Good News | ಸರ್ಕಾರಿ‌ ನೌಕರರಿಗೆ ಗುಡ್ ನ್ಯೂಸ್, ಶಿವಮೊಗ್ಗದಲ್ಲಿ CLT ಪುನರಾರಂಭ, ಯಾವಾಗ ನಡೆಯಲಿವೆ ಪರೀಕ್ಷೆ?

computer training

 

 

HIGHLIGHTS

  • ಎರಡು ತಿಂಗಳಗಳ ಕಾಲ ಪ್ರತಿ ಶುಕ್ರವಾರ, ಶನಿವಾರ ಹಾಗೂ ಭಾನುವಾರದಂದು ನಡೆಯಲಿದೆ
  • ಬಿದರೆ ಗ್ರಾಮದ ಬಿ.ಎಚ್.ರಸ್ತೆಯಲ್ಲಿರುವ ಐ.ಟಿ.ಪಾರ್ಕ್‌ನಲ್ಲಿ ಕಂಪ್ಯೂಟರ್ ಸಾಕ್ಷರತಾ (Computer Literacy Test-CLT) ಪರೀಕ್ಷಾ ಕೇಂದ್ರ ಪುನಾರಾರಂಭ
  • ಮುಂಬಡ್ತಿ, ವೇತನ ಬಡ್ತಿ ಪ್ರೊಬೇಶನರಿ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಪಡೆಯಲು ಡಿಸೆಂಬರ್ 31‌ರೊಳಗೆ ಕಂಪ್ಯೂಟರ್ ಸಾಕ್ಷರತೆ ಪರೀಕ್ಷೆ ತೇರ್ಗಡೆ ಕಡ್ಡಾಯ

ಸುದ್ದಿ ಕಣಜ.ಕಾಂ | DISTRICT | 19 SEP 2022
ಶಿವಮೊಗ್ಗ ‌(shivamogga): ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ(Karnataka State Government Employees Association)ದ ಮನವಿಯಂತೆ ಸರ್ಕಾರವು ತಾಲ್ಲೂಕು ಬಿದರೆ (Bidare) ಗ್ರಾಮದ ಬಿ.ಎಚ್.ರಸ್ತೆಯಲ್ಲಿರುವ ಐ.ಟಿ.ಪಾರ್ಕ್‌(IT Park)ನಲ್ಲಿ ಕಂಪ್ಯೂಟರ್ ಸಾಕ್ಷರತಾ (CLT) ಪರೀಕ್ಷಾ ಕೇಂದ್ರವನ್ನು ಪುನರಾರಂಭಿಸಲಾಗಿದೆ ಎಂದು ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ (CS Shadakshari) ತಿಳಿಸಿದ್ದಾರೆ.

CS Shadakshari

READ | ನೇಗಿಲೋಣಿ ಗುಂಡೇಟು ಪ್ರಕರಣಕ್ಕೆ ಟ್ವಿಸ್ಟ್, ಪೋಸ್ಟ್ ಮಾರ್ಟಮ್ ರಿಪೋರ್ಟ್ ನಲ್ಲಿ ಬಯಲಾಯ್ತು ಸತ್ಯಾಂಶ, ಇಬ್ಬರ ಬಂಧನ

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮುಂದಿನ ಶುಕ್ರವಾರ, ಶನಿವಾರ ಹಾಗೂ ಭಾನುವಾರದಿಂದ ಪರೀಕ್ಷೆಗಳು ಪ್ರಾರಂಭಗೊಂಡು, 2 ತಿಂಗಳಗಳ ಕಾಲ ಪ್ರತಿ ಶುಕ್ರವಾರ, ಶನಿವಾರ ಹಾಗೂ ಭಾನುವಾರದಂದು ನಡೆಯಲಿದೆ. ಇದುವರೆಗೆ ಸರ್ಕಾರದ ನಿಯಮಾನುಸಾರ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗೆ ಹಾಜರಾಗದಿರುವ ಜಿಲ್ಲೆಯ ಎಲ್ಲ ಶ್ರೇಣಿಯ ಸರ್ಕಾರಿ ನೌಕರರು ಈ ಸದವಕಾಶದ ಲಾಭ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ಪ್ರತಿ ಬ್ಯಾಚಿನಲ್ಲಿ‌ 100 ಪರೀಕ್ಷಾರ್ಥಿಗಳಿಗೆ ಅವಕಾಶ
ಪ್ರತಿ ಶುಕ್ರವಾರ, ಶನಿವಾರ ಹಾಗೂ ಭಾನುವಾರಗಳಂದು 4 ಬ್ಯಾಚ್‍ಗಳಲ್ಲಿ ನಡೆಯಲಿರುವ ಪರೀಕ್ಷೆಗೆ ಪ್ರತಿಯೊಂದು ಬ್ಯಾಚ್ ನಲ್ಲಿ 100 ಜನ ಪರಿಕ್ಷಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಸಂಘದ ಮವಿಯಂತೆ ಶಿವಮೊಗ್ಗದಲ್ಲಿ ಕೊನೆಯದಾಗಿ ಪರೀಕ್ಷಾ ಕೇಂದ್ರವನ್ನು ತೆರೆಯಲಾಗಿದ್ದು, ಕಡ್ಡಾಯವಾಗಿ ತೇರ್ಗಡೆ ಹೊಂದಬೇಕಾಗಿರುವ ಸರ್ಕಾರಿ ನೌಕರರು ತಪ್ಪದೆ ಪರೀಕ್ಷೆ ತೆಗೆದುಕೊಂಡು ತೇರ್ಗಡೆ ಹೊಂದುವುದರ ಜೊತೆಗೆ ತಮ್ಮ ಸೇವಾವಧಿಯು ಯಾವುದೇ ಅಡತಡೆಗಳಿಲ್ಲದೆ ಮುಂದುವರಿಯುವಂತೆ ಹಾಗೂ ಈ ಅವಧಿಯಲ್ಲಿ ತಮ್ಮ ಸೇವೆಯು ಸಾರ್ಥಕವಾಗಿರುವಂತೆ ನೋಡಿಕೊಳ್ಳಬೇಕು. ಮುಂಬಡ್ತಿ, ವೇತನ ಬಡ್ತಿ ಪ್ರೊಬೇಶನರಿ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಪಡೆಯಲು ಡಿಸೆಂಬರ್ 31‌ ಕಡೆಯ ದಿನವಾಗಿದೆ. ಕಡ್ಡಾಯವಾಗಿ ಈ‌ ದಿನಾಂಕದೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆ ಹೊದಬೇಕಾಗಿರುತ್ತದೆ ಎಂದು ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದ್ದಾರೆ.

https://suddikanaja.com/2022/03/25/karntaka-government-has-given-time-to-pass-the-computer-literacy-test-for-benefit-of-the-employees/

Leave a Reply

Your email address will not be published. Required fields are marked *

error: Content is protected !!