ಸುದ್ದಿ ಕಣಜ.ಕಾಂ | SHIVAMOGGA CITY | 24 SEP 2022
ಶಿವಮೊಗ್ಗ(shivamogga): ಸೆಪ್ಟೆಂಬರ್ 27 ಮತ್ತು 28ರಂದು ವಾಹಕ ಬದಲಾವಣೆ ಕಾಮಗಾರಿ ಇರುವುದರಿಂದ ಮಂಡ್ಲಿ (Mandli) ವಿದ್ಯುತ್ ವಿತರಣಾ ಕೇಂದ್ರದ ಊರಗಡೂರು ಫೀಡರ್-7 11 ಕೆವಿ ಮಾರ್ಗಮುಕ್ತತೆ ನೀಡಲಾಗಿದೆ. ಹೀಗಾಗಿ, ನಗರದ ಹಲವೆಡೆ ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ಪವರ್ ಕಟ್?
ನಿಂಗಪ್ಪ ಲೇಔಟ್, ಸೂಳೆಬೈಲು, ಊರಗಡೂರು, ವಾದಿ-ಎ-ಹುದ್, ಮಳಲಿಕೊಪ್ಪ, ಇಂದಿರಾನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
https://suddikanaja.com/2022/09/23/suda-deadlin-to-submit-report/