Theft | ಗಾಂಧಿ ಬಜಾರ್ ಬಂಗಾರದಂಗಡಿಯಲ್ಲಿ ಅಸಲಿ ಚಿನ್ನ ಕದ್ದು ನಕಲಿ ಚಿನ್ನ ಇಟ್ಟರು, ಸಿಟಿ ಟಿವಿಯಲ್ಲಿ ದೃಶ್ಯ ಸೆರೆ

CRIME NEWS SK

 

 

HIGHLIGHTS

  • ಗಾಂಧಿ ಬಜಾರಿನ ಬಂಗಾರದ ಅಂಗಡಿಯಲ್ಲಿ ಅಂದಾಜು‌ ₹89 ಸಾವಿರ ಮೌಲ್ಯದ ಉಂಗುರ, ಕಿವಿಯೋಲೆ ಬೆಳ್ಳಂಬೆಳಗ್ಗೆ ಕಳವು
  • ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಕೈಚಳ, ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲು

ಸುದ್ದಿ ಕಣಜ.ಕಾಂ | DISTRICT | 16 SEP 2022
ಶಿವಮೊಗ್ಗ: ಗಾಂಧಿ ಬಜಾರಿನ ಬಂಗಾರದ ಅಂಗಡಿಯೊಂದರಲ್ಲಿ ಇಬ್ಬರು ಮಹಿಳೆಯರು ಹಾಗೂ ಒಬ್ಬ ಪುರುಷ ತನ್ನ ಕೈಚಳಕದ ಮೂಲಕ ಸಾವಿರಾರು ರೂಪಾಯಿ ಮೌಲ್ಯದ ಚಿನ್ನವನ್ನು ಕಳವು ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಬುರ್ಖಾ ಧರಿಸಿಕೊಂಡು ಬಂದಿದ್ದ ಇಬ್ಬರು ಮಹಿಳೆಯರು ಮಾಲೀಕನ ಗಮನ ಬೇರೆಡೆಗೆ ಸೆಳೆದು ಅಸಲಿ ಬಂಗಾರದ ಉಂಗುರ, ಕಿವಿಯೋಲೆಯ ಜಾಗದಲ್ಲಿ ನಕಲಿ ಬಂಗಾರದ ಆಭರಣಗಳನ್ನು ಇಟ್ಟಿದ್ದಾರೆ. ನಂತರ ಪರಿಶೀಲಿಸಿದಾಗ ಅವುಗಳು‌ ನಕಲಿ ಆಭರಣಗಳೆಂಬುವುದು ಗಮನಕ್ಕೆ‌ಬಂದಿದೆ.
ಸಿಸಿ ಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ
ಆಗಸ್ಟ್ 20ರಂದು ಅಂಗಡಿಗೆ ಆಗಮಿಸಿದ ಬುರ್ಖಾ ಧರಿಸಿದ್ದ ಇಬ್ಬರು ಮಹಿಳೆಯರು ಮತ್ತು ಪುರುಷ ಅಂದಾಜು ₹11 ಸಾವಿರ ಮೌಲ್ಯದ ಬಂಗಾರವನ್ನು ಖರೀದಿಸಿದ್ದಾರೆ. ಟ್ರೇನಲ್ಲಿ ಇಟ್ಟಿದ್ದ ಉಂಗುರ ಮತ್ತು ಕಿವಿಯೋಲೆಯ ಜಾಗಕ್ಕೆ ನಕಲಿ‌ ಬಂಗಾರದ ಆಭರಣಗಳನ್ನು ಇರಿಸಿದ್ದಾರೆ‌. ದೊಡ್ಡಪೇಟೆ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

https://suddikanaja.com/2021/03/10/bull-running-competition-in-sorab/

Leave a Reply

Your email address will not be published. Required fields are marked *

error: Content is protected !!