ಸುದ್ದಿ ಕಣಜ.ಕಾಂ | SHIMOGA CITY | 25 OCT 2022
ಶಿವಮೊಗ್ಗ(shivamogga): ತಾಳಗುಪ್ಪ(talaguppa)- ಶಿವಮೊಗ್ಗ (ರೈಲು ಸಂಖ್ಯೆ 07349) ರೈಲಿನಲ್ಲಿ 40-45 ವರ್ಷದ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು, ಗುರುತು ಪತ್ತೆಯಾಗಿಲ್ಲ.
READ | ವೆಂಕಟೇಶ ನಗರ ಕೊಲೆ ಪ್ರಕರಣಕ್ಕೆ ಟ್ವಿಸ್ಟ್, ವಿಚಾರಣೆ ವೇಳೆ ತಿಳಿದುಬಂದ ವಿಚಾರಗಳಿವು
ರೈಲಿನ ಸ್ಲೀಪರ್ ಕೋಚ್ (sleeper coach) 4ರಲ್ಲಿ ವ್ಯಕ್ತಿಯೊಬ್ಬರು ಪ್ರಜ್ಞಾಹೀನ (unconscious) ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಾಹಿತಿ ಲಭ್ಯವಾಗುತ್ತಿದ್ದಂತೆ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿದ್ದಾರೆ. ಆತ ಮೃತಪಟ್ಟಿರುವುದು ಗೊತ್ತಾಗಿದೆ. ಶವ(dead boday)ವನ್ನು ಮೆಗ್ಗಾನ್ ಆಸ್ಪತ್ರೆ(Meggan Hospital)ಯ ಶವಾಗಾರ(mortuary)ದಲ್ಲಿ ಇಟ್ಟಿದ್ದು, ಗುರುತು ಪತ್ತೆಯಾದರೆ, ರೈಲ್ವೆ ಪೊಲೀಸ್ ಇಲಾಖೆ 08182 222973, 9480802124ಗೆ ಸಂಪರ್ಕಿಸುವಂತೆ ತಿಳಿಸಲಾಗಿದೆ.ಮೃತ ವ್ಯಕ್ತಿಯ ಚಹರೆ
ಮೃತನ ಚಹರೆ ಪಟ್ಟಿಯ ವಿವರ
ಸುಮಾರು 5.3 ಅಡಿ ಎತ್ತರ, ಸಣಕಲು ದೇಹ, ಉದ್ದನೆ ಮುಖ, ನೀಳ ಮೂಗು, ಎಣ್ಣೆಗಂದು ಬಣ್ಣ, ತಲೆಯಲ್ಲಿ ಸುಮಾರು 2 ಇಂಚು ಉದ್ದದ ಕಪ್ಪು ಕೂದಲು ಬಿಟ್ಟಿರುತ್ತಾನೆ. 2 ಇಂಚು ಕಪ್ಪು ಮೀಸೆ ಗಡ್ಡ ಇವೆ. ಬಲ ಗೈ ರಟ್ಟೆಯ ಮೇಲೆ ಚೇಳನಾಕಾರ ಹಚ್ಚೆ ಇದೆ. ಅಂಗೈ ಮೇಲ್ಬಾಗದಲ್ಲಿ ಇಂಗ್ಲಿಷ್ ಅಕ್ಷರದಲ್ಲಿ P & L ಎಂದು ಹೃದಯಾಕಾರದ ಚಿತ್ರದಲ್ಲಿ ಹಚ್ಚೆ ಹಾಕಿಸಿಕೊಂಡಿರುತ್ತಾನೆ. ಒಂದು ಬಳಿ ಬಣ್ಣದ ಕಪ್ಪು ಕೆಂಪು ಚೌಕಾರಾದ ಚಿತ್ರವಿರುವ ಹರಿದ ಬೆಡ್ ಶೀಟ್ ಅನ್ನು ಸೊಂಟಕ್ಕೆ ಸುತ್ತಿಕೊಂಡಿರುತ್ತಾನೆ.
https://suddikanaja.com/2022/10/25/deepawali-festival-special-train-from-shivamogga-to-yashwanathpur-south-western-railway-requsted-to-use-fecility/