Arrest | ಐಸಿಸ್’ನೊಂದಿಗೆ ಶಿವಮೊಗ್ಗ ಲಿಂಕ್, ಶಾರೀಕ್ ಸಹಚರರು ಅರೆಸ್ಟ್, ಕಿಂಗ್ ಪಿನ್ ಎಸ್ಕೇಪ್

 

HIGHLIGHTS

  • ಶಿವಮೊಗ್ಗ ಮತ್ತು ಮಂಗಳೂರು ಮೂಲದ ಇಬ್ಬರು ಐಸಿಸ್ಜೊ (ISIS) ತೆಗೆ ನಂಟು
  • ಬಂಧಿತರಲ್ಲಿ ಒಬ್ಬನಿಗೆ ಮಂಗಳೂರು ಗೋಡೆ ಬರಹ ಪ್ರಕರಣದ ಲಿಂಕ್
  • ಎ1- ತೀರ್ಥಹಳ್ಳಿ ತಾಲೂಕಿನ ಸೊಪ್ಪುಗುಡ್ಡೆ ನಿವಾಸಿ ಶಾರೀಕ್ ಎಸ್ಕೇಪ್, ಹುಡುಕಾಟ
  • ಎ1 ಶಾರೀಕ್ ಹಾಗೂ ಎ2 ಮಾಜ್ ಇಬ್ಬರೂ ಮಂಗಳೂರು ಗೋಡೆ ಬರಹ ಕೇಸ್ ಆರೋಪಿಗಳು

ಸುದ್ದಿ ಕಣಜ.ಕಾಂ | KARNATAKA | 20 SEP 2022
ಶಿವಮೊಗ್ಗ: ಐಸಿಸ್(Islamic State of Iraq and Syria-ISIS)ನೊಂದಿಗೆ ನಂಟು ಹೊಂದಿದ್ದಾರೆ ಎನ್ನಲಾದ ಇಬ್ಬರನ್ನು ಶಿವಮೊಗ್ಗ(shivamogga)ದಲ್ಲಿ ಸೋಮವಾರ ಬಂಧಿಸಲಾಗಿದೆ. ಇದರಲ್ಲಿ ಒಬ್ಬ ಮಂಗಳೂರಿನ ಗೋಡೆ ಬರಹ (Mangaluru terror wall writing) ಪ್ರಕರಣದೊಂದಿಗೆ ಸಂಬಂಧ ಹೊಂದಿದವನಾಗಿದ್ದಾನೆ.

READ | ನೇಗಿಲೋಣಿ ಗುಂಡೇಟು ಪ್ರಕರಣಕ್ಕೆ ಟ್ವಿಸ್ಟ್, ಪೋಸ್ಟ್ ಮಾರ್ಟಮ್ ರಿಪೋರ್ಟ್ ನಲ್ಲಿ ಬಯಲಾಯ್ತು ಸತ್ಯಾಂಶ, ಇಬ್ಬರ ಬಂಧನ

