MESCOM | ಶಿವಮೊಗ್ಗದಲ್ಲಿ‌ ಐದನೇ ವಿದ್ಯುತ್ ಅದಾಲತ್, ಎಲ್ಲೆಲ್ಲಿ ನಡೆಯಲಿದೆ

MESCOM

 

 

ಸುದ್ದಿ ಕಣಜ.ಕಾಂ | DISTRICT | 12 OCT 2022
ಶಿವಮೊಗ್ಗ(Shivamogga): ಅಕ್ಟೋಬರ್ 15 ರಂದು ಬೆಳಗ್ಗೆ 10 ಗಂಟೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಐದನೇ ವಿದ್ಯುತ್ ಅದಾಲತ್ (adalat) ನಡೆಯಲಿದೆ.
ತಾಲ್ಲೂಕಿನ ತಮ್ಮಡಿಹಳ್ಳಿ, ಗಾಜನೂರು, ತೀರ್ಥಹಳ್ಳಿ ತಾಲ್ಲೂಕಿನ ಮಳಲಿಮಕ್ಕಿ, ತೀರ್ಥಮತ್ತೂರು, ಭದ್ರಾವತಿ ತಾಲ್ಲೂಕಿನ ಆದ್ರಿಹಳ್ಳಿ, ಬಾಬಳ್ಳಿ, ಸಾಗರ ತಾಲ್ಲೂಕಿನ ಪಡವಗೋಡು, ಕೋಳಚಗಾರು, ಹೊಸನಗರ ತಾಲ್ಲೂಕಿನ ನಾಗೋಡಿ, ಸೊರಬ ತಾಲ್ಲೂಕಿನ ಹೆಗ್ಗೋಡು, ಶಿಕಾರಿಪುರ ತಾಲ್ಲೂಕಿನ ಕಿಟ್ಟದಹಳ್ಳಿ, ಮಲ್ಲೇನಹಳ್ಳಿ, ದೇವಿಕೆರೆ ಗ್ರಾಮಗಳಲ್ಲಿ ವಿದ್ಯುತ್ ಅದಾಲತ್ ನಡೆಯಲಿದ್ದು ಮೆಸ್ಕಾಂನ ಹಿರಿಯ ಅಧಿಕಾರಿಗಳು ಭೇಟಿ ನೀಡಲಿದ್ದು, ಗ್ರಾಹಕರು ತಮ್ಮ ಸಮಸ್ಯೆಗಳನ್ನು ಅದಾಲತ್ ಮೂಲಕ ಪರಿಹರಿಸಿಕೊಳ್ಳಬಹುದೆಂದು ಮೆಸ್ಕಾಂ (mescom) ಪ್ರಕಟಣೆ ತಿಳಿಸಿದೆ.

READ | ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಮತ್ತೊಮ್ಮೆ ಕುವೆಂಪು ವಿವಿ ಪ್ರಾಧ್ಯಾಪಕರು

ಅ.17ರಂದು‌ ಜನಸಂಪರ್ಕ ಸಭೆ
ಮೆಸ್ಕಾಂ ಹೊಸನಗರ (hosanagar) ಉಪ ವಿಭಾಗ ಕಚೇರಿಯಲ್ಲಿ ಅ.17 ರ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ಹಾಗೂ ತೀರ್ಥಹಳ್ಳಿ (thirthahalli) ಉಪ ವಿಭಾಗ ಕಚೇರಿಯಲ್ಲಿ ಅ.20 ರ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ಜನ ಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದೆ.
ಈ ಸಭೆಯಲ್ಲಿ ಮೆಸ್ಕಾಂ ಅಧಿಕಾರಿಗಳು ಭಾಗವಹಿಸಲಿದ್ದು ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸಲಾಗುವುದು. ಆದ್ದರಿಂದ ಗ್ರಾಹಕರು ಹಾಜರಾಗಿ ತಮ್ಮ ಅಹವಾಲುಗಳಿದ್ದಲ್ಲಿ ಸಲ್ಲಿಸಿ ಈ ಸಭೆಗಳ ಸದುಪಯೋಗ ಪಡೆಯುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

https://suddikanaja.com/2022/10/11/chain-link-fraud-in-shivamogga/

Leave a Reply

Your email address will not be published. Required fields are marked *

error: Content is protected !!