Good News | ಅಡಿಕೆ‌ ಬೆಳೆಯಲ್ಲಿನ ರೋಗಗಳ ಸಂಶೋಧನೆಗೆ ಕೇಂದ್ರದಿಂದ ವಿಜ್ಞಾನಿಗಳ ಸಮಿತಿ‌ ರಚನೆ, ಸಮಿತಿಯಲ್ಲಿ ಯಾರೆಲ್ಲ‌ ಇದ್ದಾರೆ?

Green arecanut

 

 

HIGHLIGHTS

  • ಅಡಿಕೆಯಲ್ಲಿ ಎಲೆ ಚುಕ್ಕೆ ರೋಗ(LSD), ಹಳದಿ ಎಲೆ ರೋಗ(YLD)ಗಳ ಸಂಶೋಧನೆಗೆ ಏಳು ಜನ ವಿಜ್ಞಾನಿಗಳನ್ನು ಒಳಗೊಂಡ ಸಮಿತಿ ರಚನೆ
  • ಬಿ.ಎಸ್.ಯಡಿಯೂರಪ್ಪ ನೇತೃತ್ವದ ನಿಯೋಗ ಭೇಟಿ ಬೆನ್ನಲ್ಲೇ ಆದೇಶ ಹೊರಡಿಸಿದ ICAR- ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ

ಸುದ್ದಿ ಕಣಜ.ಕಾಂ | KARNATAKA | 20 OCT 2022
ಶಿವಮೊಗ್ಗ(Shivamogga): ಅಂತೂ ಕೇಂದ್ರ ಸರ್ಕಾರ‌ ಬೇಡಿಕೆಗಳಿಗೆ ಸ್ಪಂದನೆ ನೀಡಿದೆ. ಅಡಿಕೆ ಬೆಳೆಗಾರರ ಪಾಲಿಗೆ ದೊಡ್ಡ ತಲೆನೋವಾಗಿ ಕಾಡುತ್ತಿರುವ ಎಲೆ ಚುಕ್ಕೆ ರೋಗ, ಹಳದಿ ಎಲೆ ರೋಗ ಹೀಗೆ ವಿವಿಧ ಕಾಯಿಲೆಗಳ ಬಗ್ಗೆ ವೈಜ್ಞಾನಿಕ ಸಂಶೋಧನೆ ಕೈಗೊಳ್ಳಲು ವೈಜ್ಞಾನಿಕ ಸಮಿತಿ (Scientific committee)ಯನ್ನು ‌ರಚಿಸಲಾಗಿದೆ.

READ | ದೀಪಾವಳಿ ಪ್ರಯುಕ್ತ ಶಿವಮೊಗ್ಗ-ಯಶವಂತಪುರ ಸೇರಿದಂತೆ ರಾಜ್ಯದ ವಿವಿಧೆಡೆ ಸ್ಪೆಷಲ್ ರೈಲು, ವೇಳಾಪಟ್ಟಿ ಇಲ್ಲಿದೆ

ಸಮಿತಿಯಲ್ಲಿ ಯಾರೆಲ್ಲ ಇದ್ದಾರೆ?
ಸಮಿತಿಯಲ್ಲಿ ಏಳು ಜನ ವಿಜ್ಞಾನಿಗಳಿದ್ದಾರೆ. ಅದರಲ್ಲಿ ಒಬ್ಬರು ಶಿವಮೊಗ್ಗದವರಿದ್ದು, ಉಳಿದವರು ದಕ್ಷಿಣ ಕನ್ನಡ, ಕಾಸರಗೋಡು ವಿವಿಧೆಡೆಯವರಾಗಿದ್ದಾರೆ. ಕಾಸರಗೋಡಿ( kasaragodu) ನಲ್ಲಿರುವ ಐಸಿಎಆರ್‌(ICAR) – ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ(ಸಿಪಿಸಿಆರ್‌ಐ-CPCRI)ಯು ಆದೇಶಿಸಿದೆ.

  1. Dr Anitha Karun, Director, ICAR-CPCRI, Kasaragod
  2. Dr Homey Cherian, Director, DASD, Calicut
  3. Dr Femina. Deputy Director, DASD, Calicut
  4. Dr Ravi Bhat. Acting Head, Division of Crop Production, ICAR-CPCRI, Kasaragod
  5. Dr M. Wali, Director of Research, KSNUAHS, Shivamogga
  6. Dr HR Naik, Deputy Director of Horticulture, Dakshina Kannada Dist. Karnataka
  7. Dr Vinayaka Hegde, Acting Head, Division of Crop Protection, ICAR-CPCRI, Kasaragod

ಕೇಂದ್ರ ಸರ್ಕಾರದ ತ್ವರಿತ ಸ್ಪಂದನೆಗೆ ಅಭಿನಂದನೆ
ಕೇಂದ್ರ ಸರ್ಕಾರದ ಕೃಷಿ, ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮಾರ್ ಅವರು ಕರ್ನಾಟಕದಲ್ಲಿ ಮಲೆನಾಡ ಭಾಗದಲ್ಲಿ ಕಾಣಿಸಿಕೊಂಡ ಎಲೆ ಚುಕ್ಕೆ ರೋಗದ (YLD) ಅಧ್ಯಯನ ಮತ್ತು ಸಮಸ್ಯೆಯನ್ನು ಪರಿಹರಿಸಲು ICAR ಗೆ ( Central Plantation Crops Research Institute ) ನಿರ್ದೇಶಿಸಿದ್ದು, ಅದರನ್ವಯ ವೈಜ್ಞಾನಿಕ ಸಮಿತಿಯನ್ನು ರಚಿಸಲಾಗಿದೆ. ಅಡಿಕೆಯ ಎಲೆ ಚುಕ್ಕೆಯನ್ನು (YLD) ಪರಿಹರಿಸಲು ಸಮಿತಿಯು ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸುತ್ತದೆ. ತ್ವರಿತ ಪ್ರತಿಕ್ರಿಯೆಗಾಗಿ ಮಲೆನಾಡಿನ ರೈತರ ಪರವಾಗಿ ಕೇಂದ್ರ ಸಚಿವರಿಗೆ ಸಂಸದ ಬಿ.ವೈ‌.ರಾಘವೇಂದ್ರ ಧನ್ಯವಾದಗಳನ್ನು ತಿಳಿಸಿದ್ದಾರೆ.

https://suddikanaja.com/2022/10/19/bs-yediyurappa-delegation-meat-central-minister-at-newdelhi/

Leave a Reply

Your email address will not be published. Required fields are marked *

error: Content is protected !!