Accused Arrest | ಭದ್ರಾವತಿಯಲ್ಲಿ ದೊಣ್ಣೆಯಿಂದ‌ ಹೊಡೆದು ಕೊಲೆ ಮಾಡಿದ ಇಬ್ಬರ ಬಂಧನ

arrest

 

 

ಸುದ್ದಿ ಕಣಜ.ಕಾಂ | TALUK | 26 OCT 2022
ಭದ್ರಾವತಿ (Bhadravathi): ಸಿ.ಎನ್.ರಸ್ತೆಯ ಎಪಿಎಂಸಿ ಆವರಣದಲ್ಲಿ ಮ್ಯಾಮ್ಕೋಸ್ ಕಟ್ಟಡ ಹತ್ತಿರ ಖಾಲಿ ಜಾಗದಲ್ಲಿ ವ್ಯಕ್ತಿಯೊಬ್ಬನಿಗೆ ಬಿದಿರಿನ‌ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದ ಪ್ರಕರಣ ಸಂಬಂಧ ಇಬ್ಬರನ್ನು ಬುಧವಾರ ಬಂಧಿಸಲಾಗಿದೆ.

READ | ಭದ್ರಾವತಿಯಲ್ಲಿ ದರೋಡೆ ಗ್ಯಾಂಗ್ ಅರೆಸ್ಟ್, ಸಿಬ್ಬಂದಿ ಕಾರ್ಯಕ್ಕೆ ಭೇಷ್ ಎಂದ ಎಸ್ಪಿ

ಭದ್ರಾವತಿಯ ಕಾಚಗೊಂಡನಹಳ್ಳಿ ಗ್ರಾಮದ ಕುಶಾಲ್ ಕುಮಾರ್(35), ಹುತ್ತಾ ಕಾಲೋನಿಯ ಸೋಮಶೇಖರ್ ಅಲಿಯಾಸ್ ಪುಟ್ಟ ಅಲಿಯಾಸ್ ಕಪ್ಪೆ (33) ಬಂಧಿತರು.
ಆರೋಪಿಗಳಿಗೂ ಮೃತ ರೂಪೇಶ್ ಕುಮಾರ್ ಎಂಬಾನಿಗೂ ಈ ಹಿಂದೆ ಇದ್ದ ಹಳೇ ದ್ವೇಷದ ವಿಚಾರದಲ್ಲಿ ಗಲಾಟೆಯಾಗಿದ್ದು, ರೂಪೇಶ್’ಗೆ ಬಿದಿರಿನ ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿತ್ತು.
ಪ್ರಕರಣ ಬೇಧಿಸಿದ ವಿಶೇಷ ತಂಡ
ಸೋಮವಾರ ರೂಪೇಶ್ ಎಂಬಾತನ ಕೊಲೆ ಮಾಡಲಾಗಿದ್ದು, ಆರೋಪಿಗಳ ಪತ್ತೆಗಾಗಿ ಭದ್ರಾವತಿ ಟೌನ್ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಹಳೆನಗರ ಪೊಲೀಸ್ ಠಾಣೆ ಪಿಎಸ್ಐ ಮತ್ತು ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು. ಕಾರ್ಯಾಚರಣೆ ಕೈಗೊಂಡ ತಂಡ ಆರೋಪಿಗಳನ್ನು ಬಂಧಿಸಿದೆ. ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://suddikanaja.com/2022/10/26/police-shot-the-accused-in-defense-at-shimoga/

Leave a Reply

Your email address will not be published. Required fields are marked *

error: Content is protected !!