದರಿ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಸಂಚಿತ ವೇತನದಡಿಯಲ್ಲಿ ನೇಮಕಾತಿ ಮಾಡಿಕೊಳ್ಳಲು ಉದ್ದೇಶಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ.
READ | ಮದುವೆ ಗಂಡಾಗಲು ನಾನು ರೆಡಿ: ಕೆ.ಎಸ್.ಈಶ್ವರಪ್ಪ
ಮಾಸಿಕ 40 ಸಾವಿರ ರೂ. ಸಂಚಿತ ವೇತನ
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 40,000 ರೂ.ಗಳ ಸಂಚಿತ ವೇತನ ನೀಡಲಾಗುವುದು. ಎಂ.ಬಿ.ಬಿ.ಎಸ್. ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಪ್ರಸ್ತಾವನೆಯನ್ನು ಸಲ್ಲಿಸಬಹುದಾಗಿದೆ. ಹೊಂದಿರುವ ಗರಿಷ್ಠ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಸೆಪ್ಟೆಂಬರ್ 30 ಅರ್ಜಿ ಸಲ್ಲಿಕೆಗೆ ಅಂತಿಮ ದಿನ
ಆಸಕ್ತರು ನಿಗದಿತ ಅರ್ಜಿ ನಮೂನೆಯನ್ನು ಸಂಸ್ಥೆಯ ಜಾಲತಾಣ http://sims.karnataka.gov.in ನಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸೆಪ್ಟಂಬರ್ 30ರೊಳಗಾಗಿ ಲಕೋಟೆಯ ಮೇಲೆ ಯಾವ ಹುದ್ದೆಗಾಗಿ ಅರ್ಜಿ ಎಂಬುದನ್ನು ನಮೂದಿಸಿ, ‘ನಿರ್ದೇಶಕರು ಮತ್ತು ಡೀನ್ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಸಾಗರ ರಸ್ತೆ, ಶಿವಮೊಗ್ಗ 577201 ವಿಳಾಸಕ್ಕೆ ಸಲ್ಲಿಸುವಂತೆ ಸಿಮ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
https://suddikanaja.com/2021/09/29/50-beds-heart-hospital-sanctioned-to-shivamogga/