NIA Raid | ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಎನ್.ಐ.ಎ ತಂಡ ದಾಳಿ, ಒಬ್ಬ ವಶಕ್ಕೆ

 

HIGHLIGHTS 

  • ಶಿವಮೊಗ್ಗ ಸೇರಿದಂತೆ ರಾಜ್ಯದೆಲ್ಲೆಡೆ ಎನ್.ಐ.ಎ ಅಧಿಕಾರಿಗಳ ತಂಡ ಕಾರ್ಯಾಚರಣೆ
  • ‘ಆಪರೇಷನ್ ಅಂಬ್ರೇಲಾ’ ಹೆಸರಿನಲ್ಲಿ ಕಾರ್ಯಾಚರಣೆಗಿಳಿದ ತನಿಖಾ ಸಂಸ್ಥೆ

ಸುದ್ದಿ ಕಣಜ.ಕಾಂ | NATIONAL | 22 SEP 2022
ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಬಂಧನದ ಬೆನ್ನಲ್ಲೇ ಶಿವಮೊಗ್ಗ ಸೇರಿದಂತೆ ದೇಶದಾದ್ಯಂತ 100ಕ್ಕೂ ಹೆಚ್ಚು ಕಡೆಗಳಲ್ಲಿ ಎನ್.ಐ.ಎ (ರಾಷ್ಟ್ರೀಯ ತನಿಖಾ ಸಂಸ್ಥೆ) ದಾಳಿ ನಡೆಸಿದೆ.

READ | ಶಂಕಿತ‌ ಉಗ್ರರ ಪ್ರಕರಣ, ಶಿವಮೊಗ್ಗದ 11 ಕಡೆಗಳಲ್ಲಿ ದಾಳಿ, ಮಹತ್ವದ ದಾಖಲೆ ವಶಕ್ಕೆ

ಲಷ್ಕರ್ ಮೊಹಲ್ಲಾದ ಮನೆಯೊಂದರ ಮೇಲೆ ದಾಳಿ ನಡೆಸಲಾಗಿದೆ. ಸಂಘಟನೆಯೊಂದರ ಮುಖಂಡನನ್ನು ವಶಕ್ಕೆ ಪಡೆಯಲಾಗಿದೆ.
ರಾತ್ರಿ 2 ಗಂಟೆಗೆ ವಿಶೇಷ ತಂಡ ರೇಡ್
ರಾತ್ರಿ 2 ಗಂಟೆಯ ಸುಮಾರಿಗೆ ಎರಡು ತಂಡವಾಗಿ ಎನ್.ಐ.ಎ ಅಧಿಕಾರಿಗಳು ದಾಳಿ ನಡೆಸಿ, ಸುಮಾರು ನಾಲ್ಕೈದು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ.

Leave a Reply

Your email address will not be published.