
HIGHLIGHTS
- ಶಿವಮೊಗ್ಗ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸೆ.23 ಮತ್ತು 24ರಂದು ವಿದ್ಯುತ್ ವ್ಯತ್ಯಯ
- ಬೆಳಗ್ಗೆಯಿಂದಲೇ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ, ಸಾರ್ವಜನಿಕ ಸಹಕಾರಕ್ಕೆ ಮೆಸ್ಕಾಂ ಮನವಿ
ಸುದ್ದಿ ಕಣಜ.ಕಾಂ | SHIVAMOGGA CITY | 22 SEP 2022
ಶಿವಮೊಗ್ಗ: ನಗರ ವ್ಯಾಪ್ತಿಯ ಪ್ರದೇಶಗಳಲ್ಲಿ ಸೆಪ್ಟೆಂಬರ್ 23 ಮತ್ತು 24 ರಂದು ಬೆಳಗ್ಗೆಯಿಂದ ಸಂಜೆಯವರೆಗೆ ವಿದ್ಯುತ್ ವ್ಯತ್ಯಯ(Power cut)ವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಮೆಸ್ಕಾಂ (MESCOM)ಮನವಿ ಮಾಡಿದೆ.
READ | ದಸರಾ ಪ್ರಯುಕ್ತ ಶಿವಮೊಗ್ಗದ ನಾಲ್ಕು ರೈಲುಗಳಿಗೆ ಹೆಚ್ಚುವರಿ ಬೋಗಿ, ಯಾವ್ಯಾವ ರೈಲುಗಳಿಗೆ ಅನ್ವಯ?
ಎಲ್ಲೆಲ್ಲಿ ಪವರ್ ಕಟ್?
- ಆಲ್ಕೋಳ (Alkola) ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ (smart city) ಕಾಮಗಾರಿ ಇರುವುದರಿಂದ ಸೆ.23ರಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಕುವೆಂಪು ರಸ್ತೆ, ಶರಾವತಿ ನಗರ ಬಿ ಬ್ಲಾಕ್, ಆದಿಚುಂಚನಗಿರಿ ಸಮುದಾಯ ಭವನ, ಬಿ.ಎಸ್.ಎನ್.ಎಲ್.ಕಚೇರಿ ಮತ್ತು ವಸತಿ ಗೃಹಗಳು, ಯುನಿಟಿ ಆಸ್ಪತ್ರೆ, ಹಂದಿಗೊಲ್ಲರ ಬೀದಿ, ಶಿವಶಂಕರ್ ಗ್ಯಾರೇಜ್, ದೈವಜ್ಞ ಕಲ್ಯಾಣ ಮಂದಿರ, ಹೊಸಮನೆ ಹಾಗೂ ಸುತ್ತಮುತ್ತಲಿನ ಪ್ರದೇಶ.
- ಮೆಗ್ಗಾನ್ (Meggan) ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವುದರಿಂದ ಸೆ.23ರಂದು ಬೆಳಗ್ಗೆ 9.30ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಮೆಗ್ಗಾನ್ ಆಸ್ಪತ್ರೆ, ಸರ್ಕ್ಯೂಟ್ ಹೌಸ್, ಎಸ್.ಪಿ.ಕಚೇರಿ, ಪೊಲೀಸ್ ಠಾಣೆ, ಸಾಗರ ಮುಖ್ಯರಸ್ತೆ, ಅಶೋಕ್ ನಗರ, ಎ.ಆರ್.ಬಿ.ಕಾಲೋನಿ, ನಾಗರಾಜಪುರ ಬಡಾವಣೆ, ಹೊಸಮನೆ, ಜ್ಯೋತಿ ಗಾರ್ಡನ್, ದುರ್ಗಿಗುಡಿ, ಸವರ್ ಲೈನ್ ರಸ್ತೆ, ಎಲ್.ಐ.ಸಿ.ಕಚೇರಿ, ಮಿಷನ್ ಕಾಂಪೌಂಡ್, ಜೈಲ್ ಸರ್ಕಲ್, ವೀಣಾ ಶಾರದಾ ಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶ. - ಗಾಜನೂರು (Gajanur) ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವುದರಿಂದ ಸೆ.24ರಂದು ಬೆಳಗ್ಗೆ 9ರಿಂದ ಸಂಜೆ 6 ಗಂಡೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಗಾಜನೂರು ಡ್ಯಾಂ ಮತ್ತು ಕ್ಯಾಂಪ್, ಸಕ್ರೆಬೈಲು, ನವೋದಯ ಶಾಲೆ, ಶಿವಮೊಗ್ಗ ಕುಡಿಯುವ ನೀರಿನ ಸ್ಥಾವರ, ಹಾಲ ಲಕ್ಕವಳ್ಳಿ, ಕಡೆಕಲ್, ಯರಗನಾಳ್, ಕುಸ್ಕೂರು, ಸಿದ್ಧರಹಳ್ಳಿ, ಮಂಡೇನಕೊಪ್ಪ, ಶ್ರೀಕಂಠಪುರ, ವೀರಾಪುರ, ತಟ್ಟಿಕೆರೆ, ಹೊಸಕೊಪ್ಪ, ಇಂದಿರಾನಗರ ಹೊಸಹಳ್ಳಿ, ಮುಳ್ಕೆರೆ, ಆನೆಬಿಡಾರ, ತಿಮ್ಮಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶ.
Terror Link | ಶಂಕಿತ ಉಗ್ರರ ಬಂಧನ, ಇದುವರೆಗಿನ ಟಾಪ್ 7 ಬೆಳವಣಿಗೆಗಳೇನು, ಇಲ್ಲಿದೆ ಕಂಪ್ಲೀಟ್ ಮಾಹಿತಿ