Murder | ದುಮ್ಮಳ್ಳಿಯಲ್ಲಿ ಪತ್ನಿಯನ್ನೇ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಪತಿ

 

HIGHLIGHTS

  • ಎರಡು ವರ್ಷಗಳ ಹಿಂದಷ್ಟೇ ಮದುವೆ, ವರದಕ್ಷಿಣೆಗಾಗಿ ಕಿರುಕುಳ
  • ಪತ್ನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಪತಿ ಅರೆಸ್ಟ್

ಸುದ್ದಿ ಕಣಜ.ಕಾಂ | DISTRICT | 21 SEP 2022
ಶಿವಮೊಗ್ಗ: ತಾಲೂಕಿನ ದುಮ್ಮಳ್ಳಿಯಲ್ಲಿ ಪತಿಯೇ ಪತ್ನಿಯನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಮಿತಾ(27) ಕೊಲೆಯಾದ ಗೃಹಿಣಿ. ಈಕೆಯ ಪತಿ ದುಮ್ಮಳ್ಳಿ ಗ್ರಾಮದ ನಿವಾಸಿ ಕರಣಾಕರ್(36) ಎಂಬಾತ ಕುತ್ತಿಗೆ, ಭುಜ, ಕಿವಿ ಮತ್ತು ಪಕ್ಕೆಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ‌.

READ | ಐಸಿಸ್’ನೊಂದಿಗೆ ಶಿವಮೊಗ್ಗ ಲಿಂಕ್, ಶಾರೀಕ್ ಸಹಚರರು ಅರೆಸ್ಟ್, ಕಿಂಗ್ ಪಿನ್ ಎಸ್ಕೇಪ್

ಮದುವೆಯಾದ ಎರಡೇ ವರ್ಷದಲ್ಲಿ ಕೊಲೆ
ಎರಡು ವರ್ಷಗಳ ಹಿಂದಷ್ಟೇ ಕರಣಾಕರ್ ಮತ್ತು ಅಮಿತಾ ಮದುವೆಯಾಗಿದ್ದರು. ಮದುವೆ ಸಮಯದಲ್ಲಿ ಬಂಗಾರ ಮತ್ತು ಹಣವನ್ನು ಕೊಟ್ಟಿದ್ದರೂ ಇನ್ನೂ ಹೆಚ್ಚಿನ ಹಣ ಮತ್ತು ಬಂಗಾರವನ್ನು ತರುವಂತೆ ಪತ್ನಿಗೆ ಪೀಡಿಸುತ್ತಿದ್ದು, ಕೊಡಲು ಸಾಧ್ಯವಾಗದೇ ಇದ್ದುದ್ದರ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ದೂರು ನೀಡಲಾಗಿದೆ. ತುಂಗಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಿಪ್ಪುನಗರ ಮರ್ಡರ್ ಕೇಸ್, ತನ್ನದೇ ಚಾಕುವಿನಿಂದ ಹತನಾದ ಇರ್ಫಾನ್, ರಾತ್ರೋರಾತ್ರಿ ಕಾರ್ಯಾಚರಣೆ ನಾಲ್ವರು ಅರೆಸ್ಟ್, ನಡೆಯುತ್ತಿದೆ ಉಳಿದವರ ಶೋಧ

Leave a Reply

Your email address will not be published.