HIGHLIGHTS
- ಭೂತಾನ್’ನಿಂದ ಅಡಿಕೆ ಆಮದಿಗೆ ಕೇಂದ್ರ ಸರ್ಕಾರ ಅನುಮತಿ
- ವಿದೇಶದಿಂದ ಆಮದಿನ ಮೇಲೆ ಹಲವು ಷರತ್ತುಗಳನ್ನು ವಿಧಿಸಿದ ಕೇಂದ್ರ ಸರ್ಕಾರ
- ವಿದೇಶಿ ಅಡಿಕೆ ಸ್ಥಳೀಯ ರೈತರ ಮೇಲೆ ಪರಿಣಾಮ ಬೀರುವ ಸಾಧ್ಯತೆ
ಸುದ್ದಿ ಕಣಜ.ಕಾಂ | NATIONAL NEWS | 29 SEP 2022
ಶಿವಮೊಗ್ಗ(Shivamogga): ಅಡಿಕೆ ಬೆಳೆಗಾರರಲ್ಲಿ ಮತ್ತೆ ನಡುಕ ಶುರುವಾಗಿದೆ. ಇದಕ್ಕೆ ಕಾರಣ ಕೇಂದ್ರ ಸರ್ಕಾರದ ನಿರ್ಧಾರ!
ಕೇಂದ್ರ ಸರ್ಕಾರ(central government)ವು ಭೂತಾನ್(Bhutan)ನಿಂದ ಪ್ರತಿವರ್ಷ ಕನಿಷ್ಠ ಆಮದು ಬೆಲೆ- minimum import price (MIP) ಷರತ್ತು ಇಲ್ಲದೇ 17 ಸಾವಿರ ಟನ್ ಹಸಿರು ಅಡಿಕೆ (green arecanut) ಆಮದು (import) ಮಾಡಿಕೊಳ್ಳಬಹುದು ಎಂದು ಬುಧವಾರ ಅನುಮತಿ ನೀಡಿದೆ. ಇದರಿಂದ ಸ್ಥಳೀಯ ಅಡಿಕೆ ಬೆಲೆ ಕುಸಿಯುವ ಸಾಧ್ಯತೆ ಇದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಇದು ಅಡಿಕೆ ಬೆಳೆಗಾರರಲ್ಲಿ ನಡುಕ ಉಂಟುಮಾಡಿದೆ.
ಆರಗ ಜ್ಞಾನೇಂದ್ರ ಭೇಟಿ ಬಳಿಕವೂ ವಿದೇಶಿ ಅಡಿಕೆಗೆ ಮಣೆ
ಗೃಹ ಸಚಿವರೂ ಆದ ಅಡಿಕೆ ಟಾಸ್ಕ್ ಫೋರ್ಸ್ (arecanut task fore) ಅಧ್ಯಕ್ಷ ಆರಗ ಜ್ಞಾನೇಂದ್ರ (Araga Jnanendra) ಅವರು ಈ ಹಿಂದೆ ದೆಹಲಿ(Delhi)ಗೆ ಭೇಟಿ ನೀಡಿ ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಿದ್ದರು. ಇದರ ಬೆನ್ನಲ್ಲೇ ವಿದೇಶಿ ಅಡಿಕೆ ಆಮದಿಗೆ ಮುಂದಾಗಿದೆ.
ವಿದೇಶಿ ವ್ಯಾಪಾರದ ಮಹಾನಿರ್ದೇಶಕರ (directorate general of foreign trade -DGFT)ಅಧಿಸೂಚನೆಯ ಪ್ರಕಾರ, ಭೂತಾನ್’ನಿಂದ ಜೈಗಾಂವ್’ನ ಭೂ ಕಸ್ಟಮ್ಸ್ ಸ್ಟೇಷನ್ -land customs station of Jaigaon -INJIGB)(ಐಎನ್.ಜೆಜೆಬಿ) ಮುಖಾಂತರ ಆಮದು ಮಾಡಿಕೊಳ್ಳುವಂತೆ ಅನುಮತಿಸಲಾಗಿದೆ.
