e-kyc | 3 ದಿನಗಳಲ್ಲಿ ಇ-ಕೆವೈಸಿ ಮಾಡಿಸಿದ್ದರೆ ಆರ್ಥಿಕ ನೆರವು ಕಟ್

 

HIGHLIGHTS

  • ಸೆಪ್ಟೆಂಬರ್ 22ರೊಳಗೆ ಇ-ಕೆವೈಸಿ ಮಾಡಿಸದಿದ್ದರೆ ಆರ್ಥಿಕ ನೆರವು ಸ್ಥಗಿತ
  • ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಆರ್ಥಿಕ ನೆರವು

ಸುದ್ದಿ ಕಣಜ.ಕಾಂ | DISTRICT | 19 SEP 2022
ಶಿವಮೊಗ್ಗ ‌(shivamogga): ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ (Pradhan Mantri Kisan Samman Nidhi) ಆರ್ಥಿಕ ನೆರವು ಪಡೆಯಲು ಅರ್ಹ ರೈತ (farmer) ಫಲಾನುಭವಿಗಳು ಇ-ಕೆವೈಸಿ(e-kyc)ಯನ್ನು ಈ ಕೂಡಲೇ ಮಾಡಿಸಬೇಕು.

READ | ನೇಗಿಲೋಣಿ ಗುಂಡೇಟು ಪ್ರಕರಣಕ್ಕೆ ಟ್ವಿಸ್ಟ್, ಪೋಸ್ಟ್ ಮಾರ್ಟಮ್ ರಿಪೋರ್ಟ್ ನಲ್ಲಿ ಬಯಲಾಯ್ತು ಸತ್ಯಾಂಶ, ಇಬ್ಬರ ಬಂಧನ

ಈ ಯೋಜನೆಯಡಿ ಈಗಾಗಲೇ ಅರ್ಹ ರೈತ ಫಲಾನುಭವಿಗಳಿಗೆ ಆರ್ಥಿಕ ಸಹಾಯಧನ ನೀಡಲಾಗುತ್ತಿದ್ದು, ಮುಂದಿನ ಆರ್ಥಿಕ ನೆರವು ಪಡೆಯಲು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಇ-ಕೆವೈಸಿ ಮಾಡದಿದ್ದಲ್ಲಿ ಆರ್ಥಿಕ ನೆರವು ಸ್ಥಗಿತಗೊಳ್ಳಲಿದೆ.
ಎಲ್ಲೆಲ್ಲಿ ಇ‌-ಕೆವೈಸಿ ಲಭ್ಯ?
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಹ ರೈತ ಫಲಾನುಭವಿಗಳು ಇ-ಕೆವೈಸಿಯನ್ನು ತಮ್ಮ ತಾಲ್ಲೂಕಿನ ಹತ್ತಿರದ ಸಿಎಸ್‍ಸಿ (ನಾಗರಿಕ ಸೇವಾ ಕೇಂದ್ರ) ಅಥವಾ ಗ್ರಾಮ ಒನ್ ಕೇಂದ್ರ ಅಥವಾ http://pmkisan.gov.in ಪೋರ್ಟಲ್‍ನ ಫಾರ್ಮರ್ಸ್ ಕಾರ್ನರ್ ನ ಇ-ಕೆವೈಸಿ ಅವಕಾಶದಡಿ ಇ-ಕೆವೈಸಿಯನ್ನು  ಸೆಪ್ಟೆಂಬರ್ 22ರೊಳಗೆ ಮಾಡಿಕೊಳ್ಳಬೇಕು. ಇ-ಕೆವೈಸಿಯನ್ನು  ಮಾಡಿಸಲು ಇನ್ನು ಕೊನೆಯ ಮೂರು ದಿನಗಳು ಮಾತ್ರ ಉಳಿದಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಚ್.ಎಸ್. ಶಿವರಾಜ್ ಕುಮಾರ್ ತಿಳಿಸಿದ್ದಾರೆ.

GOOD NEWS | ಭದ್ರಾವತಿ, ಸಾಗರದಲ್ಲಿ ಶೀಘ್ರವೇ ಆಕ್ಸಿಜನ್ ಜನರೇಟರ್ ವ್ಯವಸ್ಥೆ, ಇಳಿಯಲಿದೆ ಮೆಗ್ಗಾನ್ ಮೇಲಿನ ಹೊರೆ

Leave a Reply

Your email address will not be published.