Cyber Crime | ವಿಮೆ ಪಾವತಿಗೂ ಮುನ್ನ ಹುಷಾರ್, ವಿಮೆ ಹೆಸರಿನಲ್ಲಿ ಲಕ್ಷಾಂತರ ಮೋಸ

Cyber crime

 

 

HIGHLIGHTS

  • ಖಾಸಗಿ ವಿಮೆ ಕಂಪೆನಿಯಲ್ಲಿ ಜೀವ ವಿಮೆ ಮಾಡಿದ್ದು ವ್ಯಕ್ತಿಗೆ ಅಧಿಕಾರಿಯ ಸೋಗಿನಲ್ಲಿ ಫೋನ್ ಮಾಡಿ ವಂಚನೆ
  • ಮೊದಲು 52,259.72 ರೂ, ನಂತರ 49,259.72 ರೂ. ಸೇರಿ ಒಟ್ಟು 1.01 ಲಕ್ಷ ರೂ. ಪಾವತಿ
  • ಮೋಸ ಹೋಗಿದ್ದು ಗಮನಕ್ಕೆ ಬಂದಿದ್ದೇ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ವ್ಯಕ್ತಿ

ಸುದ್ದಿ ಕಣಜ.ಕಾಂ | DISTRICT | 23 OCT 2022
ಶಿವಮೊಗ್ಗ(shivamogga): ಜೀವ ವಿಮೆ (Life insurance) ಪಾವತಿಗೂ ಮುನ್ನ ಎಚ್ಚರಿಕೆ ವಹಿಸಬೇಕು. ಯಾರೋ ಕರೆ ಮಾಡಿದ್ದರೆಂದು ಹಣ ಪಾವತಿದ್ದಲ್ಲಿ ಮೋಸ (fraud) ಹೋಗುವುದು ಗ್ಯಾರಂಟಿ.
ಇಂತಹದ್ದೇ ಒಂದು ಘಟನೆ ಶಿವಮೊಗ್ಗದಲ್ಲಿಯೂ ನಡೆದಿದೆ. ವಿಮೆ ಕಂಪೆನಿ (insurance company) ಅಧಿಕಾರಿಯ ಸೋಗಿನಲ್ಲಿ ಕರೆ ಮಾಡಿ 1.01 ಲಕ್ಷ ರೂಪಾಯಿ ಮೋಸ ಮಾಡಲಾಗಿದೆ.

ಆನ್‍ಲೈನ್ ಫ್ರಾಡ್ ಬಗ್ಗೆ ತಮ್ಮ ಸ್ವಂತ ಅನುಭವ ಹಂಚಿಕೊಂಡ ಸಂಸದ ಬಿ.ವೈ.ರಾಘವೇಂದ್ರ (VIDEO REPORT)

READ | ಟ್ರೇಡ್ ಲೈಸೆನ್ಸ್ ಗರಿಷ್ಠ ಅವಧಿ 5 ವರ್ಷ ನಿಗದಿಪಡಿಸಿದ ಸರ್ಕಾರ, ಇದರಿಂದ ವ್ಯಾಪಾರಸ್ಥರಿಗೇನು ಪ್ರಯೋಜನ?

ಮೋಸ ಹೋಗಿದ್ದು ಹೇಗೆ?
ನಗರದ ಕೆ.ಆರ್.ಪುರಂ (KR Puram) ನಿವಾಸಿ ಅಶಿಶ್ ಎಂಬುವವರೇ ಮೋಸ ಹೋದವರು. ಇವರು ಕಳೆದ ನಾಲ್ಕು ವರ್ಷಗಳಿಂದ ಜೀವ ವಿಮೆ ಪಾವತಿಸಿರಲಿಲ್ಲ. ಅಧಿಕಾರಿ ಎಂದು ಹೇಳಿಕೊಂಡು ಕರೆ ಮಾಡಿದ ವ್ಯಕ್ತಿಯೊಬ್ಬರು, ‘ಕಳೆದ ಎಂಟು ವರ್ಷಗಳಿಂದ ಜೀವ ವಿಮೆ ಪಾವತಿಸಿದ್ದೀರಾ, ಇನ್ನೆರಡು ವರ್ಷ ಹಣ ಪಾವತಿ ಮಾಡಿದರೆ ಮೆಚ್ಯೂರಿಟಿ ಹಣ ಕೈ ಸೇರುತ್ತದೆ’ ಎಂದು ಹೇಳಿ ನಂಬಿಸಿದ್ದಾನೆ. ಆತನ ಪುಸಲಾಯಿಸುವ ಮಾತುಗಳನ್ನು ನಂಬಿ ಅಶಿಶ್ ಅವರು ಹಣವನ್ನು ಆನ್ ಲೈನ್ ಮೂಲಕ ವರ್ಗಾಯಿಸಿದ್ದಾರೆ.
ಹಂತ ಹಂತವಾಗಿ ಒಟ್ಟು 1.01 ಲಕ್ಷ ಪಾವತಿ
ತಾಯಿ ಬ್ಯಾಂಕ್ ಖಾತೆ(account)ಯಿಂದ 52,259.72 ರೂಪಾಯಿ ಪಾವತಿಸಿದ್ದಾರೆ. ಈ ಹಣ ಪಾವತಿಸಿದ್ದೇ ಮತ್ತೊಬ್ಬ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದಾನೆ. ಶೇ.15ರಷ್ಟು ಜಿಎಸ್.ಟಿ. ಹಣ ಪಾವತಿಸಿ, ಇಲ್ಲದಿದ್ದರೆ ವಿಮೆ ಹಣದಲ್ಲಿ ಶೇ.30ರಷ್ಟು ಕಡಿತಗೊಂಡು ಹಣ ನೀಡಲಾಗುವುದು ಎಂದು ಹೇಳಿದ್ದಾನೆ.
ಇದರಿಂದ ಗಾಬರಿಗೆ ಒಳಗಾಗಿ ಮತ್ತೆ 49,259.72 ರೂಪಾಯಿ ಪಾವತಿ ಮಾಡಲಾಗಿದೆ. ನಂತರ ತಾನು ಮೋಸ ಹೋಗಿರುವುದು ಗಮನಕ್ಕೆ ಬಂದಿದೆ. ತಕ್ಷಣ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://suddikanaja.com/2022/10/19/shimoga-dc-meeting-with-crop-insurance-amd-agriculture-department-officials/

Leave a Reply

Your email address will not be published. Required fields are marked *

error: Content is protected !!