Important Notice | ಶಿವಮೊಗ್ಗದಲ್ಲಿ ಜಾನುವಾರು ಸಂತೆ, ಜಾತ್ರೆ, ಸಾಗಾಣಿಕೆ ನಿಷೇಧ, ಕಾರಣವೇನು?

cattle

 

 

HIGHLIGHTS

  • ಜಾನುವಾರುಗಳ ಚರ್ಮಗಂಟು ರೋಗ ತಡೆಗೆ ಜಿಲ್ಲೆಯಾದ್ಯಂತ ಜಾನುವಾರು ಸಂತೆ, ಜಾನುವಾರು ಜಾತ್ರೆ, ಜಾನುವಾರು ಸಾಗಾಣಿಕೆಗೆ ಬ್ರೇಕ್
  • ಜಿಲ್ಲೆಯಲ್ಲಿನ 58 ಗ್ರಾಮಗಳ ಸುಮಾರು 626 ಜಾನುವಾರುಗಳಲ್ಲಿ ಈ ರೋಗವು ಕಂಡುಬಂದಿದ್ದು, 6 ಜಾನುವಾರುಗಳು ಮರಣ

ಸುದ್ದಿ ಕಣಜ.ಕಾಂ | DISTRICT | 08 OCT 2022
ಶಿವಮೊಗ್ಗ(Shivamogga): ಜಾನುವಾರುಗಳಿಗೆ ಚರ್ಮಗಂಟು ರೋಗ (Lumpy skin disease) ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಜಾನುವಾರು ಸಂತೆ, ಜಾನುವಾರು ಜಾತ್ರೆ ಮತ್ತು ಜಾನುವಾರು ಸಾಗಾಣಿಕೆ ನಿಷೇಧಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಶಿವಮೊಗ್ಗ, ಭದ್ರಾವತಿ ಹಾಗೂ ಸಾಗರ ತಾಲ್ಲೂಕುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ರೋಗ ವ್ಯಾಪಕವಾಗಿ ಹರಡುವ ಸಾಧ್ಯತೆ ಇರುತ್ತದೆ.

READ | ಸಾಗರದಲ್ಲಿ ಹಾರಿದ್ದು ಪಾಕ್ ಧ್ವಜವಲ್ಲ, ವೈರಲ್ ವಿಡಿಯೋಗೆ ಪೊಲೀಸ್ ಸ್ಪಷ್ಟನೆ

ಜಿಲ್ಲೆಯಲ್ಲಿರುವ ಜಾನುವಾರುಗಳಿಗೆ ರೋಗದ ಪರೀಕ್ಷೆಯನ್ನು ಶಿವಮೊಗ್ಗದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ಮಾಡಲು ಸೂಕ್ತ ವ್ಯವಸ್ಥೆ ಇರುತ್ತದೆ. ಜಿಲ್ಲೆಯ ಪಶುಪಾಲನಾ ಇಲಾಖೆಯ ಎಲ್ಲ ಅಧಿಕಾರಿ, ತಾಂತ್ರಿಕ ಸಿಬ್ಬಂದಿಯವರು ಸೂಕ್ತ ಚಿಕಿತ್ಸೆ ಹಾಗೂ ನಿಯಂತ್ರಣ ಮಾಡಲು ಶ್ರಮಿಸುತ್ತಿದ್ದಾರೆ.
ಚರ್ಮಗಂಟು ರೋಗಕ್ಕೆ6 ಸಾವು
ಈಗಾಗಲೇ ಜಿಲ್ಲೆಯಲ್ಲಿನ 58 ಗ್ರಾಮಗಳ ಸುಮಾರು 626 ಜಾನುವಾರುಗಳಲ್ಲಿ ಈ ರೋಗವು ಕಂಡುಬಂದಿದ್ದು, 6 ಜಾನುವಾರುಗಳು ಮರಣ ಹೊಂದಿರುತ್ತವೆ.
ರೋಗವು ವ್ಯಾಪಕವಾಗಿ ಹರಡುತ್ತಿರುವುದರಿಂದ ರೋಗ ಹರಡುವಿಕೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕುವ ಕಾರ್ಯ ಕೈಗೊಳ್ಳಲು ಈಗಾಗಲೇ ಒಂದು ಲಕ್ಷ ಲಸಿಕೆ ಸರಬರಾಜು ಮಾಡಲು ಬೇಡಿಕೆ ಸಲ್ಲಿಸಲಾಗಿದೆ.
ಚರ್ಮಗಂಟು ರೋಗ ಹೇಗೆ ಹರಡುತ್ತದೆ?
ಚರ್ಮಗಂಟು ರೋಗವು ಕ್ಯಾಪ್ರಿಪಾಕ್ಸ್ ವೈರಸ್‌ನಿಂದ ಬರುತ್ತಿದ್ದು, ಮುಖ್ಯವಾಗಿ ಸೂಳೆ, ನೊಣ ಮತ್ತು ಉಣ್ಣೆ ಇತ್ಯಾದಿ ಪರೋಪಜೀವಿಗಳು ಕಚ್ಚುವ ಕಾರಣದಿಂದ ಹರಡುತ್ತಲಿದೆ‌. ಶಿವಮೊಗ್ಗ ಜಿಲ್ಲಾಧಿಕಾರಿ ಅವರ ಆದೇಶದಂತೆ ಈ ರೋಗವನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ಜಿಲ್ಲೆಯಾದ್ಯಂತ ಅಕ್ಟೋಬರ್ 6ರಿಂದ 31ರ ವರೆಗೆ ಜಾನುವಾರು ಸಂತೆ, ಜಾನುವಾರು ಜಾತ್ರೆ ಮತ್ತು ಜಾನುವಾರು ಸಾಗಾಣಿಕ ಮಾಡುವುದನ್ನು ಸಂಪೂರ್ಣವಾಗಿ ತಡೆಗಟ್ಟಲು Karnataka Animal Diseases (Control) Act 1961 ಮತ್ತು ಸಿಆರ್‌ಪಿಸಿ ಕಲಂ 144 ರಡಿ ನಿಷೇಧಿಸಿ ಆದೇಶಿಸಲಾಗಿದೆ ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ಶಿವಯೋಗಿ ಬಿ.ಯಲಿ ತಿಳಿಸಿದ್ದಾರೆ.

https://suddikanaja.com/2021/07/17/anti-cow-slaughter-bill-strict-implementation/

Leave a Reply

Your email address will not be published. Required fields are marked *

error: Content is protected !!