ಸಿದ್ದೇಶ್ವರ ನಗರದ ನಿವಾಸಿ ಸಯ್ಯದ್ ಯಾಸೀನ್ (syed yaseen) ಅಲಿಯಾಸ್ ಬೈಲ್(21), ಮಂಗಳೂರಿನ ಮಾಜ್ ಮುನೀರ್ ಅಹಮ್ಮದ್ (Maaz Muneer Ahmed) (22) ಎಂಬುವವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ತೀರ್ಥಹಳ್ಳಿ (thirthahalli) ತಾಲೂಕಿನ ಸೊಪ್ಪುಗುಡ್ಡೆ (soppugudde) ನಿವಾಸಿ ಶಾರೀಕ್ ( Shariq ) (24) ತಲೆಮರೆಸಿಕೊಂಡಿದ್ದಾನೆ. ಮಾಜ್ ಎಂಬಾತ 2020ರ ಮಂಗಳೂರಿನ ಗೋಡೆ ಬರಹ  (wall writing) ಪ್ರಕರಣದಲ್ಲೂ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ.
ಯಾಸೀನ್ ಮತ್ತು ಮಾಜ್ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ(rural police station) ಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳ (ನಿರ್ಬಂಧ) ತಿದ್ದುಪಡಿ ಕಾಯ್ದೆ (ಯುಎಪಿಎ-UAPA) ಅಡಿ ಪ್ರಕರಣ ದಾಖಲಾಗಿದೆ.
ಸೆ.29ರ ವರೆಗೆ ನ್ಯಾಯಾಂಗ ಬಂಧನ
ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಹಾಜರ್ ಪಡಿಸಿ ನಂತರ ಸೆಪ್ಟೆಂಬರ್ 20ರಿಂದ 29ರ ವರೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
ಎಫ್.ಐ.ಆರ್.ನಲ್ಲಿ ಏನಿದೆ?
ಆರೋಪಿಗಳು ಭಯೋತ್ಪಾದಕ ಕೃತ್ಯಗಳನ್ನು ಮುಂದುವರಿಸುವ ಸಲುವಾಗಿ ಒಳಸಂಚು ಮಾಡಿಕೊಂಡು ದೇಶದ ಐಕ್ಯತೆ, ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಕಾನೂನು ಬಾಹಿರವಾಗಿ ಸಾರ್ವಜನಿಕ ಆಸ್ತಿ, ಪ್ರಾಣಕ್ಕೆ ಅಪಾಯ ಉಂಟುಮಾಡಬಹುದಾದ ಸ್ಫೋಟಕಗಳನ್ನು ಇಟ್ಟುಕೊಂಡಿರುವುದು ಹಾಗೂ ರಾಷ್ಟ್ರ ಧ್ವಜಕ್ಕೆ ಸುಟ್ಟಿರುವುದು ತಿಳಿದುಬಂದಿದೆ ಎಂದು ಎಫ್.ಐ.ಆರ್.ನಲ್ಲಿ ಹೇಳಲಾಗಿದೆ. ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ.

READ | ಭದ್ರಾವತಿಯಲ್ಲಿ ಲಾರಿಯಲ್ಲಿ ಮಲಗಿದ್ದವರ ಮೇಲೆ‌ ಚಾಕುದಿಂದ ಹಲ್ಲೆ ನಡೆಸಿ ದರೋಡೆ

2020ರಲ್ಲಿ ಮಂಗಳೂರಿನಲ್ಲಿ ಗೋಡೆಗಳ ಮೇಲೆ ಬರೆದಿದ್ದ ಬರಹ. (ಸಂಗ್ರಹ ಚಿತ್ರ)

ಏನಿದು ಗೋಡೆ ಬರಹ ಪ್ರಕರಣ?
2020ರಲ್ಲಿ ಮಂಗಳೂರಿನ ಕೆಲವೆಡೆ ಗೋಡೆಗಳ ಮೇಲೆ ಉಗ್ರವಾದಿಗಳನ್ನು ಬೆಂಬಲಿಸಿ ಬರಹಗಳನ್ನು ಬರೆಯಲಾಗಿತ್ತು. ಈ ಘಟನೆ ಇಡೀ ಕರಾವಳಿಯನ್ನೇ ಆತಂಕಕ್ಕೀಡಾಗುವಂತೆ ಮಾಡಿತ್ತು. ಈ ಬಗ್ಗೆ ಬಂದರು ಹಾಗೂ ಕದ್ರಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ತನಿಖೆಯ ಬಳಿಕ ಈ ಪ್ರಕರಣದಲ್ಲಿ ತೀರ್ಥಹಳ್ಳಿಯ ಶಾರೀಕ್ ಹಾಗೂ ಮಾಜ್ ಎಂಬುವವರಿಗೆ ಬಂಧಿಸಲಾಗಿತ್ತು. ಇಬ್ಬರೂ ಬೇಲ್ ಮೇಲೆ ಹೊರಗೆ ಬಂದಿದ್ದರು. ಈಗ ಮತ್ತೊಮ್ಮೆ ಮಾಜ್ ಬಂಧನಕ್ಕೆ ಒಳಗಾಗಿದ್ದಾನೆ.

WESTERN GHAT | ಕಾಳಿಂಗ ಸರ್ಪದಲ್ಲಿ 4 ಪ್ರಬೇಧ ಇರುವುದು ಅಧ್ಯಯನದಿಂದ ಸಾಬೀತು, ಕಂಡುಕೊಂಡ ಸತ್ಯಾಂಶಗಳೇನು‌ ಗೊತ್ತಾ, ಕಿಂಗ್ ಕೋಬ್ರಾ ಪೂರ್ಣ ಮಾಹಿತಿ ಇಲ್ಲಿದೆ

Leave a Reply

Your email address will not be published.