ಕೃಷಿಕರ ಹಿತಕ್ಕಾಗಿ ಎಂಐಪಿ
2017ರಲ್ಲಿ ರಾಷ್ಟ್ರದ ರೈತರ ಹಿತವನ್ನು ಕಾಪಾಡುವುದಕ್ಕಾಗಿ ಹಸಿರು ಅಡಿಕೆ ಆಮದಿನ ಮೇಲೆ ಪ್ರತಿ ಕೆಜಿಗೆ 251 ರೂ. ವಿಧಿಸಿತ್ತು. ಅದೇ 2018ರಲ್ಲಿ ಪ್ರತಿ ಕೆಜಿಗೆ 251 ರೂಪಾಯಿಗಿಂತ ಹೆಚ್ಚು ಬೆಲೆಯಿದ್ದಲ್ಲಿ ಯಾವುದೇ ರೂಪದ ಅಡಿಕೆ ಆಮದು ಮಾಡಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಸ್ಪಷ್ಟವಾಗಿ ಹೇಳಿತ್ತು. ಬೆಲೆಯು ಮಿತಿಗಿಂತ ಕಡಿಮೆ ಇದ್ದರೆ ಆಮದು ಮಾಡಿಕೊಳ್ಳಬಾರದು ಎಂದು ನಿಷೇಧ ಹೇರಲಾಗಿತ್ತು.
ಅಧಿಸೂಚನೆಯಲ್ಲಿ ಏನಿದೆ?
ಮಹಾನಿರ್ದೇಶನಾಲುವು ಹೊರಡಿಸಿರುವ ಅಧಿಸೂಚನೆಯಂತೆ, 2022-23ನೇ ಸಾಲಿನಲ್ಲಿ ಭೂತಾನ್’ನಿಂದ ಕನಿಷ್ಠ ಆಮದು ಬೆಲೆ ಇಲ್ಲದೇ 8,500 ಮೆಟ್ರಿಕ್ ಟನ್ ಹಸಿರು ಅಡಿಕೆಯನ್ನು ಆಮದು ಮಾಡಿಕೊಳ್ಳಬಹುದು. 2023 ಮತ್ತು 24ರಲ್ಲಿ 17,000 ಮೆಟ್ರಿಕ್ ಟನ್ ಆಮದಿಗೆ ಅನುಮತಿ ನೀಡಲಾಗಿದೆ.
READ | 28/09/2022ರ ಅಡಿಕೆ ಧಾರಣೆ, ಯಾವ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ?
ಮಹಾನಿರ್ದೇಶನಾಲಯ ವಿಧಿಸಿದ ಷರತ್ತುಗಳೇನು?
- ಆಮದುದಾರರು ಅಡಿಕೆ ಆಮದಿಗೂ ಮುನ್ನ ತಮ್ಮ ಬಳಿ ವಿದೇಶಿ ವ್ಯಾಪಾರದ ನೋಂದಣಿ ಸರ್ಟಿಫಿಕೇಟ್ ಹೊಂದಿರಬೇಕು.
- ನೋಂದಣಿ ಪ್ರಮಾಣ ಪತ್ರ ಅಡಿ ಗರಿಷ್ಠ 500 ಮೆಟ್ರಿಕ್ ಟನ್ ಮಾತ್ರ ತಾಜಾ ಅಥವಾ ಹಸಿರು ಅಡಿಕೆಯನ್ನು ಆಮದು ಮಾಡಬಹುದು.
- ಒಂದುವೇಳೆ, ಹೆಚ್ಚುವರಿ ಆಮದಿನ ಅಗತ್ಯವಿದ್ದರೆ ಅದಕ್ಕೋಸ್ಕರ ಪ್ರತ್ಯೇಕ ನೋಂದಣಿ ಮಾಡಿಸಿಕೊಂಡು ಸರ್ಟಿಫಿಕೇಟ್ ಪಡೆಯಬೇಕು. ಇದಕ್ಕೆ ಗರಿಷ್ಠ 6 ತಿಂಗಳು ಅಥವಾ ಹಣಕಾಸು ವರ್ಷದ ಅಂತ್ಯದವರೆಗೆ ಮಾತ್ರ ವೆಲಿಡೆಟಿ ಇರಲಿದೆ.
https://suddikanaja.com/2022/06/05/arecanut-import-from-other-counries-it-may-hit-local-market/