Sakrebailu Elephant camp | ಸಕ್ರೆಬೈಲಿನ ವಿಡಿಯೋ ವೈರಲ್, ರಸ್ತೆ ಬದಿ ಅಟ್ಟಾಡಿಸಿಕೊಂಡು ಹೋದ ಆನೆ

Manikanath sakrebailu elephant camp

 

 

ಸುದ್ದಿ ಕಣಜ.ಕಾಂ | DISTRICT | 10 SEP 2022
ಶಿವಮೊಗ್ಗ: ತಾಲೂಕಿನ ಸಕ್ರೆಬೈಲು ಆನೆಬಿಡಾರ (Sakrebailu Elephant) ಹೊರಗಡೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾ(Social Media)ದಲ್ಲಿ ವೈರಲ್ (Viral) ಆಗಿದೆ. ಈ ವಿಡಿಯೋ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ.

VIDEO REPORT | ಶಿವಮೊಗ್ಗ ತಾಲೂಕಿನ ಸಕ್ರೆಬೈಲು ಆನೆಬಿಡಾರ ಹೊರಗಡೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ. ಅದರಲ್ಲಿ ಒಂಟಿಸಲಗವೊಂದು ವ್ಯಕ್ತಿಯೊಬ್ಬರಿಗೆ ಅಟ್ಟಾಡಿಸಿಕೊಂಡು ಹೋಗಿದೆ. ವಿಡಿಯೋ ವೀಕ್ಷಿಸಿ.

READ | ಶರಾವತಿ ಹಿನ್ನೀರಿನ ಲಾಂಚ್ ತಡೆಗೆ ನಿರ್ಧಾರ, ಕಾರಣವೇನು?

ವಿಡಿಯೋದಲ್ಲಿ ಏನಿದೆ?
ಶುಕ್ರವಾರ ಮಧ್ಯಾಹ್ನ ಆನೆಯೊಂದು ರಸ್ತೆ ದಾಟಿ ಹೊರಗಡೆ ನಿಂತಿದೆ. ಸ್ಕೂಟಿಯ ಮೇಲೊಬ್ಬರು ಬಂದಿದ್ದು, ಕಾರೊಂದರ ಪಕ್ಕ ವಾಹನ ನಿಲ್ಲಿಸಿದ್ದಾರೆ. ಏಕಾಏಕಿ ರಾಂಗ್ ಆದ ಆನೆ ಇವರ ಬಳಿಗೆ ಓಡಿಬಂದಿದೆ. ತಕ್ಷಣ ಅವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಆದರೂ ಬಿಡದೇ ಅಟ್ಟಾಡಿಸಿಕೊಂಡು ಹೋಗಿದೆ. ಈ ಆನೆಯನ್ನು ಮಣಿಕಂಠ (Manikantha) ಎಂದು ಹೇಳಲಾಗಿದೆ.
ಮಣಿಕಂಠನದ್ದು ಇದು ಮೊದಲನೇಯದ್ದೇನಲ್ಲ (CLICK)
ಈ ಹಿಂದೆಯೂ ಮಣಿಕಂಠ ಆನೆಯು ಸ್ನಾನ ಮಾಡುವಾಗ ಏಕಾಏಕಿ ಮತ್ತೊಂದು ಆನೆಯ ಮೇಲೆ ದಾಳಿ ಮಾಡಿದ್ದ. ಆಗ ಆನೆಬಿಡಾರದಲ್ಲಿ ಕೆಲಹೊತ್ತು ಆತಂಕ ನಿರ್ಮಾಣವಾಗಿತ್ತು.

Leave a Reply

Your email address will not be published. Required fields are marked *

error: Content is protected !!