ಸುದ್ದಿ ಕಣಜ.ಕಾಂ | DISTRICT | 02 OCT 2022
ಶಿವಮೊಗ್ಗ (shivamogga): ಕೋಟೆ (Kote) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಪ್ಟೆಂಬತ್ 30 ರಂದು ಬಿ.ಎಚ್.ರಸ್ತೆ(BH Road)ಯ ಮೇಲೆ ಸುಮಾರು 35 ವಯಸ್ಸಿನ ವ್ಯಕ್ತಿಯು ಅಸ್ವಸ್ಥನಾಗಿ ಮೃತಪಟ್ಟಿದ್ದು, ಶವನ್ನು ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
ಮೃತ ವ್ಯಕ್ತಿಯು ಸುಮಾರು 5 ಅಡಿ 6 ಇಂಚು ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾನೆ. ತಲೆಯಲ್ಲಿ 2 ಇಂಚು ಉದ್ದದ ಕಪ್ಪು ಕೂದಲು ಇರುತ್ತದೆ. ಹಸಿರು ಬಣ್ಣದ ಶರ್ಟ್ ಮತ್ತು ಕಾಫಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಎದೆಯ ಕೆಳಭಾಗದಲ್ಲಿ ಕಪ್ಪುಮಚ್ಚೆ ಇರುತ್ತದೆ. ಈ ಮೃತ ವ್ಯಕ್ತಿಗಳ ವಾರಸುದಾರರು ಯಾರಾದರೂ ಇದ್ದಲ್ಲಿ ಕೋಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.