HIGHLIGHTS
- ವಿದ್ಯುತ್ ಮಾರ್ಗದ ನಿರ್ವಹಣೆ, ತುರ್ತು ಕಾಮಗಾರಿ ಹಿನ್ನೆಲೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
- ಸೆ.23ರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಪವರ್ ಕಟ್
ಸುದ್ದಿ ಕಣಜ.ಕಾಂ | DISTRICT | 19 SEP 2022
ಶಿವಮೊಗ್ಗ (shivamogga): ತಾಲ್ಲೂಕು ಕುಂಸಿ (kumsi) ಗ್ರಾಮದ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರ (power distribution station)ಕ್ಕೆ ವಿದ್ಯುತ್ ಪೂರೈಸುವ 110/11 ಕೆವಿ ವಿದ್ಯುತ್ ಮಾರ್ಗದ ನಿರ್ವಹಣೆ ಹಾಗೂ ತುರ್ತು ಕಾಮಗಾರಿ ಇರುವುದರಿಂದ ಕೆಳಕಂಡ ಹಳ್ಳಿಗಳಲ್ಲಿ ಸೆಪ್ಟೆಂಬರ್ 23 ರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
READ | ಭದ್ರಾವತಿಯಲ್ಲಿ ಲಾರಿಯಲ್ಲಿ ಮಲಗಿದ್ದವರ ಮೇಲೆ ಚಾಕುದಿಂದ ಹಲ್ಲೆ ನಡೆಸಿ ದರೋಡೆ
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಕುಂಸಿ, ಬಾಳೆಕೊಪ್ಪ, ಚೋರಡಿ, ತುಪ್ಪೂರು, ಕೋಣಿಹೂಸೂರು, ಹೊರಬೈಲು ಇನ್ನಿತರೆ ಸುತ್ತಮುತ್ತಲ ಗ್ರಾಮಗಳು ಹಾಗೂ ಹಾರ್ನಳ್ಳಿ, ರಾಮನಗರ, ಮುದುವಾಲ, ಯಡವಾಲ, ದೇವಬಾಳು, ತ್ಯಾಜವಳ್ಳಿ, ಕೊನಗವಳ್ಳಿ, ಹಿಟ್ಟೂರು, ನಾರಾಯಣಪುರ, ಮಲ್ಲಾಪುರ, ರಟ್ಟೆಹಳ್ಳಿ ಹಾಗೂ ಇನ್ನಿತರೆ ಸುತ್ತಮುತ್ತಲ ಗ್ರಾಮಗಳು ಹಾಗೂ ಆಯನೂರು, ಮಂಡಘಟ್ಟ, ಸಿರಿಗೆರೆ, ಸೂಡೂರು, ಕೂಡಿ, ಮಲೆಶಂಕರ, ದೊಡ್ಡಮತ್ತಲಿ, ತಮ್ಮಡಿಹಳ್ಳಿ ಇನ್ನಿತರ ಸುತ್ತಮುತ್ತ ಗ್ರಾಮಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ (MESCOM) ಪ್ರಕಟಣೆ ತಿಳಿಸಿದೆ.
https://suddikanaja.com/2022/09/18/accident-between-ksrtc-bus-and-bike-person-died/