HIGHLIGHTS
- ಹೊಸ ಮೀಸಲಾತಿಯಲ್ಲಿ ಮೇಯರ್ ಸ್ಥಾನದ ಎಸ್.ಸಿಗೆ ಹಾಗೂ ಉಪ ಮೇಯರ್ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲು
- ಹಳೇ ಮೀಸಲು ಪಟ್ಟಿ ಹಿನ್ನೆಲೆ ನ್ಯಾಯಾಲಯ ಮೆಟ್ಟಿಲೇರಿದ್ದ ವಿಚಾರ
ಸುದ್ದಿ ಕಣಜ.ಕಾಂ | CITY | 30 SEP 2022
ಶಿವಮೊಗ್ಗ (shivamogga): ಮಹಾನಗರ ಪಾಲಿಕೆ ಮೇಯರ್ (mayor), ಉಪ ಮೇಯರ್ (deputy mayor) ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಲಾಗಿದೆ.
ಹೊಸ ಮೀಸಲಾತಿ ಅನ್ವಯ ಮೇಯರ್ ಸ್ಥಾನವನ್ನು ಪರಿಶಿಷ್ಟ ಜಾತಿ (SC) ಹಾಗೂ ಉಪ ಮೇಯರ್ ಸ್ಥಾನವನ್ನು ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲು ಇರಿಸಲಾಗಿದೆ.
READ | ಪಿ.ಎಫ್.ಐ ಸಿದ್ಧರಾಮಯ್ಯನವರ ಪಾಪದ ಕೂಸು, ಕಟುವಾಗಿ ಟೀಕಿಸಿದ ಯಡಿಯೂರಪ್ಪ
ಕೋರ್ಟ್ ಮೆಟ್ಟಿಲೇರಿದ್ದ ನಾಗರಾಜ್
ಮಹಾನಗರ ಪಾಲಿಕೆ ಸ್ವತಂತ್ರ ಅಭ್ಯರ್ಥಿ ನಾಗರಾಜ್ ಅವರು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ನೀಡಬೇಕು ಎಂದು ಕೋರಿ ಹೈಕೋರ್ಟ್’ಗೆ ಮೊರೆ ಹೋಗಿದ್ದರು. ಇದನ್ನು ಪರಿಶೀಲಿಸಿದ ನ್ಯಾಯಾಲಯ ಸರ್ಕಾರಕ್ಕೆ ಸೂಕ್ತ ಕಾರಣ ನೀಡುವಂತೆ ಸೂಚನೆ ಸಹ ನೀಡಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆ ಸರ್ಕಾರ ಮತ್ತೊಂದು ಮೀಸಲಾತಿಯನ್ನು ಪ್ರಕಟಿಸಿದೆ.
https://suddikanaja.com/2021/07/02/shivamogga-zp-class-wise-reservation-announced/