Skill Competition | ವಿಶ್ವ ಕೌಶಲ್ಯ ಸ್ಪರ್ಧೆ 2024, ಯಾರೆಲ್ಲ ಅರ್ಜಿ‌ ಸಲ್ಲಿಸಬಹುದು?

Public Notice

 

 

ಸುದ್ದಿ ಕಣಜ.ಕಾಂ‌| DISTRICT | 30 OCT 2022
ಶಿವಮೊಗ್ಗ(Shivamogga): ಕೌಶಲ್ಯ ಅಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಆಯೋಜಿಸಿರುವ ವಿಶ್ವ ಕೌಶಲ್ಯ ಸ್ಪರ್ಧೆ-2024 ಹಾಗೂ ಇಂಡಿಯಾ ಸ್ಕಿಲ್ ಕಾಂಪಿಟಿಷನ್ ಕರ್ನಾಟಕ 2024 ರ ವಿವಿಧ ಕೌಶಲ್ಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

READ | ಸಾವಿನಲ್ಲೂ ಸಾರ್ಥಕತೆ ಮೆರೆದ ಏಳು ವರ್ಷದ ಬಾಲಕ

17 ರಿಂದ 20 ವರ್ಷದೊಳಗಿನ ಯುವಕ-ಯುವತಿಯರು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು, ಅಭ್ಯರ್ಥಿಗಳು ಕೌಶಲ್ಯ ಕರ್ನಾಟಕ ಜಾಲತಾಣ https://www.kaushalkar.com/app/world-skill-registration ಇಲ್ಲಿ ನೋಂದಾಯಿಸಿಕೊಳ್ಳಬೇಕು. ಮತ್ತು ಸ್ಕಿಲ್ ವಿಡಿಯೋವನ್ನು ಈ ಲಿಂಕ್‍ನಲ್ಲಿ ನವೆಂಬರ್ 15 ರೊಳಗೆ ಅಪ್‍ಲೋಡ್ ಮಾಡಬೇಕು. ಹೆಚ್ಚಿನ ಮಾಹಿತಿಗೆ https://www.kaushalkar.com ಅಥವಾ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಕಚೇರಿ.ನಂ 303/528, ಶಾಂತಲ ಟವರ್ಸ್, 2ನೇ ಮಹಡಿ, 3ನೇ ಅಡ್ಡರಸ್ತೆ, ನೆಹರೂ ರಸ್ತೆ, ಗಾರ್ಡನ್ ಏರಿಯಾ, ಶಿವಮೊಗ್ಗ ಮೊ.ಸಂ: 9019485688, 8197176710 ಅನ್ನು ಸಂಪರ್ಕಿಸಬಹುದೆಂದು ಕೌಶಲ್ಯಾಭಿವೃದ್ದಿ ಅಧಿಕಾರಿ ಎಚ್.ಎಂ.ಸುರೇಶ್ ತಿಳಿಸಿದ್ದಾರೆ‌.

https://suddikanaja.com/2022/10/29/kpcc-president-dk-shivakumar-furious-reaction-on-operation-lotus-at-shimoga/

Leave a Reply

Your email address will not be published. Required fields are marked *

error: Content is protected !!